ನವದೆಹಲಿ: ಮಹೇಂದ್ರ ಸಿಂಗ್ ಧೋನಿ ತಮ್ಮ ವರ್ಚಸ್ವಿ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ T20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು ICC ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ‘ಕ್ಯಾಪ್ಟನ್ ಕೂಲ್’ ನಾಯಕತ್ವದಲ್ಲಿ ಅನೇಕ ಯುವ ಆಟಗಾರರ ವೃತ್ತಿಜೀವನ ಬೆಳಗಿತು.  ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಧೋನಿ ಪ್ರಸಿದ್ಧರಾಗಿದ್ದಾರೆ. ಜೋಗಿಂದರ್ ಶರ್ಮಾರಿಗೆ ಟಿ-20 ವಿಶ್ವಕಪ್‌ನಲ್ಲಿ ಕೊನೆಯ ಓವರ್ ನೀಡಿದ್ದು, ಚಾಂಪಿಯನ್ಸ್ ಟ್ರೋಫಿಯಲ್ಲಿ ರವಿಚಂದ್ರನ್ ಅಶ್ವಿನ್‍ಗೆ ಕೊನೆಯ ಓವರ್ ನೀಡಿದ್ದು ಹೀಗೆ ಅವರ ಪ್ರತಿಯೊಂದು ನಿರ್ಧಾರವೂ ಟೀಂ ಇಂಡಿಯಾಗೆ ದೊಡ್ಡ ಜಯ ತಂದುಕೊಟ್ಟಿವೆ.


COMMERCIAL BREAK
SCROLL TO CONTINUE READING

1. ವೀರೇಂದ್ರ ಸೆಹ್ವಾಗ್


ವೀರೇಂದ್ರ ಸೆಹ್ವಾಗ್ ಅವರನ್ನು ವಿಶ್ವದ ಅತ್ಯಂತ ಅಪಾಯಕಾರಿ ಆರಂಭಿಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಸೆಹ್ವಾಗ್ ಸ್ಫೋಟಕ ಬ್ಯಾಟಿಂಗ್‍ಗೆ ಬೌಲರ್‍ಗಳೇ ನಡುಗುತ್ತಿದ್ದರು. ಬೌಂಡರಿ ಬಾರಿಸುವುದರಲ್ಲಿ ಸೆಹ್ವಾಗ್ ಬಹಳ ಪ್ರಸಿದ್ಧರು. ಸೆಹ್ವಾಗ್ ಯಾವುದೇ ಪಿಚ್‍ನಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದರು. ಸೆಹ್ವಾಗ್ ಭಾರತ ತಂಡದ ಪರ 100 ಟೆಸ್ಟ್ ಪಂದ್ಯಗಳಲ್ಲಿ 23 ಶತಕಗಳು ಸೇರಿದಂತೆ 8,556ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆದರೆ ಕಳಪೆ ಫಾರ್ಮ್‌ನಿಂದ ಟೀಂ ಇಂಡಿಯಾದಿಂದ ಅವರನ್ನು ಕೈಬಿಡಲಾಯಿತು. ಇದರ ನಂತರ ಅವರು ನಿವೃತ್ತಿ ಘೋಷಿಸಿದರು. ಆದರೆ ಅನೇಕ ಸಂದರ್ಶನಗಳಲ್ಲಿ ಸೆಹ್ವಾಗ್ ಅವರು ಧೋನಿ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾರೆ.


ಇದನ್ನೂ ಓದಿ: MS Dhoni: ಎಂ.ಎಸ್.ಧೋನಿ ಮೊಣಕಾಲು ನೋವಿಗೆ 40 ರೂ. ಚಿಕಿತ್ಸೆ..!


2. ಗೌತಮ್ ಗಂಭೀರ್


ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ತಮ್ಮ ಕ್ರಿಕೆಟ್ ಜೀವನದಲ್ಲಿ ಭಾರತಕ್ಕೆ ಅನೇಕ ದೊಡ್ಡ ಯಶಸ್ಸನ್ನು ನೀಡಿದ್ದಾರೆ. 2007ರ ಟಿ-20 ವಿಶ್ವಕಪ್‌ನಲ್ಲಿ ಅವರು 75 ರನ್ ಗಳಿಸಿದ್ದರು. ಅದೇ ರೀತಿ 2011ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಗಂಭೀರ್ ತಮ್ಮ ಅದ್ಭುತ ಬ್ಯಾಟಿಂಗ್‍ನಿಂದ 97 ರನ್ ಗಳಿಸಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರ ಬ್ಯಾಟಿಂಗ್ ನೆರವಿನಿಂದ ಅಂದು ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಆಗಲು ಸಾಧ್ಯವಾಯಿತು. ಆದರೆ ಗಂಭೀರ್‍ಗೆ ಸಿಗಬೇಕಾದ ಈ ಕ್ರೆಡಿಟ್ ಅನ್ನು ಧೋನಿ ಕಸಿದುಕೊಂಡರು ಎಂಬ ಆರೋಪಗಳು ಕೇಳಿಬಂದಿದ್ದವು. ಧೋನಿ ನಾಯಕತ್ವದಲ್ಲಿ ಗೌತಮ್ ಗಂಭೀರ್ ಅವರನ್ನು ಯಾವಾಗಲೂ ಕಡೆಗಣಿಸಲಾಗುತ್ತಿತ್ತು.


3. ಪಾರ್ಥಿವ್ ಪಟೇಲ್


ಪಾರ್ಥಿವ್ ಪಟೇಲ್ 2002ರಲ್ಲಿ ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ್ದರು. ಆಗ ಅವರ ವಯಸ್ಸು ಕೇವಲ 17 ವರ್ಷ. ಅವರು ಎಂ.ಎಸ್.ಧೋನಿಗಿಂತ ಮೊದಲು ಟೀಂ ಇಂಡಿಯಾಕ್ಕೆ ಬಂದರು. ಆದರೆ ಧೋನಿ ತಮ್ಮ ಸ್ಥಾನವನ್ನು ಭದ್ರವಾಗಿಸಿದ ಬಳಿಕ ಈ ಆಟಗಾರನಿಗೆ ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಪಟೇಲ್ 2020ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ನಿವೃತ್ತಿಯ ನಂತರ ಪಾರ್ಥಿವ್ ಪಟೇಲ್ ಕಾಮೆಂಟೇಟರ್ ಆಗಿ ತಮ್ಮ ಇನ್ನಿಂಗ್ಸ್ ಆರಂಭಿಸಿದ್ದಾರೆ.


ಇದನ್ನೂ ಓದಿ: IND vs ENG : ಟೀಂ ಇಂಡಿಯಾಗೆ ಮರಳಿದ ಈ ಲೆಜೆಂಡರಿ ಬ್ಯಾಟ್ಸ್‌ಮನ್!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ