ನಿವೃತ್ತಿಯಾಗಿ 16 ವರ್ಷ ಕಳೆದರೂ ತಗ್ಗಿಲ್ಲ ಸೌರವ್ ಗಂಗೂಲಿ ಮೌಲ್ಯ: ‘ದಾದಾ’ ಎಷ್ಟು ಸಾವಿರ ಕೋಟಿ ಆಸ್ತಿ ಒಡೆಯ ಗೊತ್ತಾ?

Sourav Ganguly Net Worth: ಸೌರವ್ ಗಂಗೂಲಿ ಅವರ ನಿವ್ವಳ ಮೌಲ್ಯ 700 ಕೋಟಿ ಎಂದು ಅಂದಾಜಿಸಲಾಗಿದೆ. ಕೋಲ್ಕತ್ತಾ ಹೊರತುಪಡಿಸಿ, ಲಂಡನ್‌ನಲ್ಲಿ 2 BHK ಅಪಾರ್ಟ್ಮೆಂಟ್ ಕೂಡ ಇದೆ. ಕ್ರಿಕೆಟ್‌’ನ ಹೊರತಾಗಿ, ಟಿವಿ ಉದ್ಯಮದಲ್ಲಿ ಕೂಡ ಉತ್ತಮ ಹೆಸರನ್ನು ಮಾಡಿದ್ದಾರೆ.

Written by - Bhavishya Shetty | Last Updated : Jul 9, 2024, 08:15 PM IST
    • ಕೊಲ್ಕತ್ತಾದ ರಾಜಕುಮಾರ ಎಂದೇ ಪ್ರಖ್ಯಾತಿ ಪಡೆದಿರುವ ಸೌರವ್ ಗಂಗೂಲಿ
    • ಇವರು ಅತ್ಯಂತ ಪ್ರಭಾವಿ ಭಾರತೀಯ ನಾಯಕರಲ್ಲಿ ಒಬ್ಬರು
    • ಸೌರವ್ ಗಂಗೂಲಿ ಅವರ ನಿವ್ವಳ ಮೌಲ್ಯ 700 ಕೋಟಿ ಎಂದು ಅಂದಾಜಿಸಲಾಗಿದೆ
ನಿವೃತ್ತಿಯಾಗಿ 16 ವರ್ಷ ಕಳೆದರೂ ತಗ್ಗಿಲ್ಲ ಸೌರವ್ ಗಂಗೂಲಿ ಮೌಲ್ಯ: ‘ದಾದಾ’ ಎಷ್ಟು ಸಾವಿರ ಕೋಟಿ ಆಸ್ತಿ ಒಡೆಯ ಗೊತ್ತಾ? title=
Sourav Ganguly

Sourav Ganguly Net Worth: ಕೊಲ್ಕತ್ತಾದ ರಾಜಕುಮಾರ ಎಂದೇ ಪ್ರಖ್ಯಾತಿ ಪಡೆದಿರುವ ಸೌರವ್ ಗಂಗೂಲಿ ಬಗ್ಗೆ ವಿಶೇಷವಾದ ಪೀಠಿಕೆ ಅವಶ್ಯಕತೆಯಿಲ್ಲ. ಇವರು ಅತ್ಯಂತ ಪ್ರಭಾವಿ ಭಾರತೀಯ ನಾಯಕರಲ್ಲಿ ಒಬ್ಬರು. ಈ ಬೆಂಗಾಲ್ ಟೈಗರ್ 2008ರಲ್ಲಿ ಕ್ರಿಕೆಟ್‌’ನಿಂದ ನಿವೃತ್ತರಾದರು. ಆದರೆ ಇದುವರೆಗೆ ಅವರ ಬ್ರಾಂಡ್ ಮೌಲ್ಯ ಮಾತ್ರ ತಗ್ಗಿಲ್ಲ.

ಇದನ್ನೂ ಓದಿ: ಗರ್ಲ್’ಫ್ರೆಂಡ್ ಆತ್ಮಹತ್ಯೆ ನೋವು ಕಾಡುತ್ತಿದ್ದರೂ ದೇಶಕ್ಕಾಗಿ ಆಡುತ್ತಾ ಮಿಂಚುತ್ತಿದ್ದಾನೆ ಟೀಂ ಇಂಡಿಯಾದ ಈ ಕ್ರಿಕೆಟಿಗ! ಆತ ಬೇರಾರು ಅಲ್ಲ…

ಸೌರವ್ ಗಂಗೂಲಿ ಅವರ ನಿವ್ವಳ ಮೌಲ್ಯ 700 ಕೋಟಿ ಎಂದು ಅಂದಾಜಿಸಲಾಗಿದೆ. ಕೋಲ್ಕತ್ತಾ ಹೊರತುಪಡಿಸಿ, ಲಂಡನ್‌ನಲ್ಲಿ 2 BHK ಅಪಾರ್ಟ್ಮೆಂಟ್ ಕೂಡ ಇದೆ. ಕ್ರಿಕೆಟ್‌’ನ ಹೊರತಾಗಿ, ಟಿವಿ ಉದ್ಯಮದಲ್ಲಿ ಕೂಡ ಉತ್ತಮ ಹೆಸರನ್ನು ಮಾಡಿದ್ದಾರೆ.

ಆಗಸ್ಟ್ 2022ರಲ್ಲಿ, 'DreamSetGo' ಎಂಬ ಕ್ರೀಡಾ ಅನುಭವ ಮತ್ತು ಪ್ರಯಾಣದ ವೇದಿಕೆ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿತು. ಅಷ್ಟೇ ಅಲ್ಲದೆ, ವಿಕ್ಕೊ, ಲಾಯ್ಡ್ ರೋಪ್ಸ್, ಬಂಧನ್ ಬ್ಯಾಂಕ್, ಲಕ್ಸ್ ಕೋಜಿ ಎಂಬ ಸಾಫ್ಟ್‌ವೇರ್ ಕಂಪನಿಯು ಡಿಟಿಡಿಸಿ ಅಭಿಯಾನದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ. ಡಿಟಿಡಿಸಿ ಪ್ರಚಾರದ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಅದರಿಂದ 1 ಕೋಟಿ ರೂ.ಗೂ ಹೆಚ್ಚು ಗಳಿಸುತ್ತಾರೆ. ಟಾಟಾ ಟೆಟ್ಲಿ, ಪೂಮಾ, ಎಸ್ಸಿಲರ್ ಲೆನ್ಸ್ ಮತ್ತು ಸೆಂಕೋ ಗೋಲ್ಡ್ ಮೂಲಕವೂ ಭರ್ಜರಿಯಾಗಿ ಗಳಿಕೆ ಮಾಡುತ್ತಾರೆ. ಒಂದು ಜಾಹೀರಾತಿಗೆ ಸುಮಾರು 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಗಂಗೂಲಿ.

ಸೌರವ್ ಗಂಗೂಲಿ ಹುಟ್ಟಿದ್ದು, ಕೊಲ್ಕತ್ತಾದ ಬೆಹಾಲಾದಲ್ಲಿ ಉನ್ನತ ಮಧ್ಯಮ ವರ್ಗದ ಕುಟುಂಬದಲ್ಲಿ. ಅವರ ಕುಟುಂಬ ಇನ್ನೂ ಅಲ್ಲಿಯೇ ವಾಸಿಸುತ್ತಿದೆ. ಈ ಮನೆಯ ಸದ್ಯದ ಬೆಲೆ 7 ಕೋಟಿ ರೂಪಾಯಿ ಎಂದು ವರದಿಯಾಗಿದೆ.

ಇದನ್ನೂ ಓದಿ:  ಈಕೆ ಜೊತೆ ನನ್ನ ಮದುವೆ… ಕೊನೆಗೂ ತನ್ನ ಮನದರಸಿ ಯಾರೆಂದು ರಿವೀಲ್ ಮಾಡಿದ ಕ್ರಿಕೆಟಿಗ ಕುಲ್ದೀಪ್

ಭಾರತದ ಮಾಜಿ ನಾಯಕ ಲಂಡನ್‌’ನಲ್ಲಿ ಐಷಾರಾಮಿ 2 ಬಿಎಚ್‌ಕೆ ಅಪಾರ್ಟ್‌ಮೆಂಟ್ ಅನ್ನು ಹೊಂದಿದ್ದಾರೆ, ಅಷ್ಟೇ ಅಲ್ಲದೆ, 6 ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ, ಇದರಲ್ಲಿ ಆಡಿ, ಮರ್ಸಿಡಿಸ್ ಮತ್ತು ಬಿಎಂಡಬ್ಲ್ಯುನಂತಹ ಜಾಗತಿಕ ಬ್ರಾಂಡ್‌ಗಳು ಸೇರಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News