2023ರಲ್ಲಿ ಅತೀ ಹೆಚ್ಚು ಜನ ಗೂಗಲ್‌ನಲ್ಲಿ ಹುಡುಕಾಡಿದ ʼಸೆಕ್ಸ್‌ʼ ಭಂಗಿಗಳು ಮತ್ತು ಪ್ರಶ್ನೆಗಳು.! ಇಲ್ಲಿವೆ

New Year 2024 : ಗೂಗಲ್ ಮಾನವನ ಅವಿಭಾಜ್ಯ ಅಂಗವಾಗಿದೆ. ಜಲವಿಲ್ಲದೆ ಇರಬಹುದು ಆದರೆ ಅಂತರ್ಜಾಲವಿಲ್ಲದೆ ಬದುಕಲಾರರು ಎನ್ನುವ ಮಟ್ಟಕ್ಕೆ ತಲುಪಿದೆ. ಅಲ್ಲದೆ, ಜೀವನ ಹೇಗೆ ನಡೆಸಬೇಕು ಎನ್ನುವುದರಿಂದ ಹಿಡಿದು, ಯಾವ ರೀತಿ ಉಸಿರಾಡಿದರೆ ಉತ್ತಮ ಅಂತ ಜನರ ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಾರೆ. ಈ ಪೈಕಿ ಲೈಂಗಿಕತೆಯ ಬಗ್ಗೆಯೂ ಸಹ ಹುಡುಕಾಡಿದ್ದಾರೆ. 

Written by - Krishna N K | Last Updated : Dec 30, 2023, 01:45 PM IST
  • ಗೂಗಲ್ ಮಾನವನ ಅವಿಭಾಜ್ಯ ಅಂಗ.
  • ಪ್ರತಿಯೊಂದನ್ನು ಸಹ ಜನರ ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಾರೆ.
  • ಈ ಪೈಕಿ ಲೈಂಗಿಕತೆಯ ಬಗ್ಗೆಯೂ ಸಹ ಹುಡುಕಾಡಿದ್ದಾರೆ.
2023ರಲ್ಲಿ ಅತೀ ಹೆಚ್ಚು ಜನ ಗೂಗಲ್‌ನಲ್ಲಿ ಹುಡುಕಾಡಿದ ʼಸೆಕ್ಸ್‌ʼ ಭಂಗಿಗಳು ಮತ್ತು ಪ್ರಶ್ನೆಗಳು.! ಇಲ್ಲಿವೆ title=

Year ender 2023 : ಲೈಂಗಿಕತೆ ವಿಚಾರ ಬಂದಾಗ ಬಹುತೇಕ ಜನರು ತುಟಿ ಬಿಚ್ಚುವುದಿಲ್ಲ. ಅಲ್ಲದೆ, ಯಾರೂ ಇಲ್ಲದ ವೇಳೆ ಮೆಲ್ಲನೆ ಮೊಬೈಲ್‌ ಇಲ್ಲವೆ ಕಂಪ್ಯೂಟರ್‌ ಮೂಲಕ ಗೂಗಲ್‌ನಲ್ಲಿ ಸರ್ಚ್‌ ಮಾಡಿ ಮಾಹಿತಿ ಪಡೆಯುತ್ತಾರೆ. 2023 ರಲ್ಲಿ ಜನರು ಗೂಗಲ್‌ನಲ್ಲಿ ಅತೀ ಹೆಚ್ಚು ಸೆಕ್ಸ್‌ ಕುರಿತಾಗಿ ಸರ್ಚ್‌ ಮಾಡಿದ ಪ್ರಶ್ನೆಗಳು ಯಾವುವು ಗೊತ್ತೆ..? ಇಲ್ಲಿವೆ ನೋಡಿ..

2023 ರಲ್ಲಿ ಜನರು ಲೈಂಗಿಕತೆಯ ಬಗ್ಗೆ ಹುಡುಕಾಡಿದ ಪ್ರಮುಖ ಪ್ರಶ್ನೆಗಳನ್ನು Google ಬಹಿರಂಗಪಡಿಸಿದೆ. ಆ ಫಲಿತಾಂಶಗಳು ಬಹುಷಃ ನಿಮಗೆ ಆಶ್ಚರ್ಯ ತರಬಹುದು. 2023 ರಲ್ಲಿ ಹೆಚ್ಚು ಗೂಗಲ್ ಮಾಡಿದ ಲೈಂಗಿಕ ಪ್ರಶ್ನೆ ಅಂದ್ರೆ, "ಸ್ಪೀಡ್‌ ಬಂಪ್ ಭಂಗಿʼ ಎಂದರೇನು?".

ಇದನ್ನೂ ಓದಿ: ಕ್ಯಾರೆಟ್‌ ಜ್ಯೂಸ್‌ ಟೇಸ್ಟಿ ಜೊತೆಗೆ ಆರೋಗ್ಯಕ್ಕೂ ಇದೆ ಭರಪೂರ ಪ್ರಯೋಜನ

ಹೌದು.. ಸ್ಪೀಡ್‌ ಬಂಪ್ ಭಂಗಿ ಕುರಿತು ಅತೀ ಹೆಚ್ಚು ಜನರು ಹುಡುಕಾಟ ನಡೆಸಿದ್ದಾರೆ. ಈ ಪೈಕಿ ಜೋಡಿಗಳೇ ಹೆಚ್ಚು. ಸ್ಪೀಡ್‌ ಬಂಪ್ ಭಂಗಿ ಅಂದ್ರೆ ಒಂದು ದಿಂಬಿನ ಮೇಲೆ ಯುವತಿಯನ್ನು ಮಲಗಿಸಿ ಹಿಂಬಾಗದಿಂದ ಸಂಭೋಗ ಮಾಡುವ ಒಂದು ಶೃಂಗಾರ ಭಂಗಿಯಾಗಿದೆ. "ಲವ್ ಐಲ್ಯಾಂಡ್" ಶೋದಲ್ಲಿ ಸ್ಪರ್ಧಿಯೊಬ್ಬರು ಈ ಕುರಿತು ಮಾತನಾಡಿದ ನಂತರ ಜನರ ಹೆಚ್ಚಾಗಿ ಗೂಗಲ್‌ ಮಾಡಲು ಪ್ರಾರಂಭಿಸಿದರು. 

ಎರಡನೇಯದಾಗಿ ಹೆಚ್ಚು ಗೂಗಲ್ ಮಾಡಿದ ಪ್ರಶ್ನೆ ಯಾವುದು ಅಂದ್ರೆ, ಗರ್ಭಾವಸ್ಥೆಯಲ್ಲಿ ಲೈಂಗಿಕತೆಯನ್ನು ಹೊಂದುವುದು ಸರಿಯೇ..?. ಗರ್ಭಿಣಿಯಾಗಿದ್ದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಬಹುದೆ ಅಂತ ತಿಳಿದುಕೊಳ್ಳಲು ಜನರು ಗೂಗಲ್‌ ಮೊರೆ ಹೋಗಿದ್ದರು. ಈ ಕುರಿತು ಹೇಳುವುದಾದರೆ, ನೀವು ಗರ್ಭಿಣಿಯಾಗಿರುವಾಗ ಲೈಂಗಿಕತೆ ಮತ್ತು ಪರಾಕಾಷ್ಠೆಯನ್ನು ಹೊಂದುವುದು ಸುರಕ್ಷಿತ” ಅಂತ ಆಸ್ಟ್ರೇಲಿಯಾದ ಪೋಷಕರ ವೆಬ್‌ಸೈಟ್  ರೈಸಿಂಗ್ ಚಿಲ್ಡ್ರನ್ ಹೇಳುತ್ತದೆ.

"ಸೆಕ್ಸ್ ಮಗುವಿಗೆ ಹಾನಿ ಮಾಡುತ್ತದೆ ಎಂದು ನೀವು ಚಿಂತಿಸಬಹುದು. ಆದರೆ ಮಗುವನ್ನು ಆಮ್ನಿಯೋಟಿಕ್ ಎಂಬ ಚೀಲ ಸುತ್ತುವರೆದಿರುತ್ತದೆ. ಅದಕ್ಕೆ ರಕ್ಷಣೆ ನೀಡಿರುತ್ತದೆ. ಆದ್ದರಿಂದ ಸಂಭೋಗದ ಸಮಯದಲ್ಲಿ ಮಗುವಿಗೆ ಯಾವುದೇ ಹಾನಿಯಾಗುವುದಿಲ್ಲ ಅಂತ ಹೇಳಿದ್ದಾರೆ.  

ಇದನ್ನೂ ಓದಿ:ಮಲಬದ್ದತೆ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ ! ಹಾಗಾದರೆ ಚಿಂತೆ ಬೇಡ ಇಲ್ಲಿದೆ ಪರಿಹಾರ

"ಸೆಕ್ಸ್ ಪಾಸಿಟಿವಿಟಿ" ಈ ಅತೀ ಹೆಚ್ಚು ಜನ ಹುಡುಕಾಡಿದ ಮೂರನೆ ಪ್ರಶ್ನೆ, ಲೈಂಗಿಕತೆಯ ನಂತರ ಏಕೆ ರಕ್ತಸ್ರಾವವಾಗುತ್ತೆ..? ಎಂಬುವುದು ನಾಲ್ಕನೇ ಪ್ರಶ್ನೆಯಾಗಿದೆ. ತಜ್ಞರ ಪ್ರಕಾರ, ಕೆಲವೊಮ್ಮೆ ಸಂಭೋಗದ ನಂತರ ಚರ್ಮದ ಕಿರಿಕಿರಿ ಅಥವಾ ಯೋನಿ ಶುಷ್ಕತೆಯ ಪರಿಣಾಮವಾಗಿದೆ. ಆದರೆ ಅಪರೂಪದ ಸಂದರ್ಭಗಳಲ್ಲಿ, ಕೊಯಿಟಲ್ ರಕ್ತಸ್ರಾವವು STI ಅಥವಾ ಯೋನಿ ಸೋಂಕನ್ನು ಸೂಚಿಸುತ್ತದೆ, ಆದ್ದರಿಂದ ವೈದ್ಯರನ್ನು ಪರೀಕ್ಷಿಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.

5ನೇ ಪ್ರಶ್ನೆ ಯಾವುದು ಅಂದ್ರೆ, ಅಪರಿಚಿತರ ಜೊತೆ ಸಂಭೋಗ ನಡೆಸುವ ಮೊದಲು ಎಷ್ಟು ದಿನಗಳು ಕಳೆಯಬೇಕು ಅಂತ ನಾಟಿಯಾಗಿ ಹುಡುಕಾಡಿದ್ದಾರೆ. ಅಲ್ಲದೆ, ಇನ್ನೂ ಕೆಲವರು, ಸಂಭೋಗದ ಸಮಯದಲ್ಲಿ ಎಷ್ಟು ಕ್ಯಾಲೊರಿಗಳು ಸುಡುತ್ತವೆ ಅಂತ ಕಂಡುಹಿಡಿಯಲು ಬಯಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News