ಶುಭ್‌ಮನ್‌ ಗಿಲ್‌ ವಿರುದ್ಧ ರವಿಶಾಸ್ತ್ರಿ ಅಸಮಾಧಾನ: ಪಂದ್ಯದಿಂದ ಹೊರಬರುತ್ತಿದ್ದಂತೆ ಕ್ಲಾಸ್‌!

ಶುಭ್‌ಮನ್‌ ಗಿಲ್‌ ಪಂದ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರವಿಶಾಸ್ತ್ರಿ ಪೆವಿಲಿಯನ್‌ಗೆ ಬರುತ್ತಿದ್ದಂತೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. "ಆಫ್ ಸೈಡ್ ಹೊರಗೆ ಹೋಗುತ್ತಿದ್ದ ಚೆಂಡನ್ನು ಕಟ್ ಮಾಡುವ ಧಾವಂತದಲ್ಲಿ ಗಿಲ್‌ ಔಟಾಗಿದ್ದಾರೆ" ಎಂದು ಹೇಳಿದರು. 

Written by - Bhavishya Shetty | Last Updated : Jul 2, 2022, 09:46 AM IST
  • ಭಾರತ-ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್‌ ಪಂದ್ಯ
  • ರವಿಶಾಸ್ತ್ರಿ ಅಸಮಾಧಾನಕ್ಕೆ ಕಾರಣವಾದ ಶುಭ್‌ಮನ್‌ ಗಿಲ್‌ ಆಟ
  • ಕೇವಲ 17 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದ್ದ ಗಿಲ್‌
ಶುಭ್‌ಮನ್‌ ಗಿಲ್‌ ವಿರುದ್ಧ ರವಿಶಾಸ್ತ್ರಿ ಅಸಮಾಧಾನ: ಪಂದ್ಯದಿಂದ ಹೊರಬರುತ್ತಿದ್ದಂತೆ ಕ್ಲಾಸ್‌!  title=
India Vs England

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಮೇಲೆ ಕ್ರಿಕೆಟ್‌ ಅಭಿಮಾನಿ ಕಣ್ಣು ನೆಟ್ಟಿದೆ. ಈ ಪಂದ್ಯದ ಮೊದಲ ದಿನ ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದೆ. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ ಶುಭಮನ್ ಗಿಲ್ ಕಳಪೆ ಪ್ರದರ್ಶನ ನೀಡಿದ್ದು, ಇದು ರವಿಶಾಸ್ತ್ರಿ ಅಸಮಾಧಾನಕ್ಕೆ ಕಾರಣವಾಗಿದೆ. 

ಇದನ್ನೂ ಓದಿ: Viral News: ಮೊಸಳೆಯನ್ನೇ ವಿವಾಹವಾದ ಮೆಕ್ಸಿಕನ್ ಮೇಯರ್..!

ಭಾರತ ತಂಡದ ಓಪನರ್‌ ಆಗಿ ಕಣಕ್ಕಿಳಿದ ಶುಭ್‌ಮನ್‌ ಗಿಲ್‌, ಭರ್ಜರಿ ಆಟವಾಡುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದರು. ಆದರೆ ಕೇವಲ 17 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ. ರೋಹಿತ್‌ ಶರ್ಮಾ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಆಟದಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಆಟದ ಸ್ಥಾನವನ್ನು ತುಂಬುವ ಜವಾಬ್ದಾರಿ ಶುಭ್‌ಮನ್‌ ಮೇಲಿತ್ತು. ಆದರೆ ಜಾಕ್ ಕ್ರೌಲಿ ಎಸೆದ ವೇಗದ ಬಾಲ್‌ಗೆ ಸಿಕ್ಸ್‌ ಹೊಡೆಯಲು ಹೋಗಿ, ಜೇಮ್ಸ್ ಆಂಡರ್ಸನ್‌ಗೆ ಕ್ಯಾಚ್‌ ಕೊಟ್ಟು ಪೆವಿಲಿಯನ್‌ ಕಡೆ ಮುಖ ಮಾಡಿದರು. 

ಶುಭ್‌ಮನ್‌ ಗಿಲ್‌ ಪಂದ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರವಿಶಾಸ್ತ್ರಿ ಪೆವಿಲಿಯನ್‌ಗೆ ಬರುತ್ತಿದ್ದಂತೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. "ಆಫ್ ಸೈಡ್ ಹೊರಗೆ ಹೋಗುತ್ತಿದ್ದ ಚೆಂಡನ್ನು ಕಟ್ ಮಾಡುವ ಧಾವಂತದಲ್ಲಿ ಗಿಲ್‌ ಔಟಾಗಿದ್ದಾರೆ" ಎಂದು ಹೇಳಿದರು. 

ಕೆಎಲ್ ರಾಹುಲ್ ಗಾಯಗೊಂಡ ಹಿನ್ನೆಲೆಯಲ್ಲಿ ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಮುಂಬರುವ ಪಂದ್ಯಗಳಲ್ಲಿ ಆಡುವ ಸಂಭವ ಹೆಚ್ಚಾಗಿದೆ. ಒಂದು ವೇಳೆ ಚೇತರಿಸಿಕೊಂಡ ನಂತರ ವಾಪಸ್ಸಾದರೆ, ಶುಭ್‌ಮನ್‌ ಗಿಲ್‌ ಪ್ಲೇಯಿಂಗ್‌ ಇಲೆವೆನ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಭಾರತದ ನಂಬರ್ ಒನ್ ಆರಂಭಿಕ ಆಟಗಾರರು. 

ಇದನ್ನೂ ಓದಿ: Vegetable Price: ಕರ್ನಾಟಕದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ: ಗಮನಿಸಿ

ಪಂತ್-ಜಡೇಜಾ ಭರ್ಜರಿ ಪ್ರದರ್ಶನ: 
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ರವೀಂದ್ರ ಜಡೇಜಾ ಮತ್ತು ರಿಷಬ್ ಪಂತ್ ಬಿರುಸಿನ ಇನ್ನಿಂಗ್ಸ್ ಆಡಿದ್ದಾರೆ. ರಿಷಬ್ ಪಂತ್ 146 ರನ್‌ಗಳ ಭರ್ಜರಿ ಆಟವಾಡಿದರೆ, ರವೀಂದ್ರ ಜಡೇಜಾ ಅಜೇಯ 83 ರನ್ ಗಳಿಸಿದ್ದಾರೆ. ಭಾರತದ ಆಟಗಾರರು ಅದ್ಭುತ ಆಟ ಪ್ರದರ್ಶಿಸಿದರು. ಮೊದಲ ದಿನ ಭಾರತ ತನ್ನ ಬ್ಯಾಟ್ಸ್‌ಮನ್‌ಗಳ ಬಲದಿಂದ 7 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News