ಇಂದು ಸಿಡ್ನಿಯ ಮೈದಾನಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ ತಂಡ ಕಾದಾಡಲಿದೆ. ಕಳೆದ ಭಾನುವಾರ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಭಾರತ ಸ್ಮರಣೀಯ ಸಾಧನೆ ಮಾಡಿದೆ. ಈ ಪಂದ್ಯದಲ್ಲಿ ಅಬ್ಬರದ ಆಟ ಪ್ರದರ್ಶನ ಮಾಡಿದ್ದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ. ಆದರೆ ಇಂದು ನಡೆಯುವ ಪಂದ್ಯಕ್ಕೆ ಹಾರ್ದಿಕ್ ಆಗಮಿಸುವುದು ಅನುಮಾನವಾಗಿದೆ.
ಇದನ್ನೂ ಓದಿ: IND vs NED: ಭಾರತಕ್ಕೆ ನೆದರ್ಲ್ಯಾಂಡ್ ಸವಾಲು: ಈ ಸ್ಟಾರ್ ಆಟಗಾರನಿಗೆ ಸಿಗುವುದೇ ಚಾನ್ಸ್?
ಹೌದು ಅಂತಿಮ ಓವರ್ ನಲ್ಲಿ ಕ್ರೀಸ್ನಲ್ಲಿದ್ದ ಪಾಂಡ್ಯ 37 ಎಸೆತಗಳಲ್ಲಿ 40 ರನ್ ಗಳಿಸಿದ್ದರು. 2 ಸಿಕ್ಸ್ ಹಾಗೂ 1 ಫೋರ್ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಇನ್ನುಳಿದಂತೆ 24 ರನ್ಗಳನ್ನು ಹಾರ್ದಿಕ್ ಪಾಂಡ್ಯ ಓಡಿಯೇ ಕಲೆಹಾಕಿದ್ದರು. ಇದೀಗ ಅದುವೇ ಸಮಸ್ಯೆಯಾಗಿ ಪರಿಣಮಿಸಿದೆ. ಓಡಿಯೇ ರನ್ ಕಲೆ ಹಾಕಿದ್ದ ಕಾರಣ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ಹೀಗಾಗಿ ಸಿಡ್ನಿಯಲ್ಲಿ ನಡೆದ ಅಭ್ಯಾಸಕ್ಕೂ ಹಾರ್ದಿಕ್ ಪಾಂಡ್ಯ ಅಲಭ್ಯವಾಗಿದ್ದರು. ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯಗೆ ಪೂರ್ಣ ವಿಶ್ರಾಂತಿ ನೀಡಿದರೆ ಉಳಿದ ಮಹತ್ವದ ಪಂದ್ಯಗಳಲ್ಲಿ ಕಣಕ್ಕಿಳಿಯಬಹುದು ಎಂಬುದು ಮ್ಯಾನೇಜ್ ಮೆಂಟ್ ಲೆಕ್ಕಾಚಾರ.
ಸದ್ಯ ಹಾರ್ದಿಕ್ ಪಾಂಡ್ಯ ಕ್ರೀಸ್ ನಲ್ಲಿ ಉತ್ತಮ ಫಾರ್ಮ್ ನಲ್ಲಿ ಹೋರಾಡುತ್ತಿದ್ದಾರೆ. ಟೀಂ ಇಂಡಿಯಾದ ಆಲ್ ರೌಂಡರ್ ಆಗಿರುವ ಪಾಂಡ್ಯ ಇಂದು ನಡೆಯುವ ಪಂದ್ಯಕ್ಕೆ ಆಗಮಿಸುವುದು ಅನುಮಾನ ಎಂದೇ ಹೇಳಬಹುದು.
ಇದನ್ನೂ ಓದಿ: ಐಸಿಸಿ ನೂತನ ಟಿ-20 ರ‍್ಯಾಂಕಿಂಗ್: ಟಾಪ್ 10ಕ್ಕೆ ಮರಳಿದ ಕಿಂಗ್ ಕೊಹ್ಲಿ..!
ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ