BJP Leader Suicide Case: ಮಧ್ಯಪ್ರದೇಶದ ವಿದಿಶಾದಲ್ಲಿ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಬಿಜೆಪಿ ಮುಖಂಡರೊಬ್ಬರು ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರರೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿದಿಶಾದ ಈ ಬಿಜೆಪಿ ನಾಯಕನ ಹೆಸರು ಸಂಜೀವ್ ಮಿಶ್ರಾ. ತನ್ನ ಇಬ್ಬರು ಪುತ್ರರ ವಾಸಿಯಾಗದ ಕಾಯಿಲೆಯಿಂದ ಅವರು ಕಂಗಾಲಾಗಿದ್ದರು. ಈ ಕಾರಣಕ್ಕಾಗಿಯೇ ಗುರುವಾರ ಸಂಜೆ ಪತ್ನಿ ಹಾಗೂ ಇಬ್ಬರು ಪುತ್ರರಿಗೆ ವಿಷವುಣಿಸಿ, ತಾನೂ ಕೂಡ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಎರಡು ಬಂಬಾಟ್ ಯೋಜನೆಗಳನ್ನು ಬಿಡುಗಡೆಗೊಳಿಸಿದ ಭಾರ್ತಿ ಏರ್ಟೆಲ್


ಬಿಜೆಪಿಯ ವಿದಿಶಾ ಮಂಡಲದ ಮುಖ್ಯಸ್ಥ ಸುರೇಂದ್ರ ಸಿಂಗ್ ಚೌಹಾಣ್ ಮಾತನಾಡಿ, ವಿದಿಶಾದ ಬಂಟಿ ನಗರ ಪ್ರದೇಶದಲ್ಲಿ ವಾಸಿಸುವ ಸಂಜೀವ್ ಮಿಶ್ರಾ ಅವರು ಬಿಜೆಪಿ ವಿದಿಶಾ ನಗರ ಮಂಡಲದ ಉಪಾಧ್ಯಕ್ಷರಾಗಿದ್ದರು. ಅವರು ಬಿಜೆಪಿಯ ಮಾಜಿ ಕೌನ್ಸಿಲರ್ ಕೂಡ ಆಗಿದ್ದರು. ಸಂಜೀವ್ ಮಿಶ್ರಾ ಅವರು ಗುರುವಾರ ಸಂಜೆ 6 ಗಂಟೆ ಸುಮಾರಿಗೆ “ದೇವರು, ಶತ್ರುಗಳ ಮಕ್ಕಳಿಗೆ ಸಹ ಈ ಡುಚೆನ್ ಸ್ನಾಯುಕ್ಷಯ (ಡಿಎಂಡಿ) ರೋಗವನ್ನು ನೀಡಬಾರದು” ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಬರೆದಿದ್ದಾರೆ ಅಂತಾ ಹೇಳಿದರು.


ಇದನ್ನು ನೋಡಿದ ಸಂಜೀವ್ ಮಿಶ್ರಾ ಅವರ ಪರಿಚಯಸ್ಥರು ಅವರ ಮನೆಗೆ ಆಗಮಿಸಿದಾಗ ಸಂಜೀವ್, ಅವರ ಪತ್ನಿ ನೀಲಂ ಮಿಶ್ರಾ ಮತ್ತು ಇಬ್ಬರು ಮಕ್ಕಳಾದ ಅನ್ಮೋಲ್ ಮತ್ತು ಸಾರ್ಥಕ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಕ್ಷಣವೇ ಎಲ್ಲರನ್ನೂ ತರಾತುರಿಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಅದಾಗಲೆ ನಾಲ್ವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


ಇದೇ ವೇಳೆ ಸಂಜೀವ್ ಮಿಶ್ರಾ ಅವರ ಪುತ್ರರಿಬ್ಬರಿಗೂ ಡಿಎಂಡಿ ಎಂಬ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಅದಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಎಂದು ವಿದಿಶಾ ಡಿಎಂ ಉಮಾಶಂಕರ್ ಭಾರ್ಗವ ಹೇಳಿದ್ದಾರೆ. ಅಲ್ಲದೇ ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಇದರಲ್ಲಿ ತಮ್ಮ ಮಕ್ಕಳನ್ನು ಉಳಿಸಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ಇನ್ನು ಮುಂದೆ ನಾವು ಬದುಕಲು ಬಯಸುವುದಿಲ್ಲ ಎಂದು ಬರೆದಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಎಸ್ಪಿ ಸಮೀರ್ ಯಾದವ್ ತಿಳಿಸಿದ್ದಾರೆ. ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ.


ಇದನ್ನೂ ಓದಿ: ಈ ದಿನಾಂಕದಂದು ಹುಟ್ಟಿದ ಮಕ್ಕಳು ಹುಟ್ಟಿನಿಂದಲೇ ಅದೃಷ್ಟದ ಒಡೆಯರು.!


ಡುಚೆನ್ ಮಸ್ಕ್ಯುಲರ್ ಡಿಸ್ಟ್ರೋಫಿ ಕಾಯಿಲೆ ಎಂದರೇನು?


ಡುಚೆನ್ ಮಸ್ಕ್ಯುಲರ್ ಡಿಸ್ಟ್ರೋಫಿ (DMD) ಸ್ನಾಯು ದೌರ್ಬಲ್ಯಕ್ಕೆ ಸಂಬಂಧಿಸಿದ ಆನುವಂಶಿಕ ಮತ್ತು ಗಂಭೀರ ಕಾಯಿಲೆಯಾಗಿದೆ. DMD ಮುಖ್ಯವಾಗಿ ಹುಡುಗರ ಮೇಲೆ ಪರಿಣಾಮ ಬೀರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.