Shah Rukh Khan-Virat Kohli: ಶಾರುಖ್-ವಿರಾಟ್ ಫ್ಯಾನ್ಸ್ ನಡುವೆ ಮಹಾಯುದ್ಧ: ಆ ಒಂದು ಪ್ರಶ್ನೆ ಕೇಳಿದಕ್ಕೆ ಹೊತ್ತಿ ಉರಿಯಿತು ಇಂಟರ್ನೆಟ್!
Shah Rukh Khan-Virat Kohli Fans War: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ವಿರಾಟ್ ಕೊಹ್ಲಿ ಕಾಣಿಸಿಕೊಂಡರೆ ಕೊಲ್ಕತ್ತಾ ನೈಟ್ ರೈಡರ್ಸ್ ಮೂಲಕ ಶಾರುಖ್ ಖಾನ್ ಅವರನ್ನು ಕಾಣಬಹುದು. ಆದರೆ ಇದೀಗ ಈ ಇಬ್ಬರು ಲೆಜೆಂಡ್’ಗಳ ವಿಚಾರದಲ್ಲಿ ಇಂಟರ್ನೆಟ್’ನಲ್ಲಿ ಕಿಚ್ಚು ಹೊತ್ತಿದೆ.
Shah Rukh Khan-Virat Kohli Fans War: ಶಾರುಖ್ ಖಾನ್ ಮತ್ತು ವಿರಾಟ್ ಕೊಹ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಇಬ್ಬರು ಐಕಾನ್‌ಗಳು. ಇವರಿಬ್ಬರನ್ನೂ ರಾಷ್ಟ್ರದ ದೊಡ್ಡ ಬ್ರ್ಯಾಂಡ್’ಗಳೆಂದು ಕರೆದರೆ ತಪ್ಪಾಗಲಾರದು. ಇವರಿಬ್ಬರನ್ನು ಒಂದಾಗಿ ಕಾಣುವ ಸ್ಥಳವೆಂದರೆ ಇಂಡಿಯನ್ ಪ್ರೀಮಿಯರ್ ಲೀಗ್.
ಇದನ್ನೂ ಓದಿ: BCCI : ಟೀಂ ಇಂಡಿಯಾ ಈ 7 ಆಟಗಾರರಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ವಿರಾಟ್ ಕೊಹ್ಲಿ ಕಾಣಿಸಿಕೊಂಡರೆ ಕೊಲ್ಕತ್ತಾ ನೈಟ್ ರೈಡರ್ಸ್ ಮೂಲಕ ಶಾರುಖ್ ಖಾನ್ ಅವರನ್ನು ಕಾಣಬಹುದು. ಆದರೆ ಇದೀಗ ಈ ಇಬ್ಬರು ಲೆಜೆಂಡ್’ಗಳ ವಿಚಾರದಲ್ಲಿ ಇಂಟರ್ನೆಟ್’ನಲ್ಲಿ ಕಿಚ್ಚು ಹೊತ್ತಿದೆ.
ಈ ಇಬ್ಬರು ಸೆಲೆಬ್ರಿಟಿಗಳಲ್ಲಿ ಯಾರು ಫೇಮಸ್ ಎಂಬ ಪ್ರಶ್ನೆ ಕೇಳಿದ್ದೇ ತಡ, ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್’ಗೆ ಇಳಿದಿದ್ದಾರೆ. ಶಾರುಖ್ ಖಾನ್ ಅಭಿಮಾನಿಗಳು, ವಿರಾಟ್ ಕೊಹ್ಲಿ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ ಎಂದು ಹೇಳಿದರೆ, ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಕಿಂಗ್ ಖಾನ್’ಗಿಂತ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಅಂತ ಕೊಹ್ಲಿ ಫ್ಯಾನ್ಸ್ ಹೇಳುತ್ತಿದ್ದಾರೆ.
ಶಾರುಖ್ ಖಾನ್ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಅತ್ಯಂತ ಗೌರವಾನ್ವಿತ ತಾರೆಗಳಲ್ಲಿ ಒಬ್ಬರು. ವಿರಾಟ್ ಕೊಹ್ಲಿ ಭಾರತದ ಹೆಮ್ಮೆಯನ್ನು ಕಾಯ್ದುಕೊಂಡು ಬರುತ್ತಿರುವವರು. ವಿರಾಟ್ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರು ಶಾರುಖ್ ಖಾನ್ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಅವರ ಜೊತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಲ್ಲದೆ, ತಮ್ಮ ವೃತ್ತಿಜೀವನಕ್ಕೆ ಬ್ರೇಕ್ ಕೊಟ್ಟಿರುವ ಸಿನಿಮಾ ಕೂಡ ಅವರ ಜೊತೆಯೇ ನಟಿಸಿದ್ದಾಗಿದೆ. ಆದರೆ ದುಃಖಕರವೆಂದರೆ, ನೈಜ ಪ್ರಪಂಚವು ವರ್ಚುವಲ್ ಪ್ರಪಂಚಕ್ಕಿಂತ ಭಿನ್ನವಾಗಿದೆ.
ಇದನ್ನೂ ಓದಿ: Team India: ಟೀಂ ಇಂಡಿಯಾದ ಸ್ಟಾರ್ ಆಟಗಾರನ ತಂದೆ ನಾಪತ್ತೆ: ತೀವ್ರ ಹುಡುಕಾಟ!!
ಶಾರುಖ್ ಖಾನ್ ಮತ್ತು ವಿರಾಟ್ ಕೊಹ್ಲಿ ಯಾವಾಗಲೂ ಪರಸ್ಪರ ಗೌರವಯುತವಾಗಿ ಮಾತನಾಡುತ್ತಾರೆ. ಆಗಾಗ್ಗೆ ತಮ್ಮ ಸಂದರ್ಶನಗಳಲ್ಲಿ ಪರಸ್ಪರ ಮೆಚ್ಚುಗೆಯನ್ನು ಹೊರಹಾಕುತ್ತಾರೆ. ಆದರೆ, ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳ ನಡುವೆ ನಡೆದ ಜಗಳ ಕೊಂಚ ವಿಚಿತ್ರ ಅನಿಸುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.