BCCI:ಸ್ಟಾರ್ ಆಟಗಾರರ ವೇತನಕ್ಕೆ ಕತ್ತರಿ ಹಾಕಿದ ಬಿಸಿಸಿಐ..!
ಟೀಂ ಇಂಡಿಯಾ (Team India) ಸಾಕಷ್ಟು ಬದಲಾವಣೆಗಳನ್ನು ಕಂಡುಕೊಳ್ಳುತ್ತಿದೆ. ಸಾಕಷ್ಟು ಬದಲಾವಣೆ ಬಯಸುತ್ತಿರುವ ಬಿಸಿಸಿಐ ಯುವ ಆಟಗಾರರಿಗೆ ಪ್ರಾಶಸ್ತ್ಯ ನೀಡುತ್ತಿದೆ.
ನವದೆಹಲಿ: ಟೀಂ ಇಂಡಿಯಾ (Team India) ಸಾಕಷ್ಟು ಬದಲಾವಣೆಗಳನ್ನು ಕಂಡುಕೊಳ್ಳುತ್ತಿದೆ. ಸಾಕಷ್ಟು ಬದಲಾವಣೆ ಬಯಸುತ್ತಿರುವ ಬಿಸಿಸಿಐ ಯುವ ಆಟಗಾರರಿಗೆ ಪ್ರಾಶಸ್ತ್ಯ ನೀಡುತ್ತಿದೆ. ಹಾಗಾಗಿ ಇದೀಗ ನೀರಸ ಪ್ರದರ್ಶನ ನೀಡುತ್ತಿದ್ದ ಒಂದಿಷ್ಟು ಆಟಗಾರರ ವೇತನಕ್ಕೆ ಕತ್ತರಿ ಹಾಕಿದೆ. ಜೊತೆಗೆ ಒಂದಿಷ್ಟು ಹಿರಿಯ ಆಟಗಾರರಿಗೆ ಹಿಂಬಡ್ತಿ ನೀಡಲಾಗಿದೆ.
ಇದನ್ನೂ ಓದಿ:
ಹೌದು, ಸಾಕಷ್ಟು ಯುವ ಆಟಗಾರರು ಮುನ್ನಲೆಯಲ್ಲಿ ಕಾಣಿಸಿಕೊಂಡು ಗಮನಾರ್ಹ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡ ಒಂದಿಷ್ಟು ಹಿರಿಯ ಆಟಗಾರರಿಗೆ ಹಿಂಬಡ್ತಿ (Demotion) ನೀಡಿದೆ. ಅದರಲ್ಲೂ ಸ್ಟಾರ್ ಆಟಗಾರರು ಹಿಂಬಡ್ತಿ ಪಡೆದಿದ್ದು ಸೆಲೆಕ್ಷನ್ ಕಮಿಟಿ (Selection Committee) ಯುವ ಆಟಗಾರರಿಗೆ ಮಣೆ ಹಾಕಿದೆ.
ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ಇಶಾಂತ್ ಶರ್ಮಾ, ವೃದ್ದಿಮಾನ್ ಸಹಾ ಅವರನ್ನು ಟೆಸ್ಟ್ ಕ್ರಿಕೆಟ್‌ನಿಂದ (Test Cricket) ಕೈ ಬಿಡಲಾಗಿದೆ. ಇದು ಈ ಆಟಗಾರರ ವಾರ್ಷಿಕ ವೇತನದ ಮೇಲೂ ಹೊಡೆತ ನೀಡಲಿದೆ. ರಹಾನೆ, ಪೂಜಾರ ಹಾಗೂ ಇಶಾಂತ್ ಈ ಹಿಂದೆ ಎ ದರ್ಜೆಯ ಆಟಗಾರರಾಗಿದ್ದವರು ಈಗ ಬಿ ದರ್ಜೆಗೆ ಹಿಂಬಡ್ತಿ ಪಡೆದಿದ್ದಾರೆ. ಬಿ ದರ್ಜೆಯಲ್ಲಿದ್ದ ವೃದ್ದಿಮಾನ್ ಸಹಾ ಸಿ ದರ್ಜೆ ಸೇರಿದ್ದಾರೆ.
ಇನ್ನು ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ T20 ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾಗೆ (Hardik Pandya) ಭಾರೀ ಹಿಂಬಡ್ತಿ ನೀಡಲಾಗಿದೆ. ಈ ಹಿಂದೆ ಎ ಗ್ರೇಡ್ ವೇತನ ಪಡೆಯುತ್ತಿದ್ದ ಪಾಂಡ್ಯಾರನ್ನು ಸಿ ಗ್ರೇಡ್ ಗೆ ಇಳಿಸಲಾಗಿದೆ.
ಇದನ್ನೂ ಓದಿ:
ಒಟ್ಟಾರೆಯಾಗಿ 'ಎ+' ಗ್ರೇಡ್‌ನಲ್ಲಿರುವ ಇರುವ ಆಟಗಾರು ಬಿಸಿಸಿಐನಿಂದ (BCCI) ವಾರ್ಷಿಕವಾಗಿ 7 ಕೋಟಿ ರೂ. ವೇತನ ಪಡೆದರೆ ಎ ಗ್ರೇಡ್ ಆಟಗಾರರು 5 ಕೋಟಿ ಸಂಭಾವನೆ ಪಡೆಯುತ್ತಾರೆ. ಬಿ ಗ್ರೇಡ್ ಆಟಗಾರರು 3 ಕೋಟಿ ಸಂಭಾವನೆ ಪಡೆದುಕೊಂಡರೆ ಸಿ ಗ್ರೇಡ್ ಆಟಗಾರರು 1 ಕೋಟಿ ಸಂಭಾವನೆ ಪಡೆಯುತ್ತಾರೆ. ಅಕ್ಕೋಬರ್ 1,2021ರಿಂದ ಸಪ್ಟೆಂಬರ್ 2022ರವರೆಗೆ ಈ ನಿಯಮಗಳು ಅನ್ವಯಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.