Asia Cup 2022, IND vs HK: ಹಾಂಗ್ ಕಾಂಗ್‌ನ ಈ ಆಟಗಾರರಿಂದ ರೋಹಿತ್ ಸೇನೆಗೆ ಅಪಾಯ!

ಹಾಂಗ್ ಕಾಂಗ್‌ನ ಮೂವರು ಆಟಗಾರರಿಂದ ಭಾರತ ತಂಡವು ಎಚ್ಚರಿಕೆಯಿಂದ ಆಡಬೇಕಿದೆ. ಈ ಆಟಗಾರರು ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.   

Written by - Puttaraj K Alur | Last Updated : Aug 31, 2022, 01:03 PM IST
  • ಇಂದು ಬಲಿಷ್ಠ ಟೀಂ ಇಂಡಿಯಾ ದುರ್ಬಲ ಹಾಂಗ್ ಕಾಂಗ್ ನಡುವೆ ಸೆಣಸಾಟ
  • ಹಾಂಗ್‍ ಕಾಂಗ್‍ನ ಮೂವರು ಆಟಗಾರರಿಂದ ಭಾರತ ತಂಡಕ್ಕೆ ಅಪಾಯ
  • ಹಾಂಕ್ ಕಾಂಗ್ ಮತ್ತು ಟೀಂ ಇಂಡಿಯಾ ನಡುವೆ ಇದೇ ಮೊದಲ ಪಂದ್ಯ
Asia Cup 2022, IND vs HK: ಹಾಂಗ್ ಕಾಂಗ್‌ನ ಈ ಆಟಗಾರರಿಂದ ರೋಹಿತ್ ಸೇನೆಗೆ ಅಪಾಯ!  title=
Ind Vs HK Asia Cup 2022

ನವದೆಹಲಿ: ಏಷ್ಯಾ ಕಪ್‌ನ ಮೊದಲ ಪಂದ್ಯದಲ್ಲಿ ಭಾರತವು ಪಾಕಿಸ್ತಾನ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಟಿ.20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿತು. ಇಂದು (ಆಗಸ್ಟ್ 31) ಟೀಂ ಇಂಡಿಯಾ ಹಾಂಗ್ ಕಾಂಗ್‌ ನಂತಹ ದುರ್ಬಲ ತಂಡದೊಂದಿಗೆ ಪೈಪೋಟಿ ನಡೆಸಬೇಕಿದೆ. ಭಾರತ ಮತ್ತು ಹಾಂಗ್ ಕಾಂಗ್‌ನ ನಡುವೆ ಇದುವರೆಗೆ ಯಾವುದೇ ಪಂದ್ಯ ನಡೆದಿಲ್ಲ. ಹಾಂಗ್ ಕಾಂಗ್ ಅನೇಕ ಉತ್ತಮ ಆಟಗಾರರನ್ನು ಹೊಂದಿದೆ. ಈ ಆಟಗಾರರು ರೋಹಿತ್ ಶರ್ಮಾ ಪಡೆಗೆ ಯಾವುದೇ ಹಂತದಲ್ಲಿ ಅಪಾಯವನ್ನುಂಟು ಮಾಡಬಹುದು.

ಉತ್ತಮ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗ ಹೊಂದಿರುವ ಹಾಂಗ್ ಕಾಂಗ್‌ ತಂಡವು ಕೆಲವು ಶ್ರೇಷ್ಠ ಆಟಗಾರರನ್ನು ಹೊಂದಿದೆ. ಇವರು ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸುವ ನಿಪುಣತೆ ಹೊಂದಿದ್ದಾರೆ. ಹಾಂಗ್ ಕಾಂಗ್‌ನ ಈ ಆಟಗಾರರ ಬಗ್ಗೆ ರೋಹಿತ್ ಸೇನೆ ಎಚ್ಚರಿಕೆ ವಹಿಸಬೇಕಾಗಿದೆ. ಈ ಆಟಗಾರರು ಯಾರು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಮತ್ತೆ ನಡೆಯಲಿದೆ ಇಂಡೋ-ಪಾಕ್ ಟಿ20 ಪಂದ್ಯ! ಉಚಿತ ವೀಕ್ಷಣೆಗೆ ಹೀಗೆ ಮಾಡಿ

1. ಕಿಂಚಿತ್ ಶಾ

ಕಿಂಚಿತ್ ಶಾ ಹಾಂಗ್ ಕಾಂಗ್‌ ತಂಡದಲ್ಲಿ ಆಲ್ ರೌಂಡರ್ ಆಗಿ ಸ್ಥಾನ ಪಡೆದಿದ್ದಾರೆ. ಕಿಂಚಿತ್ 9 ಡಿಸೆಂಬರ್ 1995ರಂದು ಮುಂಬೈನಲ್ಲಿ ಜನಿಸಿದರು. ನಂತರ ಅವರು ಹಾಂಗ್ ಕಾಂಗ್‌ ಗೆ ತೆರಳಿ ಅಲ್ಲಿಯೇ ನೆಲೆಸಿದರು. ಭಾರತ ವಿರುದ್ಧದ ಪಂದ್ಯದಲ್ಲಿ ಹಾಂಗ್ ಕಾಂಗ್‌ನ ಪ್ಲೇಯಿಂಗ್ 11ಗೆ ಇವರನ್ನು ಸೇರಿಸಿಕೊಳ್ಳಬಹುದು. ಟಿ-20 ಕ್ರಿಕೆಟ್ ಆಡಿದ ಅನುಭವ ಇವರಿಗಿದೆ. 43 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿರುವ ಅವರು 633 ರನ್ ಗಳಿಸಿದ್ದಾರೆ.

2.ಆಯುಷ್ ಶುಕ್ಲಾ

ಆಯುಷ್ ಶುಕ್ಲಾ ಅವರನ್ನು ಬೌಲರ್ ಆಗಿ ಹಾಂಗ್ ಕಾಂಗ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇವರು ಇದುವರೆಗೆ ಐದು ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರು 5 ವಿಕೆಟ್ ಪಡೆದಿದ್ದಾರೆ. ಅವರು ಟಿ-20 ಕ್ರಿಕೆಟ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಯುಎಇ ವಿರುದ್ಧ ಈ ಆಟಗಾರ 30 ರನ್‌ಗಳಿಗೆ 3 ಪ್ರಮುಖ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಈ ಆಟಗಾರನ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಭೇಟಿಯಾದ ಈ ವ್ಯಕ್ತಿ ಯಾರು ಗೊತ್ತೇ? ಪಾಕ್‌ ಸೋಲಿನ ಬಗ್ಗೆ ನಡೆಯಿತು ಚರ್ಚೆ

3. ಅಹಾನ್ ತ್ರಿವೇದಿ

17 ವರ್ಷದ ಅಹಾನ್ ತ್ರಿವೇದಿ ಏಷ್ಯಾಕಪ್‌ಗಾಗಿ ಹಾಂಗ್ ಕಾಂಗ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಂಗ್ ಕಾಂಗ್‌ ತಂಡಕ್ಕೆ ಅವರು ಇನ್ನೂ ಪದಾರ್ಪಣೆ ಮಾಡಿಲ್ಲ. ಹಾಂಗ್ ಕಾಂಗ್‌ನ ಪರ ಈ ಆಟಗಾರ ದೇಶೀಯ ಸರ್ಕ್ಯೂಟ್‌ನಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಈ ಕಾರಣಕ್ಕೆ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇವರ ಆಟದ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ಹೀಗಿರುವಾಗ ಈ ಆಟಗಾರನ ಬಗ್ಗೆ ಟೀಂ ಇಂಡಿಯಾ ಎಚ್ಚರಿಕೆಯಿಂದ ಆಡಬೇಕಿದೆ.

ಇದಲ್ಲದೆ ಇನ್ನೂ ಅನೇಕ ಉತ್ತಮ ಆಟಗಾರರನ್ನು ಹಾಂಗ್ ಕಾಂಗ್‌ ಹೊಂದಿದೆ. ನೋಡಲು ದುರ್ಬಲ ತಂಡವೆನಿಸಿದರೂ ಹಾಂಗ್ ಕಾಂಗ್‌ ತಂಡವನ್ನು ಸುಲಭವಾಗಿ ತೆಗೆದುಕೊಳ್ಳುವಂತಿಲ್ಲ. ಹೀಗಾಗಿ ಇಂದಿನ ಪಂದ್ಯದ ಫಲಿತಾಂಶದ ಬಗ್ಗೆ ಪ್ರತಿಯೊಬ್ಬರಿಗೂ ತೀವ್ರ ಕುತೂಹಲ ಮೂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News