Gautam Gambhir Team India Coach: ಬಿಸಿಸಿಐ ಟೀಂ ಇಂಡಿಯಾದ ಹೊಸ ಮುಖ್ಯ ಕೋಚ್ ಅನ್ನು ಘೋಷಿಸಿದೆ. ಟಿ20 ವಿಶ್ವಕಪ್ ಬಳಿಕವೇ ರಾಹುಲ್ ದ್ರಾವಿಡ್ ಅಧಿಕಾರಾವಧಿ ಕೊನೆಗೊಂಡಿತ್ತು. ಇದಾದ ಬಳಿಕ ಭಾರತ ತಂಡ ಶ್ರೇಷ್ಠ ಕೋಚ್‌ಗಾಗಿ ಹುಡುಕಾಟ ನಡೆಸಿತ್ತು.


COMMERCIAL BREAK
SCROLL TO CONTINUE READING

2011ರ ವಿಶ್ವ ಚಾಂಪಿಯನ್ ಗೌತಮ್ ಗಂಭೀರ್ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಬಿಸಿಸಿಐ ಮುಖ್ಯ ಕೋಚ್‌ ಆಗಿ ಗೌತಮ್ ಗಂಭೀರ್ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಮುಖ್ಯ ಕೋಚ್ ಬಗ್ಗೆ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಗರ್ಲ್’ಫ್ರೆಂಡ್ ಆತ್ಮಹತ್ಯೆ ನೋವು ಕಾಡುತ್ತಿದ್ದರೂ ದೇಶಕ್ಕಾಗಿ ಆಡುತ್ತಾ ಮಿಂಚುತ್ತಿದ್ದಾನೆ ಟೀಂ ಇಂಡಿಯಾದ ಈ ಕ್ರಿಕೆಟಿಗ! ಆತ ಬೇರಾರು ಅಲ್ಲ…


ಜಯ್ ಶಾ ಅವರು ಗಂಭೀರ್ ಜೊತೆಗಿನ ಫೋಟೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, “ಭಾರತೀಯ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ಸ್ವಾಗತಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ” ಎಂದು ಬರೆದಿದ್ದಾರೆ.


“ಆಧುನಿಕ ಕಾಲದಲ್ಲಿ ಕ್ರಿಕೆಟ್ ವೇಗವಾಗಿ ವಿಕಸನಗೊಂಡಿದೆ ಮತ್ತು ಗೌತಮ್ ತನ್ನ ವೃತ್ತಿಜೀವನದುದ್ದಕ್ಕೂ ವಿವಿಧ ಪಾತ್ರಗಳಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಕ್ರಿಕೆಟ್ ಜಗತ್ತಿನ ಬದಲಾವಣೆಗೆಗಳನ್ನು ಕಂಡಿದ್ದಾರೆ. ಗೌತಮ್ ಅವರು ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸಲು ಆದರ್ಶ ವ್ಯಕ್ತಿ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ಟೀಮ್ ಇಂಡಿಯಾದ ಬಗ್ಗೆ ಅವರ ಸ್ಪಷ್ಟ ದೃಷ್ಟಿ ಮತ್ತು ಅವರ ಅಪಾರ ಅನುಭವವು ಈ ಪಾತ್ರವನ್ನು ನಿರ್ವಹಿಸಲು ಅವರನ್ನು ಸಂಪೂರ್ಣವಾಗಿ ಸಿದ್ಧಗೊಳಿಸುತ್ತದೆ. ಈ ಹೊಸ ಪ್ರಯಾಣದಲ್ಲಿ ಬಿಸಿಸಿಐ ಅವರಿಗೆ ಬೆಂಬಲವಾಗಿ ನಿಲ್ಲುತ್ತದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ:  ಸೌರವ್ ಗಂಗೂಲಿ ಎಷ್ಟು ಸಾವಿರ ಕೋಟಿ ಆಸ್ತಿ ಒಡೆಯ ಗೊತ್ತಾ?


ಅಧಿಕೃತ ಘೋಷಣೆ ಬಳಿಕ ಗೌತಮ್ ಗಂಭೀರ್ ಕೂಡ ಪ್ರತಿಕ್ರಿಯಿಸಿದ್ದಾರೆ. “ಭಾರತವು ನನ್ನ ಗುರುತಾಗಿದೆ. ನನ್ನ ದೇಶಕ್ಕೆ ಸೇವೆ ಸಲ್ಲಿಸುವುದು ನನ್ನ ಜೀವನದ ದೊಡ್ಡ ಭಾಗ್ಯ. ಆಟಗಾರ ಕ್ಯಾಪ್ ಅಲ್ಲ, ಕೋಚ್ ಕ್ಯಾಪ್ ಧರಿಸಿದ್ದೇನೆ. ಬೇರೆ ಕ್ಯಾಪ್ ಹಾಕಿಕೊಂಡಿದ್ದರೂ ಮರಳಿ ತಂಡಕ್ಕೆ ಬಂದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಭಾವನೆ ಮೂಡಿಸುವುದು ನನ್ನ ಗುರಿ. ಮೆನ್ ಇನ್ ಬ್ಲೂ 1.4 ಬಿಲಿಯನ್ ಭಾರತೀಯರ ಕನಸುಗಳನ್ನು ಹೆಗಲ ಮೇಲೆ ಹೊತ್ತಿದೆ. ಈ ಕನಸುಗಳನ್ನು ನನಸಾಗಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ” ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ