ನವದೆಹಲಿ: ವಿಶ್ವಕಪ್ 2019 ರಲ್ಲಿ ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿ.ವಿ.ಎಸ್. ಲಕ್ಷ್ಮಣ್ ಅವರು ಕಾಮೆಂಟೆಟರ್ ಆಗಿರುವ ಪಾತ್ರಗಳನ್ನು ಈಗ ಪ್ರಶ್ನಿಸಲಾಗಿದೆ.


COMMERCIAL BREAK
SCROLL TO CONTINUE READING

ಬಿಸಿಸಿಯಿ ನೈತಿಕ ಸಮಿತಿ ಅಧಿಕಾರಿಯಾಗಿರುವ ಡಿ.ಕೆ ಜೈನ್ ಹಿರಿಯ ಆಟಗಾರರ ದ್ವೀಪಾತ್ರದ ಬಗ್ಗೆ ಈಗ ಚಕಾರ ಎತ್ತಿದ್ದಾರೆ.ಸದ್ಯ ಸೌರವ್ ಗಂಗೂಲಿ ಮತ್ತು ವಿ.ವಿ.ಎಸ್. ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸದಸ್ಯರು ಮತ್ತು ಐಪಿಎಲ್ ಫ್ರಾಂಚೈಸಿಗಳೊಂದಿಗಿನ ಮಾರ್ಗದರ್ಶಕರು ಕೂಡ ಆಗಿದ್ದಾರೆ. ಅಲ್ಲದೆ ನಿವೃತ್ತಿ ಹೊಂದದ ಆಟಗಾರರು ದೂರದರ್ಶನದಲ್ಲಿ ಪರಿಣತರ ಪಾತ್ರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಜೈನ ಹೇಳಿದ್ದಾರೆ. 


 ಈ ವಿಚಾರವಾಗಿ ನಿರ್ವಾಹಕರ ಸಮಿತಿಯ (ಸಿಒಎ) ಸದಸ್ಯರೊಬ್ಬರು ಪ್ರತಿಕ್ರಿಯಿಸಿ "ಹೌದು, ನಾವು ಈ ವಿಷಯವನ್ನು ಚರ್ಚಿಸುತ್ತೇವೆ ಮತ್ತು ಅದು ತುಂಬಾ ನಿರ್ಬಂಧಿತವಾಗಿರುವುದರಿಂದ ಪರಿಹಾರಕ್ಕೆ ಬರುತ್ತೇವೆ. ಅದರ ಬಗ್ಗೆ ಗಮನ ಹರಿಸುತ್ತೇವೆ ಮತ್ತು ಶೀಘ್ರದಲ್ಲೇ ನಿಮಗೆ ತಿಳಿಸುತ್ತೇವೆ" ಎಂದು  ಐಎಎನ್‌ಎಸ್‌ಗೆ ತಿಳಿಸಿದರು.


ಹರ್ಭಜನ್ ಸಿಂಗ್ ಮತ್ತು ಪಾರ್ಥಿವ್ ಪಟೇಲ್ ಅವರು ಇನ್ನೂ ಸಕ್ರಿಯ ಆಟಗಾರರಾಗಿದ್ದಾಗ ತಜ್ಞರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.ಈ  ಆಟಗಾರರು  ಐಪಿಎಲ್ನ 12 ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾರೆ. ಇನ್ನು ಲಕ್ಷ್ಮಣ್ ಸನ್‌ರೈಸರ್ಸ್ ಹೈದರಾಬಾದ್‌ಗೆ ಮಾರ್ಗದರ್ಶಕರಾಗಿದ್ದರೆ, ಗಂಗೂಲಿ ದೆಹಲಿ ಡೇರ್‌ಡೆವಿಲ್ಸ್ ಫ್ರ್ಯಾಂಚೈಸ್‌ಗೆ ಸಲಹೆಗಾರರಾಗಿದ್ದು, ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬಂಗಾಳದ ಅಧ್ಯಕ್ಷರಾಗಿದ್ದಾರೆ.


"ಒಬ್ಬ ವ್ಯಕ್ತಿ ಒಂದು ಹುದ್ದೆ ಲೋಧಾ ಸಮಿತಿಯ ಶಿಫಾರಸುಗಳಲ್ಲಿನ ಪ್ರಮುಖ ಅಂಶ. ನಾನು ಅದನ್ನು ಜಾರಿಗೆ ತರಲು ಪ್ರಯತ್ನಿಸಿದೆ. ಸಚಿನ್ ಅವರು ಸಿಎಸಿಯಿಂದ ಹಿಂದೆ ಸರಿದಿದ್ದರಿಂದ ಆಸಕ್ತಿಯ ಸಂಘರ್ಷ ಉದ್ಭವಿಸಲಿಲ್ಲ. ಆದರೆ ಇದು ಗಂಗೂಲಿ ಮತ್ತು ಲಕ್ಷ್ಮಣರ ಪ್ರಕರಣದಲ್ಲಿ ಅನ್ವಯವಾಗುತ್ತದೆ ಆದ್ದರಿಂದ  ಈಗ ನಿರ್ಧರಿಸಬೇಕು "ಎಂದು ಜೈನ್ ಪಿಟಿಐಗೆ ತಿಳಿಸಿದರು.