Under 19 Cricket World Cupಗೆ Team India ಘೋಷಣೆ, ಯಶ್ ಧಲ್ ಗೆ ನಾಯಕತ್ವದ ಹೊಣೆ
Under 19 Cricket World Cup 2022: ಅಖಿಲ ಭಾರತ ಜೂನಿಯರ್ ಆಯ್ಕೆ ಸಮಿತಿಯು (BCCI) 2022 ರ ಜನವರಿ 4 ರಿಂದ ಫೆಬ್ರವರಿ 5 ರವರೆಗೆ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಮುಂಬರುವ ICC ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್‌ಗಾಗಿ (ICC Under 19 Cricket World Cup) 17 ಸದಸ್ಯರ ಭಾರತೀಯ ತಂಡವನ್ನು ಪ್ರಕಟಿಸಿದೆ.
Under 19 Cricket World Cup 2022: ಅಖಿಲ ಭಾರತ ಜೂನಿಯರ್ ಆಯ್ಕೆ ಸಮಿತಿಯು (BCCI) 2022 ರ ಜನವರಿ 4 ರಿಂದ ಫೆಬ್ರವರಿ 5 ರವರೆಗೆ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಮುಂಬರುವ ICC ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್‌ಗಾಗಿ (ICC Under 19 Cricket World Cup) 17 ಸದಸ್ಯರ ಭಾರತೀಯ ತಂಡವನ್ನು ಪ್ರಕಟಿಸಿದೆ. 14ನೇ ಆವೃತ್ತಿಯ ಟೂರ್ನಿಯಲ್ಲಿ 16 ತಂಡಗಳು ವಿಶ್ವಕಪ್‌ನಲ್ಲಿ ಸೆಣಸಲಿವೆ. ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ. ದೆಹಲಿಯ ಬ್ಯಾಟ್ಸ್‌ಮನ್ ಯಶ್ ಧಾಲ್ (Yash Dhull) ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿದೆ. ಆಂಧ್ರಪ್ರದೇಶದ ಎಸ್ ಕೆ ರಶೀದ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. ಹರಿಯಾಣದ ದಿನೇಶ್ ಬಾನಾ ಮತ್ತು ಯುಪಿಯ ಆರಾಧ್ಯ ಯಾದವ್ ವಿಕೆಟ್ ಕೀಪರ್ ಆಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಐವರು ಸ್ಟಾಂಡ್ ಬೈ ಆಟಗಾರರು
ಐವರು ಸ್ಟ್ಯಾಂಡ್‌ಬೈ ಆಟಗಾರರನ್ನು ವಿಶ್ವಕಪ್‌ಗೆ ಕಳುಹಿಸಲು ಆಯ್ಕೆಗಾರರು ನಿರ್ಧರಿಸಿದ್ದಾರೆ. ರಿಷಿ ರೆಡ್ಡಿ, ಉದಯ್ ಸಹರನ್, ಅಂಶ್ ಗೋಸಾಯಿ, ಅಮೃತ್ ರಾಜ್ ಉಪಾಧ್ಯಾಯ ಮತ್ತು ಪಿಎಂ ಸಿಂಗ್ ರಾಥೋಡ್ ಅವರು ಸ್ಟ್ಯಾಂಡ್‌ಬಾಯ್‌ಗಳಾಗಿ ತಂಡದೊಂದಿಗೆ ಇರಲಿದ್ದಾರೆ. ಭಾರತವು ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ಉಗಾಂಡದೊಂದಿಗೆ ಸ್ಥಾನ ಪಡೆದಿದೆ. ಭಾರತವು ಜನವರಿ 15 ರಂದು ಗಯಾನಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ ಮತ್ತು ನಂತರ ಜನವರಿ 19 ಮತ್ತು 22 ರಂದು ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಐರ್ಲೆಂಡ್ ಮತ್ತು ಉಗಾಂಡಾವನ್ನು ಎದುರಿಸಲಿದೆ.
ಭಾರತ 4 ಬಾರಿ ಅಂಡರ್-19 ವಿಶ್ವಕಪ್ ಗೆದ್ದಿದೆ. ಭಾರತ ಅಂಡರ್-19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಬಾರಿ ಗೆದ್ದ ತಂಡವಾಗಿದೆ. ಈ ಮೊದಲು 2000, 2008, 2012 ಮತ್ತು 2018 ರಲ್ಲಿ ಈ ಪಂದ್ಯಾವಳಿಯನ್ನು ಭಾರತ ಗೆದ್ದುಕೊಂಡಿದೆ. ಭಾರತ 2016 ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು ಮತ್ತು ಕಳೆದ ಬಾರಿ ನ್ಯೂಜಿಲೆಂಡ್ನಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ನಲ್ಲಿ ರನ್ನರ್ ಅಪ್ ಆಗಿತ್ತು.
ಇದನ್ನೂ ಓದಿ-ದ್ರಾವಿಡ್ ಬದಲಿಗೆ ಈ ಅನುಭವಿ ಟೀಂ ಇಂಡಿಯಾದ ಹೊಸ ಕೋಚ್ ಆಗಲಿದ್ದಾರೆಂಬ ಸೂಚನೆ ನೀಡಿದ ಗಂಗೂಲಿ!
ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್‌ಗಾಗಿ ಭಾರತೀಯ ತಂಡ (Team India) ಇಂತಿದೆ
ಯಶ್ ಧಾಲ್ (Captain), ಹರ್ನೂರ್ ಸಿಂಗ್, ಅಂಗ್‌ಕ್ರಿಶ್ ರಘುವಂಶಿ, ಎಸ್‌ಕೆ ರಶೀದ್ (Vice Captain), ನಿಶಾಂತ್ ಸಿಂಧು, ಸಿದ್ಧಾರ್ಥ್ ಯಾದವ್, ಅನೀಶ್ವರ್ ಗೌತಮ್, ದಿನೇಶ್ ಬಾನಾ (WK), ರಾಜ್ ಅಂಗದ್ ಬಾವಾ, ಮಾನವ್ ಪರಾಖ್, ಕೌಶಲ್ ತಾಂಬೆ, ಆರ್ ಎಸ್ ಹಂಗರೇಶ್ಕರ್, ವಾಸು ವತ್ಸ್, ವಿಕ್ಕಿ ಒಸ್ತ್ವಾಲ್, ರವಿಕುಮಾರ್, ಗರ್ವ್ ಸಾಂಗ್ವಾನ್.
ಇದನ್ನೂ ಓದಿ -IPL Mega Auction 2022 ಮುನ್ನವೇ ನಿರ್ಧಾರ : ಈ ತಂಡದಲ್ಲಿ ಆಡಲಿದ್ದಾರೆ ಪಾಂಡ್ಯ ಬ್ರದರ್ಸ್
ಸ್ಟ್ಯಾಂಡ್‌ಬೈ ಆಟಗಾರರು: ರಿಷಿತ್ ರೆಡ್ಡಿ, ಉದಯ್ ಶರಣ್, ಅಂಶ್ ಗೋಸಾಯಿ, ಅಮೃತ್ ರಾಜ್ ಉಪಾಧ್ಯಾಯ, ಪಿಎಂ ಸಿಂಗ್ ರಾಥೋಡ್.
ಇದನ್ನೂ ಓದಿ-Virat Kohli : ಕೊಹ್ಲಿ ನಾಯಕತ್ವ ಟೆಸ್ಟ್ ತಂಡ ಈಗ ಅಪಾಯದಲ್ಲಿ! ಈ 3 ಆಟಗಾರರ ಕಾರ್ಡ್ ಕಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.