6 ವರ್ಷ ಕಾದರೂ ಸಿಗದ ಸಿಗದ ಚಾನ್ಸ್… ಟೀಂ ಇಂಡಿಯಾ ಬಿಟ್ಟು ಈ ತಂಡ ಸೇರಿದ ಸ್ಟಾರ್ ಸ್ವಿಂಗ್ ಬೌಲರ್!
Bhuvneshwar Kumar Ranji Trophy: ಇತ್ತೀಚೆಗೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಭುವನೇಶ್ವರ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮುಷ್ತಾಕ್ ಟ್ರೋಫಿಯಲ್ಲಿ 16 ವಿಕೆಟ್ ಪಡೆದಿದ್ದರೆ, ವಿಜಯ್ ಹಜಾರೆ ಟ್ರೋಫಿಯಲ್ಲಿ 11 ವಿಕೆಟ್ ಪಡೆದು ಕಮಾಲ್ ಮಾಡಿದ್ದರು.
Bhuvneshwar Kumar Ranji Trophy: ಭಾರತ ಕ್ರಿಕೆಟ್’ನಲ್ಲಿ ಒಂದೊಮ್ಮೆ ತಮ್ಮ ಸ್ವಿಂಗ್ ಬೌಲಿಂಗ್ ಕೌಶಲ್ಯದಿಂದಲೇ ಸದ್ದು ಮಾಡಿದ್ದ ವೇಗಿ ಭುವನೇಶ್ವರ್ ಕುಮಾರ್ ಮತ್ತೊಮ್ಮೆ ರೆಡ್ ಬಾಲ್ ಕ್ರಿಕೆಟ್’ನಲ್ಲಿ ಪುನರಾಗಮನ ಮಾಡುತ್ತಿದ್ದಾರೆ. ಕೊನೆಯ ಬಾರಿಗೆ 2018 ರಲ್ಲಿ ರೆಡ್-ಬಾಲ್ ಕ್ರಿಕೆಟ್ ಆಡಿದ್ದರು ಭುವಿ. ಆ ಟೆಸ್ಟ್ ಪಂದ್ಯ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿತ್ತು. ಇದೀಗ ಭುವನೇಶ್ವರ್ ಕುಮಾರ್ ಮತ್ತೊಮ್ಮೆ ಕ್ರಿಕೆಟ್’ನ ಸುದೀರ್ಘ ಸ್ವರೂಪದಲ್ಲಿ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಮುಂದಿನ ವರ್ಷ ಜನವರಿ 5 ರಿಂದ ಪ್ರಾರಂಭವಾಗುವ ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶ ತಂಡದ ಭಾಗವಾಗಲಿದ್ದಾರೆ. ಆದರೆ ಕೇರಳ ವಿರುದ್ಧ ಮೊದಲ ಪಂದ್ಯ ಆಡುತ್ತಿಲ್ಲ. ಉಳಿದ ಋತುವಿನಲ್ಲಿ ತಂಡದಲ್ಲಿ ಆಯ್ಕೆಗೆ ಲಭ್ಯವಿರುತ್ತಾರೆ.
ಇದನ್ನೂ ಓದಿ: 2023ರಲ್ಲಿ ಅತೀ ಹೆಚ್ಚು ಜನ ಗೂಗಲ್‌ನಲ್ಲಿ ಹುಡುಕಾಡಿದ ʼಸೆಕ್ಸ್ʼ ಭಂಗಿಗಳು ಮತ್ತು ಪ್ರಶ್ನೆಗಳು.!
ಇತ್ತೀಚೆಗೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಭುವನೇಶ್ವರ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮುಷ್ತಾಕ್ ಟ್ರೋಫಿಯಲ್ಲಿ 16 ವಿಕೆಟ್ ಪಡೆದಿದ್ದರೆ, ವಿಜಯ್ ಹಜಾರೆ ಟ್ರೋಫಿಯಲ್ಲಿ 11 ವಿಕೆಟ್ ಪಡೆದು ಕಮಾಲ್ ಮಾಡಿದ್ದರು.
ಟೆಸ್ಟ್ ಅಂಕಿ ಅಂಶ
ಅಂದಹಾಗೆ ಭುವನೇಶ್ವರ್ ಕುಮಾರ್ ಟೆಸ್ಟ್ ಅಂಕಿಅಂಶಗಳನ್ನು ನೋಡುವುದಾದರೆ, ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಭಾರತದ ಪರ 21 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ 26ರ ಸರಾಸರಿ ಮತ್ತು 53 ಸ್ಟ್ರೈಕ್ ರೇಟ್’ನೊಂದಿಗೆ 63 ವಿಕೆಟ್‌ಗಳನ್ನು ಪಡೆದಿದ್ದಾರೆ. ಬ್ಯಾಟ್ ಮೂಲಕ 552 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್’ನ 70 ಪಂದ್ಯಗಳಲ್ಲಿ 218 ವಿಕೆಟ್ ಪಡೆದರೆ, 2433 ರನ್ ಕಲೆ ಹಾಕಿದ್ದಾರೆ. ಭುವನೇಶ್ವರ್ ಕೊನೆಯ ಬಾರಿಗೆ 2022 ರಲ್ಲಿ ODI ಪಂದ್ಯದಲ್ಲಿ ಭಾರತೀಯ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಅಂದಿನಿಂದ ಈವರೆಗೆ ಯಾವುದೇ ಸ್ವರೂಪದಲ್ಲಿ ಅವಕಾಶ ಸಿಕ್ಕಿಲ್ಲ.
ಜನವರಿ 5 ರಿಂದ ರಣಜಿ ಟ್ರೋಫಿ ಆರಂಭ:
ರಣಜಿ ಟ್ರೋಫಿ ಜನವರಿ 5 ರಿಂದ ಆರಂಭವಾಗಲಿದೆ. ಭಾರತದ ಈ ದೇಶೀಯ ಪಂದ್ಯಾವಳಿಯಲ್ಲಿ ಅನೇಕ ಪ್ರಮುಖ ಕ್ರಿಕೆಟಿಗರು ಭಾಗವಾಗಲಿದ್ದಾರೆ. ಸೌರಾಷ್ಟ್ರ 2022-23 ಆವೃತ್ತಿಯನ್ನು ಗೆದ್ದುಕೊಂಡಿದ್ದರೆ, ಬಂಗಾಳ ರನ್ನರ್-ಅಪ್ ಆಗಿ ಹೊರಹೊಮ್ಮಿತ್ತು. ಯುಪಿ ಪ್ರದರ್ಶನ ಕಳೆದ ಸೀಸನ್’ನಲ್ಲಿ ಉತ್ತಮವಾಗಿ ಇರಲಿಲ್ಲ. ಆಡಿದ 7 ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ ಆರನೇ ಸ್ಥಾನ ಪಡೆದಿದ್ದರು.
ಇದನ್ನೂ ಓದಿ: Trisha: ಸಲ್ಮಾನ್ ಖಾನ್ ಜೊತೆ ಬಾಲಿವುಡ್ ಗೆ ರೀ ಎಂಟ್ರಿ ಕೊಡಲಿರುವ ಲಿಯೋ ಬ್ಯೂಟಿ.. ಯಾವ ಸಿನಿಮಾ ಗೊತ್ತಾ?
ಕೇರಳ ವಿರುದ್ಧದ ಪಂದ್ಯಕ್ಕೆ ಯುಪಿ ತಂಡ:
ಆರ್ಯನ್ ಜುಯಲ್, ಮಾಧವ್ ಕೌಶಿಕ್, ಸಮರ್ಥ್ ಸಿಂಗ್, ರಿಂಕು ಸಿಂಗ್, ಧ್ರುವ್ ಜುರೆಲ್, ಸಮೀರ್ ರಿಜ್ವಿ, ಕರಣ್ ಶರ್ಮಾ, ಅಕ್ಷದೀಪ್ ನಾಥ್, ಪ್ರಿಯಾಂ ಗಾರ್ಗ್, ಪ್ರಿನ್ಸ್ ಯಾದವ್, ಯಶ್ ದಯಾಳ್, ಅಂಕಿತ್ ರಜಪೂತ್, ಕಾರ್ತಿಕ್ ತ್ಯಾಗಿ, ಕುಲದೀಪ್ ಯಾದವ್, ಸೌರಭ್ ಕುಮಾರ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.