ನವದೆಹಲಿ: ಇತ್ತೀಚಿಗೆ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ದುಬೈನಲ್ಲಿ ನಡೆದ ವರ್ಲ್ಡ್ ಸೂಪರ್ ಸೀರಿಸ್ ನಲ್ಲಿ ಜಪಾನಿನ ಆಟಗಾರ್ತಿ ಅಕಾನೆ ಯಮಗುಚಿ ಯವರ ವಿರುದ್ದ 21-15, 12-21, 21-19 ಅಂತರದಲ್ಲಿ ಸೋಲನ್ನಪ್ಪಿದ್ದಳು. 



COMMERCIAL BREAK
SCROLL TO CONTINUE READING

ಆ ಮೂಲಕ ಈ ವರ್ಷದಲ್ಲಿ ಸತತವಾಗಿ ಮೂರು ಪ್ರತಿಷ್ಠಿತ ಟೂರ್ನಿಗಳಾದ ರಿಯೋ ಒಲಂಪಿಕ್ಸ್ ಗ್ಲಾಸ್ಗೋ ವಿಶ್ವ ಚಾಂಪಿಯನ್ಶಿಪ್ ಮತ್ತು ಈಗಿನ ದುಬೈ ವರ್ಲ್ಡ್ ಸೀರಿಸ್ ನಲ್ಲಿ ಸೋಲುವ ಮೂಲಕ ಮಹತ್ವದ ದಾಖಲೆಯನ್ನು ಮಾಡುವ ಅವಕಾಶದಿಂದ ವಂಚಿತಳಾಗಿದ್ದಳು. 


ಇದಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್  ತಮ್ಮ ಟ್ವೀಟ್ ಮೂಲಕ ಸಿಂಧುರವರನ್ನು ಸಮಾಧಾನ ಪಡಿಸಿದ್ದಾರೆ. "ಸಿಂಧು ಅನಾರೋಗ್ಯದ ನಡುವೆಯೂ ನೀನು ಹೋರಾಟದ ಆಟವನ್ನು ಆಡಿದ್ದಿಯಾ,ಇಂತಹ ಸೋಲು ನಿನ್ನನ್ನು ಇನ್ನು ಗಟ್ಟಿಗೊಳಿಸುತ್ತದೆ"ಎಂದು ಟ್ವಿಟ್ಟರ್ ಮೂಲಕ ಸಮಾಧಾನ ಹೇಳಿದ್ದಾರೆ.