ಮೆಲ್ಬೋರ್ನ್:  ಇಂಗ್ಲೆಂಡಿನ ಸ್ಪೋಟಕ ಬ್ಯಾಟ್ಸಮನ್ ಬೆನ್ ಸ್ಟೋಕ್ಸ್ ಈಗ ಆರು ವರ್ಷಗಳ ನಂತರ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ಟಿ20 ಫೈನಲ್ ನಲ್ಲಿ ತಮ್ಮ ಸಮಯೋಚಿತ ಆಟದಿಂದ ತಂಡಕ್ಕೆ ಆಸರೆಯಾಗುವ ಮೂಲಕ ಇಂಗ್ಲೆಂಡ್ ತಂಡವು ಎರಡನೇ ಬಾರಿ ಟಿ 20 ವಿಶ್ವಕಪ್ ಗೆಲ್ಲುವಲ್ಲಿ ನೆರವಾಗಿದ್ದಾರೆ.ಆ ಮೂಲಕ ಈ ಹಿಂದೆ  2016 ರ ಐಸಿಸಿ ಟಿ 20 ವಿಶ್ವಕಪ್ ಫೈನಲ್‌ನಲ್ಲಿ ಸೋಲಿಗೆ ಕಾರಣವಾಗಿದ್ದ ತಮ್ಮ ಕಹಿ ನೆನಪನ್ನು ಮರೆತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ನಿಮಗೆ ನೆನಪಿರಬಹುದು 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ 20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆ ಅಂತಿಮ ಓವರ್ ನಲ್ಲಿ 19 ರನ್ ಗಳ ಅಗತ್ಯವಿತ್ತು, ಇಂತಹ ಸಂದರ್ಭದಲ್ಲಿ ಇಂಗ್ಲೆಂಡ್ ತಂಡವು ಗೆಲ್ಲುವ ಹಂತದಲ್ಲಿತ್ತು, ಆದರೆ ಸ್ಟೋಕ್ಸ್ ಅವರ ಓವರ್ ನಲ್ಲಿ ವಿಂಡೀಸ್‌ನ ಆಲ್‌ರೌಂಡರ್ ಬ್ರಾಥ್‌ವೈಟ್ ಸತತ ನಾಲ್ಕು ಭರ್ಜರಿ ಸಿಕ್ಸರ್‌ಗಳನ್ನು ಹೊಡೆಯುವ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ ಎರಡನೇ ಟಿ20 ವಿಶ್ವಕಪ್ ನ್ನು ಗೆದ್ದುಕೊಟ್ಟಿದ್ದರು.


ಇಂಗ್ಲೆಂಡ್ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.


ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದರು.ಈಗ ವೆಸ್ಟ್ ಇಂಡೀಸ್ ನಂತರ ಎರಡನೇ ಬಾರಿಗೆ ವಿಶ್ವಕಪ್ ಗೆದ್ದ ಎರಡನೇ ತಂಡ ಎನ್ನುವ ಹೆಗ್ಗಳಿಕೆಗೆ ಇಂಗ್ಲೆಂಡ್ ತಂಡವು ಪಾತ್ರವಾಗಿದೆ.


ಆರಂಭದಲ್ಲಿ ಪಾಕ್ ನೀಡಿದ 138 ರನ್ ಗಳ ಗುರಿಯನ್ನು ಬೆನ್ನತ್ತಿದ  ಇಂಗ್ಲೆಂಡ್ ತಂಡವು ತಂಡದ ಮೊತ್ತ 32 ರನ್ ಆಗುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟದಲ್ಲಿ ಸಿಲುಕಿತ್ತು, ಆದರೆ ಈ ಹಂತದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ಸ್ಟೋಕ್ಸ್ ಅಜೇಯ 52 ರನ್ ಗಳಿಸುವ ಮೂಲಕ ಈಗ ಇಂಗ್ಲೆಂಡ್ ತಂಡಕ್ಕೆ ಸತತ ಎರಡು ವಿಶ್ವಕಪ್ ಗಳನ್ನು ತಂದುಕೊಟ್ಟ ಹೀರೋ ಎನಿಸಿಕೊಂಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್