IPL 2023: ಟೂರ್ನಮೆಂಟ್ ಪ್ರಾರಂಭವಾಗುವ ಮೊದಲೇ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮಹತ್ವದ ಸುದ್ದಿ ಸಿಕ್ಕಿದೆ. IPL 2023 ರಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನು ಪಂದ್ಯಾವಳಿಯ ಆರಂಭಕ್ಕೂ ಮುಂಚೆಯೇ 238.89 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ ಈ ಆಟಗಾರ ಲಾಂಗ್ ಸಿಕ್ಸರ್ ಕೂಡ ಬಾರಿಸಿದ್ದರು. ಇದು ದೆಹಲಿ ಪಾಳೆಯದಲ್ಲಿ ನೆಮ್ಮದಿಯ ನಿಟ್ಟುಸಿರು ಬಂದಂತಾಗಿದೆ. ಇದೀಗ ಈ ಆಟಗಾರ, ಅಪಘಾತದಿಂದಾಗಿ ಇಡೀ ಐಪಿಎಲ್’ನಿಂದ ಹೊರಗುಳಿದಿದ್ದ ರಿಷಬ್ ಪಂತ್ ಅವರ ಸ್ಥಾನವನ್ನು ತುಂಬುವಂತಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪತ್ನಿ ಆಯೇಷಾ ಮುಖರ್ಜೀ ಜೊತೆಗಿನ ವಿಚ್ಚೇದನದ ಬಗ್ಗೆ ಕ್ರಿಕೆಟರ್ ಶಿಖರ್ ಧವನ್ ಹೇಳಿದ್ದೇನು?


ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ರೋವ್‌ಮನ್ ಪೊವೆಲ್, ಐಪಿಎಲ್ ಆರಂಭಕ್ಕೂ ಮುನ್ನವೇ ತಂಡದ ಮ್ಯಾನೇಜ್‌ಮೆಂಟ್‌ನಲ್ಲಿ ಸಂತಸ ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ರೋವ್‌ಮನ್‌ ಅಮೋಘ ಇನ್ನಿಂಗ್ಸ್‌ ಆಡಿದ್ದು, 18 ಎಸೆತಗಳನ್ನು ಎದುರಿಸಿ 43 ತ್ವರಿತ ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಈ ವೆಸ್ಟ್ ಇಂಡೀಸ್ ಕ್ರಿಕೆಟಿಗ 5 ಲಾಂಗ್ ಸಿಕ್ಸರ್ ಕೂಡ ಬಾರಿಸಿದ್ದಾರೆ.


ಕಾರು ಅಪಘಾತ ಸಂಭವಿಸಿದ ನಂತರ ಭೀಕರವಾಗಿ ಗಾಯಗೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ನ ನಿಯಮಿತ ನಾಯಕ ರಿಷಬ್ ಪಂತ್, ಇದೀಗ ಇಡೀ ಐಪಿಎಲ್ ಸೀಸನ್‌ನಿಂದ ಹೊರಗುಳಿದಿದ್ದಾರೆ. ಈ ಪರಿಸ್ಥಿತಿಯಲ್ಲಿ, ರೋವ್ಮನ್ ಪೊವೆಲ್ ಅವರ ಸ್ಥಾನಕ್ಕೆ ಹೊಂದಿಕೊಳ್ಳುತ್ತಾರೆ. ರಿಷಬ್ ಪಂತ್ ಕ್ರಿಕೆಟ್‌ನಲ್ಲಿ ದೊಡ್ಡ ಹಿಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, ಪೊವೆಲ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮ್ಯಾಚ್ ಫಿನಿಶರ್ ಪಾತ್ರವನ್ನು ವಹಿಸಬಹುದು.


ಇದನ್ನೂ ಓದಿ: Asia Cup 2023ಕ್ಕೆ ಪಾಕ್ ಆತಿಥ್ಯ! ಅರ್ಹತಾ ಪಂದ್ಯ ನಡೆಯೋದು ಈ ಸ್ಥಳದಲ್ಲಿ; ಆದ್ರೆ ಭಾರತ ಪ್ರವಾಸ..!!


ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ 3 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಪಂದ್ಯವನ್ನು ಗೆದ್ದುಕೊಂಡಿತು. ಕೇವಲ 18 ಎಸೆತಗಳನ್ನು ಎದುರಿಸಿ ವೇಗವಾಗಿ 43 ರನ್ ಗಳಿಸಿದ ರೋವ್ಮನ್ ಪೊವೆಲ್ ಈ ಪಂದ್ಯದ ಹೀರೋ ಎನಿಸಿಕೊಂಡರು. ಇದಕ್ಕಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ದಕ್ಷಿಣ ಆಫ್ರಿಕಾ 11 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 131 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ವಿಂಡೀಸ್ 10.3 ಓವರ್‌ಗಳಲ್ಲಿ ಈ ಗುರಿಯನ್ನು ಸಾಧಿಸಿ ಗೆಲುವು ಸಾಧಿಸಿತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.