ನವದೆಹಲಿ: ಕರೋನಾ ವೈರಸ್‌ನಿಂದಾಗಿ ಯುಎಇಯಲ್ಲಿ ನಡೆಯಲಿರುವ ಐಪಿಎಲ್ 2020 (IPL2020)ರ  ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐ ಸೋಮವಾರ ಕಂಪನಿಗಳನ್ನು ಆಹ್ವಾನಿಸಿದೆ. ಐಪಿಎಲ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಶಾರ್ಜಾ, ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ ಮತ್ತು ಇದನ್ನು ಯುಎಇಯಲ್ಲಿ ಆಯೋಜಿಸಲು ಮಂಡಳಿಯು ಕೇಂದ್ರ ಸರ್ಕಾರದಿಂದ ಔಪಚಾರಿಕ  ಅನುಮೋದನೆಯನ್ನು ಸಹ ಪಡೆದಿದೆ. ಲೀಗ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಸೋಮವಾರ ಈ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಪಂದ್ಯಾವಳಿಯ ಹೊಸ ಶೀರ್ಷಿಕೆ ಪ್ರಾಯೋಜಕರನ್ನು ಆಗಸ್ಟ್ 18 ರೊಳಗೆ ಘೋಷಿಸಲಾಗುವುದು ಎಂದು ಹೇಳಿದ್ದಾರೆ. ಹೀಗಾಗಿ ಆಸಕ್ತ ಕಂಪನಿಗಳಿಗೆ ಬಿಡ್ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗುತ್ತಿದೆ.



COMMERCIAL BREAK
SCROLL TO CONTINUE READING

ಯಾವುದೇ ಕಂಪನಿ IPL 2020ರ ಶೀರ್ಷಿಕೆಯ ಪ್ರಾಯೋಜಕತ್ವದ ಹಕ್ಕನ್ನು ತನ್ನದಾಗಿಸಿಕೊಳ್ಳಲಿದೆಯೋ, ಆ ಕಂಪನಿಯ ಬಳಿ ಆಗಸ್ಟ್ 18, 2020 ರಿಂದ ಡಿಸೆಂಬರ್ 31,2020ರವರೆಗೆ ಈ ಹಕ್ಕು ಇರಲಿದೆ. ಇದಕ್ಕಾಗಿ ಸಬಂಧಪಟ್ಟ ಕಂಪನಿಯ ವಹಿವಾಟು 300 ಕೋಟಿಗಿಂತ ಹೆಚ್ಚಿರಬೇಕು ಎಂದು BCCI ಸ್ಪಷ್ಟಪಡಿಸಿದೆ. BCCI ಪ್ರಕಾರ ಯಾವುದೇ ಪಕ್ಷ ಅಥವಾ ಕಂಪನಿ ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಸಕ್ತಿಹೊಂದಿದೆಯೋ ಅದು ಆಗಸ್ಟ್ 14, 2020 ರ ಸಂಜೆ 5 ಗಂಟೆಯ ಒಳಗೆ ಮಂಡಳಿಗೆ ಈ ಕುರಿತು ಸೂಚನೆ ನೀಡಬೇಕು ಎಂದು ಹೇಳಲಾಗಿದೆ.


ಚೀನಾದ ಮೊಬೈಲ್ ಕಂಪನಿ ವಿವೊ ಜೊತೆಗಿನ ಒಪ್ಪಂದ ಮಧ್ಯದಲ್ಲಿಯೇ ಮೊಟಕುಗೊಂಡ ಬಳಿಕ,  ಬಿಸಿಸಿಐ ವರ್ಷ 2020 ರ ನೂತನ ಪ್ರಾಯೋಜಕತ್ವ ಪಡೆಯಲು ಸಾಕಷ್ಟು ಪ್ರಯತ್ನಿಸುತ್ತಿದೆ. ಬಾಬಾ ರಾಮದೇವ್ ಅವರ ಪತಂಜಲಿ ಹೊಸ ಶೀರ್ಷಿಕೆ ಪ್ರಾಯೋಜಕತ್ವ ಪಡೆಯಲು ಆಸಕ್ತಿ ತೋರಿರುವುದು ಇಲ್ಲಿ ವಿಶೇಷ. ಆಗಸ್ಟ್ 18 ರೊಳಗೆ ಈ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.