India vs England 5th Test: ಯಶಸ್ವಿ ಜೈಸ್ವಾಲ್, ಭಾರತದ ಯುವ ಬ್ಯಾಟ್ಸ್‌ಮನ್. ಬ್ಯಾಟಿಂಗ್ ಮೂಲಕ ಎದುರಾಳಿಗಳ ನಿದ್ದೆಗೆಡಿಸಿರುವ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್. ಇದೇ ಟೆಸ್ಟ್ ಸರಣಿಯಲ್ಲಿ ಜೈಸ್ವಾಲ್ ದ್ವಿಶತಕ ಬಾರಿಸಿದ್ದರು. ಇದೀಗ 94 ವರ್ಷಗಳಷ್ಟು ಹಳೆಯ ಶ್ರೇಷ್ಠ ದಾಖಲೆಯ ಸಮೀಪಕ್ಕೆ ಬಂದಿದ್ದಾರೆ. ಧರ್ಮಶಾಲಾ ಟೆಸ್ಟ್‌’ನಲ್ಲಿ ದಾಖಲೆಗಳ ರಾಜ ಡಾನ್ ಬ್ರಾಡ್‌ಮನ್‌’ರನ್ನು ಸರಿಗಟ್ಟಲು ಜೈಸ್ವಾಲ್‌’ಗೆ ಉತ್ತಮ ಅವಕಾಶವಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಧರ್ಮಶಾಲಾದಲ್ಲಿ ಚಳಿಯ ಜೊತೆ ಮಳೆ! ಭಾರತ-ಇಂಗ್ಲೆಂಡ್ ಫೈನಲ್ ಟೆಸ್ಟ್’ಗೆ ಅಡೆತಡೆ…ಹವಾಮಾನ ವರದಿ


ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ದಾಖಲೆಯ ಇನ್ನಿಂಗ್ಸ್‌’ಗಳನ್ನು ಆಡಿದ್ದರು. ಮೊದಲ ಟೆಸ್ಟ್‌’ನಲ್ಲಿ ಜೈಸ್ವಾಲ್ ತಮ್ಮ ಶತಕಕ್ಕೆ ಕೇವಲ 20 ರನ್‌’ಗಳ ಅಂತರದಲ್ಲಿ ಉಳಿದಿದ್ದರು. ಇದಾದ ಬಳಿಕ ಎರಡನೇ ಟೆಸ್ಟ್‌’ನಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದರು. ಮೂರನೇ ಟೆಸ್ಟ್‌’ನಲ್ಲಿಯೂ 214 ರನ್ ಗಳಿಸುವ ಮೂಲಕ ತಂಡದ ಟ್ರಬಲ್‌ ಶೂಟರ್ ಎಂಬುದನ್ನು ಸಾಬೀತುಪಡಿಸಿದ್ದರು. ಎರಡು ದ್ವಿಶತಕಗಳ ನಂತರ, ಜೈಸ್ವಾಲ್ ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಸೇರಿಸಿಕೊಂಡಿದ್ದಾರೆ.


1930ರ ಆಶಸ್ ಸರಣಿಯಲ್ಲಿ ಡಾನ್ ಬ್ರಾಡ್ಮನ್ 3 ದ್ವಿಶತಕಗಳನ್ನು ಗಳಿಸಿದ್ದರು. ಅಂದಿನಿಂದ ಇಂದಿನವರೆಗೆ ಯಾವುದೇ ಬ್ಯಾಟ್ಸ್ ಮನ್ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಆದರೆ ಜೈಸ್ವಾಲ್‌’ಗೆ ಈ ದಾಖಲೆ ಸರಿಗಟ್ಟಲು ಉತ್ತಮ ಅವಕಾಶವಿದೆ. ಧರ್ಮಶಾಲ ಟೆಸ್ಟ್‌’ನಲ್ಲಿ ಈ ಸಾಧನೆ ಮಾಡಿದರೆ, ಇಂಥಾ ದಾಖಲೆ ಬರೆದ ಎರಡನೇ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ.


ಯಶಸ್ವಿ ಜೈಸ್ವಾಲ್ ಈ ಸರಣಿಯಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಬಳಿಕ ಟೆಸ್ಟ್ ಸರಣಿಯಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್. ಒಂದಲ್ಲ ಎರಡಲ್ಲ ಮೂರು ಬಾರಿ ವಿರಾಟ್ ಈ ಸಾಧನೆ ಮಾಡಿದ್ದಾರೆ.


ಇದನ್ನೂ ಓದಿ: ISRO ಮುಖ್ಯಸ್ಥ ಎಸ್ ಸೋಮನಾಥ್’ಗೆ ಕ್ಯಾನ್ಸರ್: Aditya-L1 ಉಡಾವಣೆಯ ದಿನವೇ ಪತ್ತೆಯಾಗಿತ್ತು ಕಾಯಿಲೆ


ಮಾರ್ಚ್ 7 ರಂದು ಧರ್ಮಶಾಲಾದಲ್ಲಿ ಇಂಗ್ಲೆಂಡ್ ಮತ್ತು ಭಾರತ ತಂಡಗಳು ಮುಖಾಮುಖಿಯಾಗಲಿವೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ