IND vs ENG: ಧರ್ಮಶಾಲಾದಲ್ಲಿ ಚಳಿಯ ಜೊತೆ ಮಳೆ! ಭಾರತ-ಇಂಗ್ಲೆಂಡ್ ಫೈನಲ್ ಟೆಸ್ಟ್’ಗೆ ಅಡೆತಡೆ… ಹೀಗಿದೆ ಹವಾಮಾನ ವರದಿ

IND vs ENG Weather Report: ಈ ಸಂದರ್ಭದಲ್ಲಿ ಧರ್ಮಶಾಲಾದಲ್ಲಿ ಮಳೆಯ ಜೊತೆ ಕೊರೆಯುವ ಚಳಿ ಕೂಡ ಇರಲಿದೆ. ಹೀಗಿರುವಾಗ ಫೈನಲ್ ಫೈಟ್’ಗೆ ಅನೇಕ ಅಡೆತಡೆಗಳು ಉಂಟಾಗಲಿವೆ. ಧರ್ಮಶಾಲಾದಲ್ಲಿನ ಹವಾಮಾನ ಮುನ್ಸೂಚನೆಯು ಶೀತ ಹವಾಮಾನ ಮತ್ತು ಆಲಿಕಲ್ಲು ಮಳೆ ಸೇರಿದಂತೆ ಐದು ದಿನಗಳ ಅವಧಿಯಲ್ಲಿ ಹಲವಾರು ಅಡಚಣೆಗಳನ್ನು ಸೂಚಿಸುತ್ತಿದೆ

Written by - Bhavishya Shetty | Last Updated : Mar 4, 2024, 06:02 PM IST
    • ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿ
    • ಟೀಂ ಇಂಡಿಯಾ ಈಗಾಗಲೇ ಸರಣಿಯಲ್ಲಿ ಅಜೇಯ 3-1 ಮುನ್ನಡೆ ಸಾಧಿಸಿದೆ
    • ಧರ್ಮಶಾಲಾದಲ್ಲಿ ಮಳೆಯ ಜೊತೆ ಕೊರೆಯುವ ಚಳಿ ಕೂಡ ಇರಲಿದೆ
IND vs ENG: ಧರ್ಮಶಾಲಾದಲ್ಲಿ ಚಳಿಯ ಜೊತೆ ಮಳೆ! ಭಾರತ-ಇಂಗ್ಲೆಂಡ್ ಫೈನಲ್ ಟೆಸ್ಟ್’ಗೆ ಅಡೆತಡೆ… ಹೀಗಿದೆ ಹವಾಮಾನ ವರದಿ title=
Dharamshala Weather Report

IND vs ENG Weather Report: ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿಯ ಕೊನೆಯ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಎರಡೂ ತಂಡಗಳು ಮಾರ್ಚ್ 7 ರಿಂದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್‌ಪಿಸಿಎ) ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಟೀಂ ಇಂಡಿಯಾ ಈಗಾಗಲೇ ಸರಣಿಯಲ್ಲಿ ಅಜೇಯ 3-1 ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ತನ್ನ 26 ವರ್ಷಗಳ ಹಿಂದಿನ ನಿರ್ಧಾರವನ್ನು ಏಕೆ ರದ್ದುಗೊಳಿಸಿತು? ತಿಳಿಯಿರಿ

ಆದರೆ ಈ ಸಂದರ್ಭದಲ್ಲಿ ಧರ್ಮಶಾಲಾದಲ್ಲಿ ಮಳೆಯ ಜೊತೆ ಕೊರೆಯುವ ಚಳಿ ಕೂಡ ಇರಲಿದೆ. ಹೀಗಿರುವಾಗ ಫೈನಲ್ ಫೈಟ್’ಗೆ ಅನೇಕ ಅಡೆತಡೆಗಳು ಉಂಟಾಗಲಿವೆ. ಧರ್ಮಶಾಲಾದಲ್ಲಿನ ಹವಾಮಾನ ಮುನ್ಸೂಚನೆಯು ಶೀತ ಹವಾಮಾನ ಮತ್ತು ಆಲಿಕಲ್ಲು ಮಳೆ ಸೇರಿದಂತೆ ಐದು ದಿನಗಳ ಅವಧಿಯಲ್ಲಿ ಹಲವಾರು ಅಡಚಣೆಗಳನ್ನು ಸೂಚಿಸುತ್ತಿದೆ

ಧರ್ಮಶಾಲಾದಲ್ಲಿ ಕನಿಷ್ಠ ತಾಪಮಾನ 4 ಡಿಗ್ರಿ ಸೆಲ್ಸಿಯಸ್ ಇರಲಿದೆ. ಪಂದ್ಯದ ಮೊದಲ ದಿನವಾದ ಗುರುವಾರ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಇದರಿಂದಾಗಿ ತಾಪಮಾನವು ರಾತ್ರಿ -4 ಡಿಗ್ರಿ ಸೆಲ್ಸಿಯಸ್ ಮತ್ತು ಹಗಲಿನಲ್ಲಿ 1 ಡಿಗ್ರಿ ಸೆಲ್ಸಿಯಸ್‌’ಗೆ ಇಳಿಯುವ ಸಾಧ್ಯತೆ ಇದೆ.

ಆದರೆ ಕೊಂಚ ನಿರಾಳತೆ ಏನೆಂದರೆ, ಪಂದ್ಯದ ಕೊನೆಯ ಮೂರು ದಿನಗಳ ಕಾಲ ಹವಾಮಾನವು ಸ್ಪಷ್ಟವಾಗಿರುತ್ತದೆ. ಅಕ್ಯುವೆದರ್‌ ಮುನ್ಸೂಚನೆಯ ಪ್ರಕಾರ, ಧರ್ಮಶಾಲಾದಲ್ಲಿ ಕಳೆದ ಮೂರು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ಮುನ್ಸೂಚನೆ ಇದೆ.

ಇಂಗ್ಲೆಂಡ್‌’ಗೆ ಲಾಭ

ಚಳಿಯ ವಾತಾವರಣದಿಂದಾಗಿ ಇಂಗ್ಲೆಂಡ್ ಆಟಗಾರರಿಗೆ ತವರಿನಂತೆ ಭಾಸವಾಗಬಹುದು. HPCA ಸ್ಟೇಡಿಯಂ ಈ ಹಿಂದೆ 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಆಯೋಜಿಸಿತ್ತು. ಕಳೆದ ವರ್ಷ ಇದೇ ಮೈದಾನದಲ್ಲಿ ಭಾರತ ಆಸ್ಟ್ರೇಲಿಯದ ವಿರುದ್ಧ ಟೆಸ್ಟ್ ಆಡಬೇಕಿತ್ತು. ಆದರೆ ಔಟ್ ಫೀಲ್ಡ್ ಕೆಟ್ಟ ಕಾರಣ ಇಂದೋರ್’ನಲ್ಲಿ ಪಂದ್ಯ ಆಯೋಜಿಸಲಾಗಿತ್ತು.

ಇದನ್ನೂ ಓದಿ: ISRO ಮುಖ್ಯಸ್ಥ ಎಸ್ ಸೋಮನಾಥ್’ಗೆ ಕ್ಯಾನ್ಸರ್: Aditya-L1 ಉಡಾವಣೆಯ ದಿನವೇ ಪತ್ತೆಯಾಗಿತ್ತು ಕಾಯಿಲೆ

ಭಾರತ ಮತ್ತು ಇಂಗ್ಲೆಂಡ್‌ ಆಟಗಾರರು ಈಗಾಗಲೇ ಟೆಸ್ಟ್ ಪಂದ್ಯಕ್ಕಾಗಿ ಧರ್ಮಶಾಲಾ ತಲುಪಿದ್ದಾರೆ. ನಾಲ್ಕನೇ ಟೆಸ್ಟ್‌’ನಲ್ಲಿ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾಗೆ ಮರಳಿದ್ದಾರೆ. ಇಂಗ್ಲೆಂಡ್ ತಂಡ ಜೇಮ್ಸ್ ಆಂಡರ್ಸನ್ ಮತ್ತು ಮಾರ್ಕ್ ವುಡ್ ಅವರೊಂದಿಗೆ ಫೀಲ್ಡಿಂಗ್ ಮಾಡುವ ಸಾಧ್ಯತೆ ಇದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News