ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ನೇಮಕ ಮಾಡಿದೆ.


COMMERCIAL BREAK
SCROLL TO CONTINUE READING

ಎನ್‌ಸಿಎದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ದ್ರಾವಿಡ್ ನೋಡಿಕೊಳ್ಳಲಿದ್ದು, ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಮಾರ್ಗದರ್ಶನ, ತರಬೇತಿ ಮತ್ತು ಪ್ರೇರಣೆ ನೀಡುವಲ್ಲಿ ಭಾಗಿಯಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. 


'ದಿ ವಾಲ್' ಎಂದೇ ಖ್ಯಾತರಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್, ರಾಷ್ಟ್ರೀಯ ಪುರುಷರ ಮತ್ತು ಮಹಿಳೆಯರ ಮುಖ್ಯ ತರಬೇತುದಾರರು ಮತ್ತು ಭಾರತ ಅಭಿವೃದ್ಧಿ ತಂಡಗಳಿಗಾಗಿ ಕ್ರಿಕೆಟ್ ತರಬೇತುದಾರರಿಗೆ ಉತ್ತೇಜನ ನೀಡಲಿದ್ದಾರೆ. 


ಭಾರತ-ಎ, ಭಾರತ ಅಂಡರ್ 19, ಭಾರತ ಅಂಡರ್ 23 ತಂಡಗಳ ಕೋಚ್ ಗಳೊಂದಿಗೆ ದ್ರಾವಿಡ್ ಕೆಲಸ ಮಾಡಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.