2025ರ ಚಾಂಪಿಯನ್ಸ್ ಟ್ರೋಫಿ, WTC ಫೈನಲ್’ಗೆ ಈತನೇ ಟೀಂ ಇಂಡಿಯಾ ನಾಯಕ: ಖಚಿತಪಡಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ
Jay Shah confirms Rohit Sharma as India captain: ಭಾನುವಾರ ಬಿಸಿಸಿಐ ಹಂಚಿಕೊಂಡ ವೀಡಿಯೊದಲ್ಲಿ ಮಾತನಾಡಿದ ಶಾ, ಕಳೆದ ನವೆಂಬರ್’ನಲ್ಲಿ ನಡೆದ ODI ವಿಶ್ವಕಪ್ ಫೈನಲ್’ನಲ್ಲಿ ಭಾರತವು ಆಘಾತಕಾರಿ ಸೋಲನ್ನು ಅನುಭವಿಸಿತ್ತು. ಆದರೆ T20 ವಿಶ್ವಕಪ್ ಮೂಲಕ ಮತ್ತೆ ಪುಟಿದೇಳಲು ರೋಹಿತ್’ಗೆ ಬೆಂಬಲ ನೀಡಿದ್ದೆ. ಅದು ನಿಜವಾಯಿತು” ಎನ್ನುತ್ತಾ ಸಂತಸ್ ವ್ಯಕ್ತಪಡಿಸಿದರು.
Jay Shah confirms Rohit Sharma as India captain: 2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್’ನಲ್ಲಿ ರೋಹಿತ್ ಶರ್ಮಾ ಭಾರತವನ್ನು ಮುನ್ನಡೆಸಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಭಾನುವಾರ ಖಚಿತಪಡಿಸಿದ್ದಾರೆ.
ಭಾನುವಾರ ಬಿಸಿಸಿಐ ಹಂಚಿಕೊಂಡ ವೀಡಿಯೊದಲ್ಲಿ ಮಾತನಾಡಿದ ಶಾ, ಕಳೆದ ನವೆಂಬರ್’ನಲ್ಲಿ ನಡೆದ ODI ವಿಶ್ವಕಪ್ ಫೈನಲ್’ನಲ್ಲಿ ಭಾರತವು ಆಘಾತಕಾರಿ ಸೋಲನ್ನು ಅನುಭವಿಸಿತ್ತು. ಆದರೆ T20 ವಿಶ್ವಕಪ್ ಮೂಲಕ ಮತ್ತೆ ಪುಟಿದೇಳಲು ರೋಹಿತ್’ಗೆ ಬೆಂಬಲ ನೀಡಿದ್ದೆ. ಅದು ನಿಜವಾಯಿತು” ಎನ್ನುತ್ತಾ ಸಂತಸ್ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಳೆಗಾಲದಲ್ಲಿ ಮನೆಯ ಮುಂದೆ ಈ ಗಿಡವನ್ನು ತೂಗು ಹಾಕಿ… ಹಲ್ಲಿ, ಜೇಡ, ಇರುವೆ, ಸೊಳ್ಳೆ ಇದ್ಯಾವುದೂ ಬರಲ್ಲ!
“ಚಾಂಪಿಯನ್ಸ್ ಟ್ರೋಫಿ ಮತ್ತು ಡಬ್ಲ್ಯುಟಿಸಿ ಫೈನಲ್’ನೊಂದಿಗೆ ರೋಹಿತ್ ನೇತೃತ್ವದಲ್ಲಿ ಭಾರತವು ಸರಣಿಯನ್ನು ಆಡಲಿದೆ. ಜೊತೆಗೆ ಪ್ರಶಸ್ತಿಯನ್ನೂ ಗೆಲ್ಲುವ ವಿಶ್ವಾಸವಿದೆ” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
“ ಏಕದಿನ ವಿಶ್ವಕಪ್’ನಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿದರೂ ಸಹ ಕಪ್ ಗೆಲ್ಲು ಆಗಲಿಲ್ಲ. ಆದರೆ ಜೂನ್ 29 ರಂದು ನಾವು ಗೆಲ್ಲುತ್ತೇವೆ ಎಂದು ನಾನು ರಾಜ್‌ಕೋಟ್’ನಲ್ಲಿ ಹೇಳಿದ್ದೆ. ಅದರಂತೆ ಇದೀಗ ಟಿ20 ವಿಶ್ವಕಪ್ ಗೆದ್ದು ಬಾರ್ಬಡೋಸ್’ನಲ್ಲಿ ಭಾರತದ ಧ್ವಜ ಹಾರಿಸಿದ್ದಾರೆ ನಮ್ಮ ನಾಯಕ. ಈ ಗೆಲುವಿನ ನಂತರ, ಮುಂಬರುವ ICC ಈವೆಂಟ್’ಗಳಾದ WTC ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ, ರೋಹಿತ್ ಶರ್ಮಾ ನಾಯಕತ್ವದಲ್ಲಿ ನಮ್ಮ ತಂಡವು ಚಾಂಪಿಯನ್ ಆಗಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ" ಎಂದಿದ್ದಾರೆ.
ಇದನ್ನೂ ಓದಿ: ಸಾಕ್ಷಾತ್ ಪಾರ್ವತಿ ದೇವಿಯೇ ಪೂಜಿಸಿದ್ದ ಆಷಾಢ ಮಾಸ: ಈ ರಾಶಿಗೆ ಗಜಕೇಸರಿ ಯೋಗ
ಸದ್ಯ ಟಿ20 ಸ್ವರೂಪದಿಂದ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದಾರೆ. ಆದರೆ ಟೆಸ್ಟ್ ಮತ್ತು ODI ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನೊಂದೆಡೆ, ಕೆಲ ಸಮಯಗಳಿಂದ ಹಾರ್ದಿಕ್ ಪಾಂಡ್ಯ T20I ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಅವರೇ ನಾಯಕನಾಗುವ ಸಾಧ್ಯತೆಯಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ