ಬಿಸಿಸಿಐ ನಿರ್ಲಕ್ಷ್ಯ; ಕನ್ನಡಿಗ ಕರುಣ್ ನಾಯರ್ ಗಿಲ್ಲ ಸ್ಥಾನ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಕರುಣ್ ನಾಯರ್ ಆಗ ಐದು ಟೆಸ್ಟ್ ಪಂದ್ಯಗಳಲ್ಲಿ ಒಂದೆ ಒಂದು ಪಂದ್ಯವಾಡಿರಲಿಲ್ಲ. ಆದರೆ ಮುಂಬರುವ ವೆಸ್ಟ್ ಇಂಡಿಸ್ ಸರಣಿಯಲ್ಲಿ ಕರುಣ್ ಅವರನ್ನು ಪರಿಗಣಿಸದೆ ಅವರನ್ನು ಕೈಬಿಡಲಾಗಿದೆ.
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಕರುಣ್ ನಾಯರ್ ಆಗ ಐದು ಟೆಸ್ಟ್ ಪಂದ್ಯಗಳಲ್ಲಿ ಒಂದೆ ಒಂದು ಪಂದ್ಯವಾಡಿರಲಿಲ್ಲ. ಆದರೆ ಮುಂಬರುವ ವೆಸ್ಟ್ ಇಂಡಿಸ್ ಸರಣಿಯಲ್ಲಿ ಕರುಣ್ ಅವರನ್ನು ಪರಿಗಣಿಸದೆ ಅವರನ್ನು ಕೈಬಿಡಲಾಗಿದೆ.
ಈಗ ಈ ನಿರ್ಧಾರದಿಂದ ಈಗ ಬಹುತೇಕರು ಬಿಸಿಸಿಐ ವಿರುದ್ದ ಕಿಡಿಕಾರಿದ್ದಾರೆ.ಈ ಹಿಂದೆ ತಂಡಕ್ಕೆ ಆಯ್ಕೆ ಮಾಡಿಕೊಂಡು ಆಡಲು ಅವಕಾಶ ಸಿಗದಿದ್ದ ಕರುಣ್ ಗೆ ಈಗ ಏಕಾಏಕಿ ತಂಡದಿಂದಲೇ ಕೈ ಬಿಡಲಾಗಿದೆ.ಈಗಾಗಲೇ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಗಳಿಸಿ ತಮ್ಮದೇ ಛಾಪನ್ನು ಮೂಡಿಸಿರುವ ಕರುಣ್ ನಾಯರ್ ವೀರೇಂದ್ರ ಸೆಹವಾಗ್ ಬಿಟ್ಟರೆ ಟೆಸ್ಟ್ ನಲ್ಲಿ ತ್ರಿಶತಕ ಗಳಿಸಿದ ಎರಡನೇ ಭಾರತೀಯ ಆಟಗಾರರಾಗಿದ್ದಾರೆ.ಆದರೆ ಬಿಸಿಸಿಐ ಮಾತ್ರ ಈ ಕರ್ನಾಟಕದ ಆಟಗಾರನ ವಿಚಾರವಾಗಿ ಮಲತಾಯಿ ಧೋರಣೆ ತೋರುತ್ತಿದೆ.
ಇನ್ನೊಂದು ಅಚ್ಚರಿಯ ವಿಚಾರವೆಂದರೆ ಕರುಣ್ ನಾಯರ್ ಅವರಿಗೆ ವೆಸ್ಟ್ ಇಂಡಿಸ್ ಸರಣಿಯಿಂದ ಕೈಬಿಟ್ಟಿರುವುದರ ಕುರಿತಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನುವುದನ್ನು ಸ್ವತಃ ಕರುಣ್ ಅವರೇ ಸ್ಪಷ್ಟಪಡಿಸಿದ್ದಾರೆ. ಆದರೆ ಇದನ್ನು ಆಯ್ಕೆ ಸಮಿತಿ ಮಾತ್ರ ಅಲ್ಲಗಳೆದಿದೆ. ಈಗ ತಂಡದಿಂದ ಅವರನ್ನು ಕೈ ಬಿಟ್ಟಿರುವುದಕ್ಕೆ ಹರ್ಭಜನ ಸಿಂಗ್ ದಿಲೀಪ್ ವೆಂಗ್ಸಾರ್ಕರ್,ಮತ್ತು ಸುನಿಲ್ ಗವಾಸ್ಕರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.