Saba Karim: 'ಭಾರತ ತಂಡಕ್ಕೆ ಇಬ್ಬರು‌ ಧೋನಿ ಸಿಗಲಿದ್ದಾರಂತೆ'

ಭಾರತ ತಂಡದ ಮಾಜಿ ವಿಕೆಟ್‌ಕೀಪರ್‌ ಸಾಬಾ ಕರೀಮ್‌ ಹೇಳಿಕೊಂಡಿದ್ದಾರೆ.

Last Updated : Mar 16, 2021, 04:42 PM IST
  • ಟೀಮ್ ಇಂಡಿಯಾದಲ್ಲಿ ಇಬ್ಬರು ಯುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ಗಳು ಒಟ್ಟಿಗೆ ಆಡುತ್ತಿರುವುದು ಬಹಳ ಸಂತಸ ನೀಡಿದೆ.
  • ಭಾರತ ತಂಡದ ಮಾಜಿ ವಿಕೆಟ್‌ಕೀಪರ್‌ ಸಾಬಾ ಕರೀಮ್‌ ಹೇಳಿಕೊಂಡಿದ್ದಾರೆ.
  • ಇಬ್ಬರೂ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ಗಳು ಭಾರತ ತಂಡದ ಪರ ದೀರ್ಘ ಕಾಲದವರೆಗೆ ಆಡಲಿ ಎಂದು ಹಾರೈಸಿದ್ದಾರೆ.
Saba Karim: 'ಭಾರತ ತಂಡಕ್ಕೆ ಇಬ್ಬರು‌ ಧೋನಿ ಸಿಗಲಿದ್ದಾರಂತೆ' title=

ನವದೆಹಲಿ: ಟೀಮ್ ಇಂಡಿಯಾದಲ್ಲಿ ಇಬ್ಬರು ಯುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ಗಳು ಒಟ್ಟಿಗೆ ಆಡುತ್ತಿರುವುದು ಬಹಳ ಸಂತಸ ನೀಡಿದೆ ಎಂದು

ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ(Team India) 7 ವಿಕೆಟ್‌ಗಳ ಜಯ ದಾಖಲಿಸಿ ಸರಣಿಯಲ್ಲಿ 1-1 ಅಂತರದ ಸಮಬಲ ತಂದುಕೊಂಡಿತು. ಈ ಗೆಲುವಿಗೆ ಭಾರತ ತಂಡದ ಮಾಜಿ ವಿಕೆಟ್‌ಕೀಪರ್‌ ಸಾಬಾ ಕರೀಮ್‌ ಹೇಳಿಕೊಂಡಿದ್ದಾರೆ.ತಂಡದಲ್ಲಿದ್ದ ಇಬ್ಬರು ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ಗಳಾದ ಇಶಾನ್‌ ಕಿಶನ್ ಮತ್ತು ರಿಷಭ್ ಪಂತ್‌ ಮಹತ್ವದ ಪಾತ್ರ ನಿಭಾಯಿಸಿದ್ದರು.

Ind vs Eng: ವಿಜಯದ ನಂತರ ಭಾರತಕ್ಕೆ ಕಹಿ ಸುದ್ದಿ, Team India ವಿರುದ್ಧ ಕ್ರಮ

ಈ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಜಾರ್ಖಂಡ್‌ ಮೂಲದ ಆಟಗಾರ ಇಶಾನ್‌ ಕಿಶನ್(Ishan Kishan)‌, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು 32 ಎಸೆತಗಳಲ್ಲಿ 56 ರನ್‌ ಸಿಡಿಸಿ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. ರಿಷಭ್ ಪಂತ್‌ ಕೂಡ ಸ್ಫೋಟ ಬ್ಯಾಟಿಂಗ್‌ ನಡೆಸಿ 13 ಎಸೆತಗಳಲ್ಲಿ 26 ರನ್‌ ಚೆಚ್ಚಿದರು.

ಭಾರತದ ವೇಗಿ ಜಸ್ಪ್ರೀತ್ ಬುಮ್ರಾಗೆ ಕಂಕಣ ಭಾಗ್ಯ...!

ಈ ಬಗ್ಗೆ ಮಾತನಾಡಿರುವ ಸಾಬಾ ಕರೀಮ್(Saba Karim), ಇಬ್ಬರೂ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ಗಳು ಭಾರತ ತಂಡದ ಪರ ದೀರ್ಘ ಕಾಲದವರೆಗೆ ಆಡಲಿ ಎಂದು ಹಾರೈಸಿದ್ದಾರೆ. ಅಷ್ಟೇ ಅಲ್ಲದೆ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳ ಆಟ ಮಾಜಿ ನಾಯಕ ಎಂಎಸ್‌ ಧೋನಿ ಅವರನ್ನು ನೆನಪಿಗೆ ಬರುವಂತೆ ಮಾಡುತ್ತಿದೆ ಎಂದಿದ್ದಾರೆ. ಇದು ಹೀಗೇ ಮುಂದುವರಿದರೆ ಭವಿಷ್ಯದಲ್ಲಿ ಭಾರತ ತಂಡಕ್ಕೆ ಇಬ್ಬರು ಧೋನಿ ಸಿಕ್ಕಂತ್ತಾಗುತ್ತದೆ ಎಂದು ಹೇಳಿದ್ದಾರೆ.

T20 ಇಂಟರ್‌ನ್ಯಾಷನಲ್‌ನಲ್ಲಿ ಇತಿಹಾಸ ಸೃಷ್ಟಿಸಿದ Virat Kohli

"ಇಶಾನ್‌ ಕಿಶನ್‌ ಕಳೆದ ಐಪಿಎಲ್‌ನಲ್ಲಿ 30 ಸಿಕ್ಸರ್‌ ಬಾರಿಸಿದ್ದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳಲ್ಲಿ ಸಿಕ್ಸರ್‌ ಬಾರಿಸುವ ಸಾಮರ್ಥ್ಯವಿದೆ. ಭಾರತ ತಂಡಕ್ಕೆ ಇದರ ಅಗತ್ಯವಿದೆ. ಟಿ20 ಕ್ರಿಕೆಟ್‌ ವಿಶ್ವಕಪ್‌(World Cup) ಅನುಗುಣವಾಗಿ ಈ ಇಬ್ಬರೂ ಆಟಗಾರರು ಭಾರತ ತಂಡದಲ್ಲಿ ಇರುವುದು ಅತ್ಯುತ್ತಮ ಬೆಳವಣಿಗೆ. ಇಬ್ಬರಿಗೂ ಹೆಚ್ಚು ಹೆಚ್ಚು ಅವಕಾಶಗಳು ಸಿಗಲಿ. ಆತ್ಮವಿಶ್ವಾಸದಲ್ಲಿ ಮುನ್ನಡೆಯಲಿ," ಎಂದು ಕರೀಮ್ ಹಾರೈಸಿದ್ದಾರೆ.

India vs England, 2nd T20I: ಕೊಹ್ಲಿ ,ಇಶಾಂತ್ ಕಿಶನ್ ಸ್ಪೋಟಕ ಬ್ಯಾಟಿಂಗ್ ನಿಂದಾಗಿ ಭಾರತಕ್ಕೆ ಗೆಲುವು

ಐಪಿಎಲ್‌ 2020 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್(Mumbai Indians)‌ ಪರ 500ಕ್ಕೂ ಹೆಚ್ಚು ರನ್‌ಗಳಿಸಿ ಗರಿಷ್ಠ ರನ್‌ ಸ್ಕೋರರ್‌ ಎನಿಸಿದ್ದ ಇಶಾನ್‌ ಕಿಶನ್‌, ಅತ್ಯಧಿಕ ಸಿಕ್ಸರ್‌ ಬಾರಿಸಿದ ಬ್ಯಾಟ್ಸ್‌ಮನ್‌ ಕೂಡ ಎನಿಸಿಕೊಂಡಿದ್ದರು. ಈಗ ಭಾರತ ತಂಡಕ್ಕೆ ಪದಾರ್ಪಣೆಯ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮುಂಬರು ಟಿ20 ಕ್ರಿಕೆಟ್‌ ವಿಶ್ವಕಪ್‌ಗೆ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವ ಕಡೆಗೆ ಎದುರು ನೋಡುತ್ತಿದ್ದಾರೆ. ಇದೇ ವರ್ಷ ಸೆಪ್ಟೆಂಬರ್‌-ಅಕ್ಟೋಬರ್‌ ಅವಧಿಯಲ್ಲಿ ಭಾರತ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿದೆ.

Vijay Hazare Trophy Final: 4ನೇ ಬಾರಿಗೆ 'ವಿಜಯ್ ಹಜಾರೆ ಟ್ರೋಫಿ' ಗೆದ್ದ ಮುಂಬೈ ತಂಡ!

"ಭಾರತ ತಂಡಕ್ಕೆ ಇಬ್ಬರು ಧೋನಿ(MS Dhoni) ಸಿಗುತ್ತಾರೆ ಎಂದರೆ ಅದಕ್ಕಿಂತಲೂ ದೊಡ್ಡ ಸಂಗತಿ ಮತ್ತೊಂದು ಇರಲಾರದು. ಈ ಇಬ್ಬರಲ್ಲಿನ ಭಯಮುಕ್ತ ಆಟ ಕಂಡರೆ ಅವರಿಗೆ ತಮ್ಮ ಜವಾಬ್ದಾರಿಯ ಬಗ್ಗೆ ಅರಿವಿದೆ ಎಂಬುದು ಸ್ಪಷ್ಟವಾಗುತ್ತದೆ. ಆಕ್ರಮಣಕಾರಿ ಆಟದ ಜೊತೆಗೆ ಯೋಚಿಸಿ ದೊಡ್ಡ ಹೊಡೆತಗಳನ್ನು ಆಡುತ್ತಿದ್ದಾರೆ," ಎಂದು ಇಂಡಿಯಾ ನ್ಯೂಸ್‌ ಕಾರ್ಯಕ್ರಮದಲ್ಲಿ ಕರೀಮ್ ಹೇಳಿದ್ದಾರೆ.

IND W vs SA W: ಅಂತಾರಾಷ್ಟ್ರೀಯ ODI ಕರಿಯರ್ ನಲ್ಲಿ 7000 ರನ್ಸ್ ಗಳಿಸಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ Mithali Raj

ಕಿಶನ್ ಮತ್ತು ಪಂತ್‌ ಇಬ್ಬರೂ ಕೂಡ 2016ರ ಐಸಿಸಿ(ICC) ಕಿರಿಯರ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿ ಜೊತೆಯಾಗಿ ಆಡಿದ್ದರು. ಕಿಶನ್‌ ಸಾರಥ್ಯದಲ್ಲಿ ಭಾರತ ತಂಡ ಫೈನಲ್‌ ತಲುಪಿತ್ತಾದರೂ ವೆಸ್ಟ್‌ ಇಂಡೀಸ್‌ ಎದುರು ಸೋತು ರನ್ನರ್ಸ್‌ಅಪ್‌ ಸ್ಥಾನ ಪಡೆದಿತ್ತು. ಇದೇ ಟೂರ್ನಿಯಲ್ಲಿ ವಾಷಿಂಗ್ಟನ್ ಸುಂದರ್‌ ಕೂಡ ಭಾರತ ತಂಡದಲ್ಲಿ ಇದ್ದರು. ಈಗ ಈ ಮೂರೂ ಆಟಗಾರರು ಭಾರತ ಹಿರಿಯರ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಭಿನ್ನ ಗೆಟ್‍ ಅಪ್‍ನಲ್ಲಿ ನಿಮ್ಮ ನೆಚ್ಚಿನ ಕ್ರಿಕೆಟರ್.!ಇವರು ಯಾರು ಬಲ್ಲಿರೇನು..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

saba karim, MS Dhoni, Ishan kishan, Rishabh Pant, ind vs eng,

 

Trending News