IPL 2022: ಐಪಿಎಲ್‌ನಲ್ಲಿ ಮತ್ತೆ ಪ್ರಸಿದ್ಧ ಮಹಿಳಾ ಆ್ಯಂಕರ್ ಎಂಟ್ರಿ
IPL 2022: ಐಪಿಎಲ್ ಅಭಿಮಾನಿಗಳಿಗೆ ಒಂದು ದೊಡ್ಡ ಸುದ್ದಿ ಇದೆ. ಐಪಿಎಲ್‌ಗೆ 2 ವರ್ಷಗಳ ನಂತರ, ಈ ಪ್ರಸಿದ್ಧ ಮಹಿಳಾ ಆಂಕರ್ ಎಂಟ್ರಿಯಾಗಲಿದ್ದಾರೆ. ಈ ಟೆಲಿವಿಷನ್ ಆಂಕರ್ ಭಾರತದ ಮಾಜಿ ಕ್ರಿಕೆಟಿಗನ ಪತ್ನಿ.
IPL 2022: ಐಪಿಎಲ್ ಅತಿ ದೊಡ್ಡ ಹಾಗೂ ಸ್ಟಾರ್ ಸ್ಟಡ್ ಕ್ರಿಕೆಟ್ ಲೀಗ್ ಎಂದು ಹೇಳಲಾಗುತ್ತದೆ. ಈ ಲೀಗ್ ಕೇವಲ ಕ್ರಿಕೆಟಿಗರಿಂದ ಮಾತ್ರವಲ್ಲದೆ ಸುಂದರ ಆಂಕರ್‌ಗಳಿಂದಲೂ ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿ ಉಳಿದಿದೆ. ಐಪಿಎಲ್ ಜನಪ್ರಿಯತೆಗೆ ಪ್ರಮುಖ ಕಾರಣವೆಂದರೆ ಪ್ರತಿ ವರ್ಷ ಈ ಲೀಗ್‌ನಲ್ಲಿ ಕಂಡುಬರುವ ಗ್ಲಾಮರ್. ಈ ಬಾರಿಯ ಐಪಿಎಲ್ ನಲ್ಲಿ ಈ ಗ್ಲಾಮರ್ ಇನ್ನಷ್ಟು ಹೆಚ್ಚಾಗಲಿದೆ. ಐಪಿಎಲ್ ಅಭಿಮಾನಿಗಳು ಪಂದ್ಯದ ಸಮಯದಲ್ಲಿ ಮತ್ತು ವಿರಾಮದ ಸಮಯದಲ್ಲಿ ತಮ್ಮ ನೆಚ್ಚಿನ ಮಹಿಳಾ ಆಂಕರ್‌ಗಳನ್ನು ವೀಕ್ಷಿಸಲು ಮರೆಯುವುದಿಲ್ಲ. ಈ ಐಪಿಎಲ್ ಉತ್ಸವದಲ್ಲಿ ಮತ್ತಷ್ಟು ಗ್ಲಾಮರ್ ಹೆಚ್ಚಿಸಲು ಮತ್ತೊಬ್ಬ ಮಹಿಳಾ ಆಂಕರ್ ಐಪಿಎಲ್ 2022ಕ್ಕೆ ಪ್ರವೇಶಿಸಲಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಚಿರಪರಿಚಿತ ಹೆಸರಾಗಿರುವ ಅವರು 2 ವರ್ಷಗಳ ನಂತರ ಮತ್ತೊಮ್ಮೆ ಐಪಿಎಲ್‌ಗೆ ಮರಳಲು ಸಿದ್ಧರಾಗಿದ್ದಾರೆ.
ಐಪಿಎಲ್‌ನಲ್ಲಿ ಮತ್ತೆ ಪ್ರಸಿದ್ಧ ಮಹಿಳಾ ಆ್ಯಂಕರ್ ಎಂಟ್ರಿ :
ಕಳೆದ ಎರಡು ವರ್ಷಗಳಿಂದ ತೆರೆ ಮೇಲೆ ಕಾಣದ ಮಾಯಾಂತಿ ಲ್ಯಾಂಗರ್ ಮತ್ತೊಮ್ಮೆ ಐಪಿಎಲ್‌ನಲ್ಲಿ (IPL) ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಹಿರಿಯ ದೂರದರ್ಶನ ನಿರೂಪಕ ಮತ್ತು ಭಾರತದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಅವರ ಪತ್ನಿ ಮಾಯಾಂತಿ ಲ್ಯಾಂಗರ್ ಅವರು ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ. ಎರಡು ವರ್ಷಗಳ ನಂತರ ಮಾಯಾಂತಿ ಮತ್ತೊಮ್ಮೆ ಸ್ಟಾರ್ ಸ್ಪೋರ್ಟ್ಸ್‌ನ ಪ್ರಸಾರ ತಂಡದ ಭಾಗವಾಗಲಿದ್ದಾರೆ.
ಇದನ್ನೂ ಓದಿ- IPL 2022: ಐಪಿಎಲ್ ಇತಿಹಾಸದಲ್ಲಿ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ ಈ 7 ವಿಶಿಷ್ಟ ದಾಖಲೆಗಳು
ಕಳೆದ 2 ಸೀಸನ್‌ಗಳಲ್ಲಿ ಮಾಯಾಂತಿ ಇರಲಿಲ್ಲ:
ಈ ಬಾರಿ ಐಪಿಎಲ್‌ನಲ್ಲಿ ಆ್ಯಂಕರಿಂಗ್ ಮಾಡಲಿದ್ದೇನೆ ಎಂದು ಸ್ವತಃ ಮಾಯಾಂತಿ ಲ್ಯಾಂಗರ್ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಮಾಯಾಂತಿ ಲ್ಯಾಂಗರ್ ತನ್ನ ಮಗುವಿನ ಜನನದ ಕಾರಣ ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅವರು ಐಪಿಎಲ್ 2020 (IPL 2022) ರ ಸೀಸನ್‌ನಿಂದ ಕಾಣೆಯಾದಾಗ ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ಇದು ಆಘಾತವನ್ನುಂಟು ಮಾಡಿತು. ಮಾಯಾಂತಿ ಅವರನ್ನು ಮತ್ತೆ ತೆರೆಯ ಮೇಲೆ ಕಾಣಲು ಅವರ ಲಕ್ಷಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಮಾಯಾಂತಿ ಲ್ಯಾಂಗರ್ (Mayanti Langer) ಅವರಲ್ಲದೆ ಸಂಜನಾ ಗಣೇಶನ್, ತಾನ್ಯಾ ಪುರೋಹಿತ್ ಮತ್ತು ನೆರೋಲಿ ಮೆಡೋಸ್ ಅವರಂತಹ ಆ್ಯಂಕರ್‌ಗಳು ಸಹ ಐಪಿಎಲ್ 2022 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ- IPL 2022: ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ, ಟಾಪ್ 5ರಲ್ಲಿ ಒಬ್ಬ ಭಾರತೀಯ
ಮಾಯಾಂತಿ ಮತ್ತು ಬಿನಿ ಪ್ರೇಮಕಥೆ :
ಮಾಯಾಂತಿ ಲ್ಯಾಂಗರ್ (Mayanti Langer) ಅವರು ಟೀಂ ಇಂಡಿಯಾದ ಮಾಜಿ ಆಟಗಾರ ಸ್ಟುವರ್ಟ್ ಬಿನ್ನಿ ಅವರ ಪತ್ನಿ. ಸ್ಟುವರ್ಟ್ ಬಿನ್ನಿ ಮತ್ತು ಮಾಯಾಂತಿ ದೀರ್ಘಕಾಲದವರೆಗೆ ಸ್ನೇಹಿತರಾಗಿದ್ದವರು. ಇವರಿಬ್ಬರೂ 2012 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಂಡಿಯನ್ ಕ್ರಿಕೆಟ್ ಲೀಗ್ ಸಂದರ್ಭದಲ್ಲಿ ಇಬ್ಬರೂ ಭೇಟಿಯಾಗಿದ್ದರು. ಮಾಯಾಂತಿ ಅವು ಬಿನ್ನಿಯ ಮೊದಲ ಸಂದರ್ಶನವನ್ನೂ ಮಾಡಿದ್ದರು. ಅದರ ನಂತರ ಈ ಪ್ರೇಮಕಥೆ ಪ್ರಾರಂಭವಾಯಿತು. ನಂತರ ಇಬ್ಬರೂ ತಮ್ಮ ಜೀವನವನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿದರು. ಮಾಯಾಂತಿ ಲ್ಯಾಂಗರ್ ಐಪಿಎಲ್‌ನ ಅತ್ಯಂತ ಪ್ರಸಿದ್ಧ ಆಂಕರ್‌ಗಳಲ್ಲಿ ಒಬ್ಬರು.
ಮಾರ್ಚ್ 26 ರಿಂದ ಐಪಿಎಲ್ ಆರಂಭವಾಗಲಿದೆ :
ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್‌ನ ಪ್ರಸ್ತುತ ಋತುವು ಮಾರ್ಚ್ 26 ರಿಂದ ಪ್ರಾರಂಭವಾಗುತ್ತಿದೆ ಮತ್ತು ಫೈನಲ್ ಪಂದ್ಯವು ಮೇ 29 ರಂದು ನಡೆಯಲಿದೆ. ಈ ಋತುವಿನ ಮೊದಲ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವೆ ನಡೆಯಲಿದೆ. ಪ್ರಸಕ್ತ ಟಿ20 ಲೀಗ್‌ನಿಂದ 8 ತಂಡಗಳ ಬದಲಾಗಿ 10 ತಂಡಗಳು ಇದರ ಭಾಗವಾಗಲಿವೆ. ಮೊದಲ ಪಂದ್ಯ CSK ಮತ್ತು KKR ನಡುವೆ ನಡೆಯಲಿದೆ. ಕಳೆದ ವರ್ಷದ ಫೈನಲ್ ಪಂದ್ಯ ಕೂಡ ಈ ಎರಡು ತಂಡಗಳ ನಡುವೆ ನಡೆದಿತ್ತು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.