IPL 2022: ಕನ್ನಡಿಗನಿಗೆ ಒಲಿದ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ಸ್ಥಾನ!

ಈಗ ಟೀಂ ಹೊಸ ನಾಯಕನ ಹೆಸರನ್ನು ಐಪಿಎಲ್ 2022 ರ 15 ನೇ ಆವೃತ್ತಿಗೆ ಮಯಾಂಕ್ ಅಗರ್ವಾಲ್ ಅವರನ್ನ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಪಂಜಾಬ್ ಫ್ರಾಂಚೈಸಿ ಘೋಷಿಸಿದೆ.

Written by - Channabasava A Kashinakunti | Last Updated : Feb 28, 2022, 02:37 PM IST
  • ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಪಂಜಾಬ್ ಕಿಂಗ್ಸ್
  • ಪಂಜಾಬ್ ಕಿಂಗ್ಸ್ ಮಯಾಂಕ್ ಅಗರ್ವಾಲ್ ನಾಯಕತ್ವ
  • ಮಯಾಂಕ್ ಎಂದು ಪಂಜಾಬ್ ಕಿಂಗ್ಸ್ ಪೋಸ್ಟ್ ಮಾಡಿರುವ ವಿಡಿಯೋ
IPL 2022: ಕನ್ನಡಿಗನಿಗೆ ಒಲಿದ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ಸ್ಥಾನ! title=

ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಪಂಜಾಬ್ ಕಿಂಗ್ಸ್ (PBKS) ತಂಡದ ನಾಯಕತ್ವವನ್ನ ಕನ್ನಡಿಗ ಕೆಎಲ್ ರಾಹುಲ್ ತೊರೆದ ನಂತರ ಮುಂದೆ ಯಾರು ಈ ತಂಡದ ಕ್ಯಾಪ್ಟನ್ ಅನ್ನುವ ಪ್ರಶ್ನೆ ಕಾಡುತ್ತಿತ್ತು? ಸದ್ಯ ಇದಲ್ಲೆ ಉತ್ತರ ಸಿಕ್ಕಿದೆ, IPL 2022 ರ ಮೆಗಾ ಹರಾಜಿನ ನಂತರ ತಂಡ ಬ್ಯಾಟ್ಸಮನ್ ಶಿಖರ್ ಧವನ್ ಅವರನ್ನು ಆಯ್ಕೆ ಮಾಡಿತು. ಆದರೆ, ಈಗ ಟೀಂ ಹೊಸ ನಾಯಕನ ಹೆಸರನ್ನು ಐಪಿಎಲ್ 2022 ರ 15 ನೇ ಆವೃತ್ತಿಗೆ ಮಯಾಂಕ್ ಅಗರ್ವಾಲ್ ಅವರನ್ನ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಪಂಜಾಬ್ ಫ್ರಾಂಚೈಸಿ ಘೋಷಿಸಿದೆ.

ಈ ಆರಂಭಿಕ ಆಟಗಾರ ಮಯಾಂಕ್  2018 ರಿಂದ ಪಂಜಾಬ್ ಕಿಂಗ್ಸ್‌(Punjab Kings)ನ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ತಂಡದ ಉಪನಾಯಕರಾಗಿ ಸೇವೆ ಸಲ್ಲಿಸಿದ್ದರು. ನಾಯಕನಾಗಿ ನೇಮಕಗೊಂಡ ಬಗ್ಗೆ ಮಾತನಾಡಿದ ಮಯಾಂಕ್ ಅಗರ್ವಾಲ್, ಮೆಗಾ ಹರಾಜಿನ ನಂತರ ರಚಿಸಲಾದ ಹೊಸ ತಂಡದ ಬಗ್ಗೆ ಮಾತನಾಡಿದರು.

ಇದನ್ನೂ ಓದಿ : IND vs SL: ರೋಹಿತ್‌ ಪಡೆಯಲ್ಲಿ ಕೊಹ್ಲಿಗಿಂತ ಅಪಾಯಕಾರಿ ಬ್ಯಾಟ್ಸ್‌ಮನ್

"ನಾನು 2018 ರಿಂದ ಪಂಜಾಬ್ ಕಿಂಗ್ಸ್‌(Punjab Kings)ನಲ್ಲಿದ್ದೇನೆ ಮತ್ತು ಈ ಅದ್ಭುತ ಘಟಕವನ್ನು ಪ್ರತಿನಿಧಿಸುವಲ್ಲಿ ನಾನು ತುಂಬಾ ಹೆಮ್ಮೆಪಡುತ್ತೇನೆ. ತಂಡವನ್ನು ಮುನ್ನಡೆಸುವ ಅವಕಾಶವನ್ನು ನೀಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ನಾನು ಈ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ತೆಗೆದುಕೊಳ್ಳುತ್ತೇನೆ, ಆದರೆ ಅದೇ ಸಮಯದಲ್ಲಿ, ಈ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ಪ್ರತಿಭೆಯಿಂದ ನನ್ನ ಕೆಲಸ ಸುಲಭವಾಗುತ್ತದೆ ಎಂದು ನಾನು ನಂಬುತ್ತೇನೆ. ನಮ್ಮ ಶ್ರೇಣಿಯಲ್ಲಿ ಕೆಲವು ಅಪಾರ ಅನುಭವಿ ಆಟಗಾರರು ಇದ್ದಾರೆ, ಜೊತೆಗೆ ಅನೇಕ ಪ್ರತಿಭಾವಂತ ಯುವಕರು ಅವಕಾಶವನ್ನು ಪಡೆದುಕೊಳ್ಳಲು ಮತ್ತು ಅದರೊಂದಿಗೆ ಆಡಲು ಉತ್ಸುಕರಾಗಿದ್ದಾರೆ, "ಮಯಾಂಕ್ ಎಂದು ಪಂಜಾಬ್ ಕಿಂಗ್ಸ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

"ನಾವು ಯಾವಾಗಲೂ ಪ್ರಶಸ್ತಿಯನ್ನು ಗೆಲ್ಲುವ ಭರವಸೆಯೊಂದಿಗೆ ಮೈದಾನಕ್ಕಿಳಿದಿದ್ದೇವೆ ಮತ್ತು ತಂಡವಾಗಿ ನಾವು ಮತ್ತೊಮ್ಮೆ ನಮ್ಮ ಚೊಚ್ಚಲ ಐಪಿಎಲ್ ಟ್ರೋಫಿ(IPL Tropi)ಯನ್ನು ಎತ್ತುವ ಈ ಗುರಿಯತ್ತ ಕೆಲಸ ಮಾಡುತ್ತೇವೆ. ತಂಡವನ್ನು ಮುನ್ನಡೆಸುವ ಈ ಹೊಸ ಪಾತ್ರವನ್ನು ನನಗೆ ವಹಿಸಿದ್ದಕ್ಕಾಗಿ ನಾನು ತಂಡದ ನಿರ್ವಹಣೆಗೆ ಧನ್ಯವಾದ ಹೇಳುತ್ತೇನೆ. ನಾನು ಹೊಸ ಸೀಸನ್ ಮತ್ತು ಅದರೊಂದಿಗೆ ಹೊಸ ಸವಾಲುಗಳನ್ನು ಎದುರು ನೋಡುತ್ತಿದ್ದೇನೆ, ”ಎಂದು ಅವರು ಸೇರಿಸಿದರು.

ಇದನ್ನೂ ಓದಿ : India vs Sri Lanka, 3rd T20I: ಅಬ್ಬರಿಸಿದ ಶ್ರೇಯಸ್ ಅಯ್ಯರ್, ಭಾರತಕ್ಕೆ ಆರು ವಿಕೆಟ್ ಗಳ ಜಯ

ಪಂಜಾಬ್ ಕಿಂಗ್ಸ್ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಅರ್ಷದೀಪ್ ಸಿಂಗ್, ಶಿಖರ್ ಧವನ್(Shikhar Dhawan), ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, ರಾಹುಲ್ ಚಾಹರ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಓಡಿಯನ್ ಸ್ಮಿತ್, ಸಂದೀಪ್ ಶರ್ಮಾ ಅಂಗದ್ ಬಾವಾ, ರಿಷಿ ಧವನ್, ಪ್ರೇರಕ್ ಮಂಕಡ್, ವೈಭವ್ ಅರೋರಾ, ರಿಟಿಕ್ ಚಟರ್ಜಿ, ಬಲ್ತೇಜ್ ಧಂಡಾ, ಅಂಶ್ ಪಟೇಲ್, ನಾಥನ್ ಎಲ್ಲಿಸ್, ಅಥರ್ವ ಟೈಡೆ, ಭಾನುಕಾ ರಾಜಪಕ್ಸೆ, ಬೆನ್ನಿ ಹೋವೆಲ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News