ಎರಡು ಬಂಬಾಟ್ ಯೋಜನೆಗಳನ್ನು ಬಿಡುಗಡೆಗೊಳಿಸಿದ ಭಾರ್ತಿ ಏರ್ಟೆಲ್

Airtel 5G Recharge Plans: ಹೊಸ ವರ್ಷದಲ್ಲಿ ಭಾರ್ತಿ ಏರ್ಟೆಲ್ ಎರಡು ಬಂಬಾಟ್ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆಗೊಳಿಸಿದೆ. ಕಂಪನಿ 489 ಹಾಗೂ 509 ರೂ.ಗಳ ಪ್ರಿಪೇಡ್ ಯೋಜನೆಗಳನ್ನು ಬಿಡುಗಡೆಗೊಳಿಸಿ ಅದರಲ್ಲಿ ಬಂಬಾಟ್ ಕೊಡುಗೆಗಳನ್ನೂ ನೀಡುತ್ತಿದೆ.

Written by - Nitin Tabib | Last Updated : Jan 27, 2023, 10:06 AM IST
  • ಏರ್ಟೆಲ್ 30 ದಿನಗಳ ಮಾನ್ಯತೆಯೊಂದಿಗೆ 489 ರೂಗಳ ಪ್ರಿಪೇಯ್ಡ್ ಯೋಜನೆ ಬಿಡುಗಡೆಗೊಳಿಸಿದೆ.
  • ಇದು ಅನಿಯಮಿತ ಕರೆ, 300 ಎಸ್‌ಎಂಎಸ್ ಅನ್ನು ಒಳಗೊಂಡಿದೆ.
  • ಇದಲ್ಲದೆ, 50 ಜಿಬಿ ಡೇಟಾವನ್ನು 30 ದಿನಗಳವರೆಗೆ ನೀಡಲಾಗುತ್ತಿದೆ.
ಎರಡು ಬಂಬಾಟ್ ಯೋಜನೆಗಳನ್ನು  ಬಿಡುಗಡೆಗೊಳಿಸಿದ ಭಾರ್ತಿ ಏರ್ಟೆಲ್  title=
ಏರ್ಟೆಲ್ ಪ್ರಿಪೇಯ್ಡ್ ಯೋಜನೆಗಳು

Best Prepaid Plans: ಭಾರ್ತಿ ಏರ್ಟೆಲ್ ಹೊಸ ವರ್ಷದಲ್ಲಿ ತನ್ನ ಗ್ರಾಹಕರಿಗಾಗಿ ಎರಡು ಜಬರ್ದಸ್ತ ಪ್ರೀಪೇಡ್ ಯೋಜನೆಗಳನ್ನು ಬಿಡುಗಡೆಗೊಳಿಸಿದೆ. ಈ ಎರಡೂ ಯೋಜನೆಗಳು ಅತ್ಯುತ್ತಮ ಡೇಟಾ ಸೌಲಭ್ಯವನ್ನು ಹೊಂದಿವೆ. ಏರ್‌ಟೆಲ್ 489 ಮತ್ತು 509 ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದ್ದು, ಗ್ರಾಹಕರ ದೈನಂದಿನ ಡೇಟಾ ಕೊರತೆಯನ್ನು ನೀಗಿಸಲು ಯತ್ನಿಸಿದೆ. ಇವು ದೈನಂದಿನ ಡೇಟಾ ಮಿತಿಯಿಲ್ಲದೆ ಡೇಟಾ ಸೌಲಭ್ಯವನ್ನು ಹೊಂದಿವೆ. ಅಂದರೆ, ಒಂದು ದಿನದಲ್ಲಿ ಎಷ್ಟು ಬೇಕಾದರೂ ಡೇಟಾ ಬಳಸಬಹುದು. ಈ ಯೋಜನೆಯಲ್ಲಿ ಅನೇಕ ಬಂಬಾಟ್ ಪ್ರಯೋಜನಗಳನ್ನು ಸಹ ನೀಡಲಾಗುತ್ತಿದೆ.

ಏರ್ಟೆಲ್ 489 ಪ್ರಿಪೇಯ್ಡ್ ಯೋಜನೆ ವಿವರಗಳು
ಏರ್ಟೆಲ್ 30 ದಿನಗಳ ಮಾನ್ಯತೆಯೊಂದಿಗೆ 489 ರೂಗಳ ಪ್ರಿಪೇಯ್ಡ್ ಯೋಜನೆ ಬಿಡುಗಡೆಗೊಳಿಸಿದೆ. ಇದು ಅನಿಯಮಿತ ಕರೆ, 300 ಎಸ್‌ಎಂಎಸ್ ಅನ್ನು ಒಳಗೊಂಡಿದೆ. ಇದಲ್ಲದೆ, 50 ಜಿಬಿ ಡೇಟಾವನ್ನು 30 ದಿನಗಳವರೆಗೆ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ, ಬಳಕೆದಾರರು ಉಚಿತ ವಿಂಕ್ ಮ್ಯೂಸಿಕ್ ಫ್ರೀ, ಉಚಿತ ಹಲೋ ಟ್ಯೂನ್ಸ್, ಅಪೊಲೊ 24 x 7 ಸರ್ಕಲ್ ಮತ್ತು ಫಾಸ್ಟಾಗ್‌ನಲ್ಲಿ ಕ್ಯಾಶ್‌ಬ್ಯಾಕ್‌ನಂತಹ ಅನೇಕ ಪ್ರಯೋಜನಗಳನ್ನು ಒಳಗೊಂಡಿವೆ.

ಇದನ್ನೂ ಓದಿ-ಇಂದಿನಿಂದ ಇಷ್ಟು ದಿನಗಳ ಬಳಿಕ ಕ್ಷಣಕಾಲ ನಿಂತು ವಿರುದ್ಧ ದಿಕ್ಕಿನಲ್ಲಿ ತಿರುಗಲಿದೆಯಂತೆ ಭೂಮಿ... ಏನಿದರ ಸಂಕೇತ?

ಏರ್ಟೆಲ್ 509 ಪ್ರಿಪೇಯ್ಡ್ ಯೋಜನೆ ವಿವರಗಳು
509 ರೂಗಳ ಏರ್‌ಟೆಲ್‌ನ ಪ್ರಿಪೇಯ್ಡ್ ಯೋಜನೆ 1 ತಿಂಗಳ ಮಾನ್ಯತೆಯನ್ನು ಒದಗಿಸುತ್ತದೆ. ಇದು ಅನಿಯಮಿತ ಡೇಟಾ, 300 ಎಸ್‌ಎಂಎಸ್ ಅನ್ನು ಒಳಗೊಂಡಿದೆ. ಇದಲ್ಲದೆ, ನೀವು 1 ತಿಂಗಳವರೆಗೆ 60 ಜಿಬಿ ಡೇಟಾವನ್ನು ಬಳಸಬಹುದಾಗಿದೆ. ಅದೂ ಬಲ್ಕ್ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಉಚಿತ ಸಂಗೀತ, ಉಚಿತ ಹಲೋ ಟ್ಯೂನ್ ಟೂನ್‌ಗಳು, ಅಪೊಲೊ 24 X 7 ಸರ್ಕಲ್ ಪ್ರಯೋಜನಗಳು ಯೋಜನೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ-BharOS: ಅಂಡ್ರಾಯಿಡ್ ಗೆ ಸೆಡ್ಡು ಹೊಡೆಯಲು ಬಂತು ಮೇಡ್ ಇನ್ ಇಂಡಿಯಾ BharOS, ಕೇಂದ್ರ ಸರ್ಕಾರದಿಂದಲೂ ಸಿಕ್ತು ಗ್ರೀನ್ ಸಿಗ್ನಲ್

ಈ ಎರಡೂ ಯೋಜನೆಗಳಲ್ಲಿ ಯಾವುದೇ ಒಂದು ಯೋಜನೆಯನ್ನು ಖರೀದಿಸಿ ನೀವು ಏರ್ಟೆಲ್ 5 ಜಿ ನೆಟ್‌ವರ್ಕ್ ಅನ್ನು ಬಳಸಬಹುದು. ಏರ್ಟೆಲ್ ಬಲ್ಕ್ ಡೇಟಾ ಪ್ರಿಪೇಯ್ಡ್ ಯೋಜನೆಯಲ್ಲಿ, ಗ್ರಾಹಕರು 5 ಜಿ ಲಭ್ಯತೆಯ ನಗರಗಳಲ್ಲಿ 5 ಜಿ ಸೇವೆಗಳನ್ನು ಆನಂದಿಸಬಹುದು. ಆದರೆ ಇದಕ್ಕಾಗಿ ನೀವು 5 ಜಿ ಫೋನ್ ಹೊಂದಿರಬೇಕು. 5 ಜಿ ಪ್ರಚಂಡ ವೇಗವನ್ನು ಹೊಂದಿದೆ (ಪ್ರಸ್ತುತ 4 ಜಿ ವೇಗಕ್ಕಿಂತ 20-30 ಪಟ್ಟು ವೇಗವಾಗಿದೆ).

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News