BCCI Big Announcement: ಭಾರತೀಯ ಮಹಿಳಾ ಆಟಗಾರ್ತಿಯರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಬಿಸಿಸಿಐ
BCCI Match Fee: ಈ ಕುರಿತು ಐತಿಹಾಸಿಕ ನಿರ್ಣಯ ಕೈಗೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇನ್ಮುಂದೆ ಮಹಿಳಾ ಹಾಗೂ ಪುರುಷ ಕ್ರಿಕೇಟಿಗರಿಗೆ ಒಂದೇ ರೀತಿಯ ಸಂಭಾವನೆ ಸಿಗಲಿದೆ ಎಂದು ಹೇಳಿದೆ.
Indian Women Cricketers Match Fee: ಭಾರತೀಯ ಕ್ರಿಕೆಟ್ ಮಂಡಳಿ ಗುರುವಾರ ಮಹತ್ವದ ಘೋಷಣೆ ಮಾಡಿದೆ. ಇನ್ನು ಮುಂದೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ಪಂದ್ಯ ಶುಲ್ಕ ನೀಡಲಾಗುವುದು ಎಂದು ಬಿಸಿಸಿಐ ಪ್ರಕಟಿಸಿದೆ. ಪುರುಷ ಕ್ರಿಕೆಟಿಗರಿಗೆ ಸರಿಸಮಾನವಾಗಿ ಮಹಿಳಾ ಕ್ರಿಕೆಟಿಗರ ಪಂದ್ಯ ಶುಲ್ಕವನ್ನು ಮಾಡುವ ಈ ನಿರ್ಧಾರವು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಗುತ್ತಿಗೆ ಮೇಲಿರುವ ಹಿರಿಯ ಮಹಿಳಾ ಕ್ರಿಕೆಟಿಗರಿಗೆ ಪುರುಷ ಕ್ರಿಕೆಟಿಗರಿಗೆ ನೀಡಲಾಗುವ ಪಂದ್ಯದ ಶುಲ್ಕವನ್ನು ನೀಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ, 'ಪಕ್ಷಪಾತ ತೊಡೆದುಹಾಕಲು ಮಂಡಳಿ ಕೈಗೊಂಡ ಮೊದಲ ಹೆಜ್ಜೆ ಇದಾಗಿದೆ ಎಂಬುದನ್ನು ಹೇಳಲು ನನಗೆ ಅತೀವ ಸಂತಸವಾಗುತ್ತಿದೆ' ಎಂದು ಬಿಸಿಸಿಐ ಕಾರ್ಯದರ್ಶಿ ಹೇಳಿದ್ದಾರೆ. 'ನಮ್ಮ ಗುತ್ತಿಗೆ ಪಡೆದ ಮಹಿಳಾ ಕ್ರಿಕೆಟಿಗರಿಗೂ ನಾವು ಪುರುಷ ಕ್ರೀಡಾಪಟುಗಳಂತೆಯೇ ಶುಲ್ಕವನ್ನು ನಿಗದಿಪಡಿಸುತ್ತಿದ್ದೇವೆ. ಇನ್ನು ಮುಂದೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ಶುಲ್ಕ ಒಂದೇ ಆಗಿರುತ್ತದೆ. ಏಕೆಂದರೆ ನಾವು ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯ ಹೊಸ ಯುಗವನ್ನು ಪ್ರವೇಶಿಸುತ್ತಿದ್ದೇವೆ' ಎಂದು ಶಾ ಹೇಳಿದ್ದಾರೆ.
ಇದನ್ನೂ ಓದಿ-IND vs NED: ಭಾರತ-ನೆದರ್ಲ್ಯಾಂಡ್ ಹಣಾಹಣಿ: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ
Team India: ನೆದರ್ಲ್ಯಾಂಡ್ ವಿರುದ್ಧದ ಪಂದ್ಯಕ್ಕಿಲ್ಲ ಹಾರ್ದಿಕ್ ಪಾಂಡ್ಯ! ಕಾರಣವೇನು ಗೊತ್ತಾ?
ಈ ಬಗ್ಗೆ ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ ಜೈ ಶಾ, 'ಪುರುಷರ ಕ್ರಿಕೆಟಿಗರಿಗೆ ಸರಿಸಮಾನವಾಗಿ ಭಾರತೀಯ ಮಹಿಳಾ ಕ್ರಿಕೆಟಿಗರಿಗೂ ಪಂದ್ಯ ಶುಲ್ಕ ನೀಡಲಾಗುವುದು' ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. 'ಪುರುಷ ಕ್ರಿಕೀಟಿಗರಿಗೆ ಟೆಸ್ಟ್ ಪಂದ್ಯಗಳಲ್ಲಿ 15 ಲಕ್ಷ, ODIಗಳಿಗೆ 6 ಲಕ್ಷ ಮತ್ತು T20 ಅಂತಾರಾಷ್ಟ್ರೀಯ ಪಂದ್ಯಗಳಿಗೆ 3 ಲಕ್ಷ ನೀಡಲಾಗುತ್ತದೆ. ಮಹಿಳಾ ಕ್ರಿಕೆಟಿಗರಿಗೆ ಅದೇ ಶುಲ್ಕವನ್ನು ನೀಡುವುದು ಬದ್ಧತೆಯಾಗಿದೆ, ಅವರ ಬೆಂಬಲಿಸಿದ್ದಕ್ಕಾಗಿ ನಾನು ಕೌನ್ಸಿಲ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ, ಜೈ ಹಿಂದ್'.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.