Ind vs Eng : ಕ್ಯಾಪ್ಟನ್ ಬುಮ್ರಾನನ್ನು `ಹಾಡಿಹೊಗಳಿದ` ವೆಸ್ಟ್ ಇಂಡೀಸ್ನ ಈ ದಿಗ್ಗಜ ಕ್ರಿಕೆಟರ್!
ಬೇರೆ ಯಾರು ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಕೆಟರ್ ಬ್ರಿಯಾನ್ ಲಾರಾ, ಭಾನುವಾರ ಲಾರಾ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದು
India vs England : ಪ್ರಸ್ತುತ ಭಾರತ ಮತ್ತು ಇಂಗ್ಲೆಂಡ್ ನಡುವೆ ಐದನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅದ್ಭುತ ಆಟ ಪ್ರದರ್ಶಿಸಿದ್ದು. ಬಾಲ್ ಮತ್ತು ಬ್ಯಾಟ್‌ನಿಂದ ಎಲ್ಲರ ಮನ ಗೆದಿದ್ದಾರೆ. ಇದೀಗ ವೆಸ್ಟ್ ಇಂಡೀಸ್ ಲೆಜೆಂಡ್ ಬ್ರಿಯಾನ್ ಲಾರಾ ಜಸ್ಪ್ರೀತ್ ಬುಮ್ರಾನನ್ನ ಹಾಡು ಹೊಗಳಿದ್ದಾರೆ.
ಯಾರಿದು ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಕೆಟರ್!
ಬೇರೆ ಯಾರು ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಕೆಟರ್ ಬ್ರಿಯಾನ್ ಲಾರಾ, ಭಾನುವಾರ ಲಾರಾ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದು, 'ಟೆಸ್ಟ್‌ನಲ್ಲಿ ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿದ ಬುಮ್ರಾಗೆ ಅಭಿನಂದನೆಗಳು' ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಕ್ಷಣಾರ್ಧದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಯಿತು. ಅಭಿಮಾನಿಗಳು ಬುಮ್ರಾನನ್ನ ಹೊಗಳಿದ್ದಕ್ಕಾಗಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಶ್ಲಾಘಿಸಿದರು. ಅಭಿಮಾನಿಯೊಬ್ಬ, 'ಬ್ಯಾಟಿಂಗ್ ದಿಗ್ಗಜ, ಬೌಲಿಂಗ್ ಲೆಜೆಂಡ್ ಅನ್ನು ಮೆಚ್ಚುತ್ತಿರುವ ಕ್ಷಣ' ಎಂದು ಕಾಮೆಂಟ್ ಮಾಡಿದ್ದಾರೆ.
Ravindra Jadeja : ಇಂಗ್ಲೆಂಡ್ ನಲ್ಲಿ ಸಿಡಿಸಿದ ಶತಕದ ಬಗ್ಗೆ ರವೀಂದ್ರ ಜಡೇಜಾ ಹೇಳಿದ್ದು ಹೀಗೆ!
400 ರನ್ ಗಳಿಸಿದ ಲಾರಾ
ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದು, ಈ ಭಾರತದ ವೇಗದ ಬೌಲರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ 400 ರನ್ ಗಳಿಸಿದ ದಾಖಲೆಯನ್ನು ಮುರಿಯಲಿದ್ದಾರೆ ಎಂದು ಬರೆದುಕೊನಿದ್ದಾನೆ. 12 ಏಪ್ರಿಲ್ 2004 ರಂದು ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 400 ರನ್ ಗಳಿಸಿದಾಗ ಲಾರಾ ದಾಖಲೆ ಬರೆದಿದ್ದರು. 'ನಿಮ್ಮ ಈ ದಾಖಲೆಯನ್ನು ಬುಮ್ರಾ ಶೀಘ್ರದಲ್ಲೇ ಮುರಿಯಲಿದ್ದಾರೆ' ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದಾರೆ.
ದಾಖಲೆ ನಿರ್ಮಿಸಿದ್ದ ಲಾರಾ
ವೆಸ್ಟ್ ಇಂಡೀಸ್ ಬ್ಯಾಟಿಂಗ್ ಲೆಜೆಂಡ್ ಬ್ರಿಯಾನ್ ಲಾರಾ ಭಾನುವಾರ ಭಾರತದ ಟೆಸ್ಟ್ ನಾಯಕ ಜಸ್ಪ್ರೀತ್ ಬುಮ್ರಾ, ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿದಿರುವುದನ್ನು ಹೊಗಳಿದ್ದಾರೆ. ಈ ಹಿಂದೆ ಒಂದು ಓವರ್‌ನಲ್ಲಿ 28 ರನ್ ಗಳಿಸಿದ್ದ ದಾಖಲೆ ಬ್ರಿಯಾನ್ ಲಾರಾ ಹೆಸರಲ್ಲಿತ್ತು. ಆದರೆ, ಬುಮ್ರಾ ಒಂದು ಓವರ್‌ನಲ್ಲಿ 29 ರನ್ ಗಳಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಜಾರ್ಜ್ ಬೈಲಿ ಮತ್ತು ಕೇಶವ್ ಮಹಾರಾಜ್ ಕೂಡ ಒಂದು ಓವರ್‌ನಲ್ಲಿ 28 ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.
ಬುಮ್ರಾ ನಾಯಕತ್ವದಲ್ಲಿ ನಡೆದ ಚೊಚ್ಚಲ ಟೆಸ್ಟ್‌ನಲ್ಲಿ ಲಾರಾ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಬುಮ್ರಾ, ಸ್ಟುವರ್ಟ್ ಬ್ರಾಡ್ ಒಂದು ಓವರ್‌ನಲ್ಲಿ 29 ರನ್ ಗಳಿಸಿದರು. ಬ್ರಾಡ್ ಈ ಓವರ್‌ನಲ್ಲಿ ಐದು ವೈಡ್‌ಗಳನ್ನು ಎಸೆದಿದ್ದ ಮತ್ತು ನೋ ಬಾಲ್ ನೀಡಿದ್ದ, ಇದರಿಂದಾಗಿ ಒಂದು ಓವರ್‌ನಲ್ಲಿ 35 ರನ್ ನೀಡಿದರು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ.
ಇದನ್ನೂ ಓದಿ : MS Dhoni: ಧೋನಿಯಿಂದ ಈ ಬಲಿಷ್ಠ ಆಟಗಾರರು ನಿವೃತ್ತಿ! ತಂಡದಲ್ಲಿ ಸ್ಥಾನ ಪಡೆಯಲಾಗಲಿಲ್ಲ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ