ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕ್ರಿಕೆಟ್ ಲೀಗ್ ಆಗಿದೆ. ಕ್ರಿಕೆಟಿಗರು ಇಲ್ಲಿ ಆಡುವ ಮೂಲಕ ಸಂಪತ್ತು ಮತ್ತು ಕೀರ್ತಿ ಎರಡನ್ನೂ ಪಡೆಯುತ್ತಾರೆ. ಈಗ ಐಪಿಎಲ್ 2023 ಮಿನಿ ಹರಾಜಿನ ಬಗ್ಗೆ ದೊಡ್ಡ ಸುದ್ದಿ ಬರುತ್ತಿದೆ. ಈ ಬಗ್ಗೆ ಅಭಿಮಾನಿಗಳಲ್ಲಿ ಹುಮ್ಮಸ್ಸು ಮೂಡಿದೆ. ಐಪಿಎಲ್ 2022ರಲ್ಲಿ 10 ತಂಡಗಳು ಭಾಗವಹಿಸಿದ್ದವು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: India vs Hong Kong : ಹಾಂಕಾಂಗ್ ವಿರುದ್ಧ ರಾಹುಲ್ ಬದಲಿಗೆ ಈ ಆಟಗಾರ : ರೋಹಿತ್ ಜೊತೆ ಹೊಸ ಓಪನರ್!


ಈ ದಿನಾಂಕದಂದು ಮಿನಿ ಹರಾಜು:


ಎಲ್ಲಾ ಕ್ರಿಕೆಟ್ ಅಭಿಮಾನಿಗಳು IPL 2023 ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ವರದಿ ಪ್ರಕಾರ, ಮಿನಿ ಹರಾಜಿನ ತಯಾರಿ ಈಗಾಗಲೇ ಪ್ರಾರಂಭವಾಗಿದೆ. ಮುಂದಿನ ಋತುವಿನ ಹರಾಜು ಡಿಸೆಂಬರ್ 16 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕೊರೊನಾ ಅವಧಿಯ ನಂತರ ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಹೋಮ್-ಅವೇ ಫಾರ್ಮ್ಯಾಟ್ ಹಿಂತಿರುಗುತ್ತದೆ. ಈಗ ಅಭಿಮಾನಿಗಳು ಐಪಿಎಲ್ ಅನ್ನು ಹಳೆಯ ಮಾದರಿಯಲ್ಲಿ ನೋಡುತ್ತಾರೆ.


ಐಪಿಎಲ್ 2022ರ ಮೆಗಾ ಹರಾಜಿನಲ್ಲಿ, ಪರ್ಸ್ 90 ಕೋಟಿ ರೂ., ಆದರೆ ಐಪಿಎಲ್ 2023ಕ್ಕೆ ಅದು 95 ಕೋಟಿ ರೂ. ಅಂದರೆ 5 ಕೋಟಿ ಹೆಚ್ಚಿರಬಹುದು. ಈ ವರ್ಷ ಸಣ್ಣ ಹರಾಜು ನಡೆಯಲಿದೆ. ಸೌರವ್ ಗಂಗೂಲಿ ಅವರು ಸೆಪ್ಟೆಂಬರ್ 22 ರಂದು ರಾಜ್ಯ ಸಂಘಗಳಿಗೆ ಬರೆದ ಪತ್ರದಲ್ಲಿ "ಪುರುಷರ ಐಪಿಎಲ್‌ನ ಮುಂದಿನ ಹೋಮ್-ವೇ ಮಾದರಿಯಲ್ಲಿ ನಡೆಯಲಿದೆ" ಎಂದು ಉಲ್ಲೇಖಿಸಿದ್ದಾರೆ. ಇದರಲ್ಲಿ ಎಲ್ಲಾ 10 ತಂಡಗಳು ತಮ್ಮ ತವರು ಪಂದ್ಯಗಳನ್ನು ತಮ್ಮ ಗೊತ್ತುಪಡಿಸಿದ ಸ್ಥಳಗಳಲ್ಲಿ ಆಡುತ್ತವೆ.


ಐಪಿಎಲ್ 2022 ಅನ್ನು ಭಾರತದಲ್ಲಿ ಮಾತ್ರ ಆಡಲಾಯಿತು. ಆದರೆ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ, ಇದನ್ನು ಕೇವಲ ಮೂರು ನಗರಗಳಲ್ಲಿ ಮಾತ್ರ ಆಯೋಜನೆ ಮಾಡಲಾಯಿತು. ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆದಿತ್ತು. ಇನ್ನು, ಸೆಮಿಫೈನಲ್ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಿತು. ಆದರೆ ಐಪಿಎಲ್ 2023 ರಲ್ಲಿ, ತಂಡಗಳು ತಮ್ಮ ತವರು ಮೈದಾನದಲ್ಲಿ ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: Ind vs HK : ಹಾಂಕಾಂಗ್ ಟೀಂಗೆ ಶತ್ರುವಾಗಿ ಕಾಡಲಿದ್ದಾರೆ ಭಾರತದ ಈ 3 ಆಟಗಾರರು! 


ಐಪಿಎಲ್ 2022ರಲ್ಲಿ 10 ತಂಡಗಳು ಭಾಗವಹಿಸಿದ್ದವು. ಅಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಗುಜರಾತ್ ಟೈಟಾನ್ಸ್ ಪ್ರಶಸ್ತಿ ಗೆದ್ದುಕೊಂಡಿತು. ಮುಂಬೈ ಇಂಡಿಯನ್ಸ್ ಲೀಗ್‌ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಐದು ಬಾರಿ ಟ್ರೋಫಿ ವಶಪಡಿಸಿಕೊಂಡಿದೆ. ಇನ್ನೊಂದೆಡೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದಿದೆ. 10 ತಂಡಗಳು ಕಣಕ್ಕಿಳಿದಿರುವುದರಿಂದ ಲೀಗ್‌ನ ರೋಚಕತೆ ಹೆಚ್ಚಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.