BCCI reward announcement: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಪ್ರತಿ ಋತುವಿನಲ್ಲಿ ಕನಿಷ್ಠ ಏಳು ಟೆಸ್ಟ್ ಪಂದ್ಯಗಳನ್ನು ಆಡುವ ಆಟಗಾರರಿಗೆ ಪಂದ್ಯ ಶುಲ್ಕವನ್ನು ಪ್ರಸ್ತುತ 15 ಲಕ್ಷದಿಂದ 45 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಅಂದರೆ ಒಂದು ಋತುವಿನಲ್ಲಿ ಸುಮಾರು 10 ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸುವ ಟೆಸ್ಟ್ ಆಟಗಾರನಿಗೆ 4.50 ಕೋಟಿ ರೂ. ಸಿಗಲಿದೆ. ಈ ಮೊತ್ತವು ಆಟಗಾರನು ವಾರ್ಷಿಕ ಕೇಂದ್ರ ಒಪ್ಪಂದದ ಅಡಿಯಲ್ಲಿ ಪಡೆಯುವ 'ರಿಟೈನರ್ ಶುಲ್ಕ'ಕ್ಕೆ ಹೆಚ್ಚುವರಿಯಾಗಿರುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಹೂವಿನ ಪುಡಿಗೆ ತೆಂಗಿನೆಣ್ಣೆ ಬೆರಸಿ ಹಚ್ಚಿ… ಅರ್ಧ ಗಂಟೆಯಲ್ಲಿ ಬಿಳಿಕೂದಲು ಕಡು ಕಪ್ಪಾಗಿ ಸೊಂಪಾಗಿ ಹೊಳೆಯುತ್ತೆ!


ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, “ನಮ್ಮ ಆಟಗಾರರಿಗೆ ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಯನ್ನು ಒದಗಿಸುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ, ಹಿರಿಯ ಪುರುಷರ ತಂಡಕ್ಕೆ ಟೆಸ್ಟ್ ಕ್ರಿಕೆಟ್ ಪ್ರೋತ್ಸಾಹ ಯೋಜನೆಯನ್ನು ಪ್ರಾರಂಭಿಸಲು ನಾನು ಸಂತೋಷಪಡುತ್ತೇನೆ. 2022-23ರ ಋತುವಿನ 'ಟೆಸ್ಟ್ ಕ್ರಿಕೆಟ್ ಪ್ರೋತ್ಸಾಹ ಯೋಜನೆ'ಯು ಟೆಸ್ಟ್ ಪಂದ್ಯಗಳಿಗೆ ಅಸ್ತಿತ್ವದಲ್ಲಿರುವ ಪಂದ್ಯ ಶುಲ್ಕ 15 ಲಕ್ಷ ರೂ.ಗೆ ಹೆಚ್ಚುವರಿ ಬಹುಮಾನವಾಗಿ ಕಾರ್ಯನಿರ್ವಹಿಸುತ್ತದೆ” ಎಂದಿದ್ದಾರೆ.


ಪ್ರತಿ ಋತುವಿನಲ್ಲಿ ಕನಿಷ್ಠ ಒಂಬತ್ತು ಟೆಸ್ಟ್ ಪಂದ್ಯಗಳು ಆಯೋಜನೆಗೊಂಡು ಅದರಲ್ಲಿ ಆಟಗಾರನು ನಾಲ್ಕು ಟೆಸ್ಟ್‌’ಗಳನ್ನು ಆಡಿದರೆ, ಪ್ರತಿ ಪಂದ್ಯಕ್ಕೆ ರೂ 15 ಲಕ್ಷವನ್ನು ಪಡೆಯುತ್ತಾನೆ. ಆದರೆ ಮೀಸಲು ಆಟಗಾರರು ಅದರಲ್ಲಿ ಅರ್ಧದಷ್ಟು ಮೊತ್ತವನ್ನು ಪಡೆಯುತ್ತಾರೆ. ಇನ್ನು ಕನಿಷ್ಠ ಐದರಿಂದ ಆರು ಪಂದ್ಯಗಳನ್ನು ಆಡಿದರೆ ಮತ್ತು ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ದರೆ, ಆ  ಆಟಗಾರನಿಗೆ 30 ಲಕ್ಷ ರೂ ಸಿಗುತ್ತದೆ. ಇದರಲ್ಲಿ ಮೀಸಲು ಆಟಗಾರರು ಪ್ರತಿ ಪಂದ್ಯಕ್ಕೆ 15 ಲಕ್ಷ ರೂ. ಪಡೆಯುತ್ತಾನೆ.


ಒಂದು ಋತುವಿನಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳಿಗೆ ಆಟಗಾರನು ಆರಂಭಿಕ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ದರೆ, ಪ್ರತಿ ಪಂದ್ಯಕ್ಕೆ 45 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಮತ್ತು ಮೀಸಲು ಆಟಗಾರರು 22.5 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ.


ಇದನ್ನೂ ಓದಿ:  IPL 2024: ಜನರಿಗೆ ಐಪಿಎಲ್ ಇಷ್ಟವಾಗಲು ಅಸಲಿ ಕಾರಣ ಇದುವೇ.. ಸತ್ಯ ಬಹಿರಂಗಪಡಿಸಿದ ವಿರಾಟ್ ಕೊಹ್ಲಿ


ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಚಹಾರ್ ಅವರಂತಹ ಕೆಲವು ಆಟಗಾರರು ರೆಡ್ ಬಾಲ್ ಕ್ರಿಕೆಟ್‌’ಗೆ ಆದ್ಯತೆ ನೀಡುವ ಮಂಡಳಿಯ ಆದೇಶವನ್ನು ನಿರ್ಲಕ್ಷಿಸಿದ ಬೆನ್ನಲ್ಲೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಣಜಿ ಟ್ರೋಫಿ ಕ್ರಿಕೆಟ್ ಆಡುವ ಬದಲು, ಈ ಆಟಗಾರರು ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ ತಂಡಕ್ಕಾಗಿ ತರಬೇತಿಯಲ್ಲಿ ನಿರತರಾಗಿದ್ದಾರೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ