BCCI Latest Update: ವಿರಾಟ್ ವಿವಾದದ ಬಳಿಕ BCCIನಲ್ಲಿ ಮತ್ತೊಂದು ಸಂಚಲನ, ಇದ್ದಕ್ಕಿದ್ದಂತೆ ರಾಜಿನಾಮೆ ಸಲ್ಲಿಸಿದ ಉನ್ನತ ಅಧಿಕಾರಿ

BCCI Latest News - ಬಿಸಿಸಿಐನಿಂದ ಮತ್ತೊಂದು ಮಹತ್ವದ ಸುದ್ದಿ ಪ್ರಕಟಗೊಂಡಿದೆ. ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ತಮ್ಮ ಸ್ಥಾನಕ್ಕೆ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ್ದಾರೆ.

Written by - Nitin Tabib | Last Updated : Dec 18, 2021, 08:38 PM IST
  • ಬಿಸಿಸಿಐನಲ್ಲಿ ಹೊಸ ಸಂಚಲನ
  • ವಿರಾಟ್ ವಿವಾದದ ನಡುವೆ ಹೊಸ ಸುದ್ದಿ
  • ಇದ್ದಕ್ಕಿದ್ದಂತೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಉನ್ನತಾಧಿಕಾರಿ
BCCI Latest Update: ವಿರಾಟ್ ವಿವಾದದ ಬಳಿಕ BCCIನಲ್ಲಿ ಮತ್ತೊಂದು ಸಂಚಲನ, ಇದ್ದಕ್ಕಿದ್ದಂತೆ ರಾಜಿನಾಮೆ ಸಲ್ಲಿಸಿದ ಉನ್ನತ ಅಧಿಕಾರಿ title=
CMO Abhijit Salvi Resigns (File Photo)

ನವದೆಹಲಿ: BCCI CMO Resigns - ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಬಿರುಗಾಳಿ ಎದ್ದಿದೆ. ಬಿಸಿಸಿಐ ಇತ್ತೀಚೆಗೆ ವಿರಾಟ್ ಕೊಹ್ಲಿಯನ್ನು (Virat Kohli Controversy) ಏಕದಿನ ನಾಯಕತ್ವದಿಂದ ವಜಾಗೊಳಿಸಿತ್ತು. ಅಂದಿನಿಂದ, ವಿರಾಟ್ ಮತ್ತು ಬಿಸಿಸಿಐ ನಡುವೆ ನಿರಂತರ ಹೇಳಿಕೆಗಳು ಕೇಳಿಬರುತ್ತಿವೆ. ಏತನ್ಮಧ್ಯೆ  ಬಿಸಿಸಿಐನಿಂದ ಮತ್ತೊಂದು ಮಹತ್ವದ ಸುದ್ದಿ ಹೊರಬಿದ್ದಿದೆ. ಹೌದು, ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ತಮ್ಮ ಸ್ಥಾನಕ್ಕೆ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ್ದಾರೆ.

ರಾಜಿನಾಮೆ ನೀಡಿದ್ದಾದರೂ ಯಾರು? (CMO Abhijit Salvi Resigns)
ಬಿಸಿಸಿಐ ಮುಖ್ಯ ವೈದ್ಯಕೀಯ ಅಧಿಕಾರಿ (CMO) ಅಭಿಜಿತ್ ಸಾಲ್ವಿ (Abhijit Salvi) ವೈಯಕ್ತಿಕ ಕಾರಣಗಳಿಂದ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನವೆಂಬರ್ 30 ರಂದು ಅವರ ನೋಟೀಸ್ ಅವಧಿ ಮುಗಿದಿದೆ. ಆದರೆ ಸಾಲ್ವಿ ತಾವು  ಡಿಸೆಂಬರ್ 3 ರಿಂದ 7 (ಡಿಸೆಂಬರ್ 6) ವರೆಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದವರೆಗೆ ಸೇವೆ ಸಲ್ಲಿಸಿರುವುದಾಗಿ  ಶನಿವಾರ ಪಿಟಿಐಗೆ ತಿಳಿಸಿದ್ದಾರೆ. ಕೋವಿಡ್ -19 ರ ಕಷ್ಟದ ಸಮಯದಲ್ಲಿ ಜೈವಿಕ-ಸುರಕ್ಷಿತ ವಾತಾವರಣ ಮತ್ತು ಆಟಗಾರರನ್ನು ಆಗಾಗ್ಗೆ ಪರೀಕ್ಷಿಸುವ ಕಾರಣದಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಪಾತ್ರವು ಬಹಳ ಮಹತ್ವದ್ದಾಗಿತ್ತು. 

ಇದನ್ನೂ ಓದಿ-ಆರ್.ಅಶ್ವಿನ್ ಈ ಮಾಂತ್ರಿಕ ಸ್ಪಿನ್ನರ್ ವೃತ್ತಿಜೀವನಕ್ಕೆ ಕಂಟಕ! ಶೀಘ್ರದಲ್ಲೇ ನಿವೃತ್ತಿ ಘೋಷಿಸುತ್ತಾರಾ?

ಕಾರಣ ಬಹಿರಂಗವಾಗಿಲ್ಲ (Team India CMO)
ಈ ಅವಕಾಶ ನೀಡಿದ ಬಿಸಿಸಿಐಗೆ ಧನ್ಯವಾದ ಎಂದು ಸಾಲ್ವಿ ಹೇಳಿದ್ದಾರೆ. "ಈ ಸಂಸ್ಥೆಗೆ 10 ವರ್ಷಗಳ ಕಾಲಾವಕಾಶ ನೀಡಿದ ನಂತರ ಜೀವನದಲ್ಲಿ ಮುಂದುವರೆಯಲು ಬಯಸಿದ್ದೇನೆ. ಕೋವಿಡ್-19 ಸಮಯದಲ್ಲಿ, ಇದು '24×7' ನಂತಹ ಕೆಲಸವಾಗಿ ಮಾರ್ಪಟ್ಟಿತ್ತು ಮತ್ತು ಇದೀಗ ನಾನು ನನಗೆ ಮತ್ತು ನನ್ನ ಕುಟುಂಬಕ್ಕೆ ಸಮಯವನ್ನು ನೀಡಲು ಬಯಸುತ್ತೇನೆ". ಸಾಲ್ವಿ, BCCI ನ ವಯೋಮಿತಿ ಪರಿಶೀಲನೆ, ಉದ್ದೀಪನ ಮದ್ದು ತಡೆ ವಿಭಾಗ ಹಾಗೂ ವೈದ್ಯಕೀಯ ವಿಭಾಗದ ಉಸ್ತುವಾರಿ ವಹಿಸಿದ್ದರು.  ಮುಂದಿನ ತಿಂಗಳು ನಡೆಯಲಿರುವ ಬಾಲಕರ ಅಂಡರ್-16 ರಾಷ್ಟ್ರೀಯ ಚಾಂಪಿಯನ್‌ಶಿಪ್ (ವಿಜಯ್ ಮರ್ಚೆಂಟ್ ಟ್ರೋಫಿ) ಗೂ ಮುನ್ನ ಅವರ ರಾಜೀನಾಮೆ ಸುದ್ದಿ ಪ್ರಕಟಗೊಂಡಿದೆ.

ಇದನ್ನೂ ಓದಿ-ಟಿ20 ನಾಯಕತ್ವಕ್ಕೆ ವಿರಾಟ್ ಗಿಂತಲೂ ರೋಹಿತ್ ಶರ್ಮಾ ಯಾಕೆ ಸೂಕ್ತ..?

ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಸೇರಿದಂತೆ ಕೆಲವು ಪ್ರವಾಸಗಳಲ್ಲಿ ಸಾಲ್ವಿ ಭಾರತ ತಂಡದೊಂದಿಗೆ ಪ್ರಯಾಣಿಸಬೇಕಾಗಿತ್ತು. ಅವರು ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಮತ್ತು ಯುಎಇಯಲ್ಲಿ ಭಾರತ ಆಯೋಜಿಸಿದ್ದ T20 ವಿಶ್ವಕಪ್‌ನ ಎರಡು ಸೀಸನ್‌ಗಳಿಗೆ ವೈದ್ಯಕೀಯ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡಿದ್ದರು.

ಇದನ್ನೂ ಓದಿ -Virat Vs Ganugly : ಕೊಹ್ಲಿ ಹೇಳಿಕೆಗೆ ಪ್ರತೀಕಾರ ತೀರಿಸಿಕೊಂಡ ಗಂಗೂಲಿ : ಈಗ ಕ್ರಮ ಕೈಗೊಳ್ಳಲಿದೆಯೇ BCCI 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News