ನವದೆಹಲಿ:  BWF World Tour Finals - ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು (PV Sindhu) ಬಿಡಬ್ಲ್ಯುಎಫ್ (BWF) ವರ್ಲ್ಡ್ ಟೂರ್ ಫೈನಲ್ಸ್‌ನಲ್ಲಿ (World Tour Finals) ಜಪಾನಿನ ಅಕಾನೆ ಯಮಗುಚಿ (Akane Yamaguchi) ಅವರನ್ನು ಶನಿವಾರ ತೀವ್ರ ಪೈಪೋಟಿಯ ಪಂದ್ಯದಲ್ಲಿ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾಳೆ. ವಿಶ್ವ ಚಾಂಪಿಯನ್ ಹಾಗೂ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಸಿಂಧು ರೋಚಕ ಪಂದ್ಯದಲ್ಲಿ 21-15, 15-21, 21-19 ಸೆಟ್‌ಗಳಿಂದ ಎದುರಾಳಿಯನ್ನು ಮನಿಸಿದ್ದಾಳೆ (Sports News In Kannada).


COMMERCIAL BREAK
SCROLL TO CONTINUE READING

ಫೈನಲ್‌ನಲ್ಲಿ ಕೊರಿಯಾದ ಆಟಗಾರ್ತಿಯೊಂದಿಗೆ  ಮುಖಾಮುಖಿ (PV Sindhu Reached Finals)
ಸಿಂಧು ಭಾನುವಾರ ನಡೆಯಬೇಕಿರುವ ಫೈನಲ್ ಪಂದ್ಯದಲ್ಲಿ ಕೊರಿಯಾದ ಆನ್ ಸೆಯುಂಗ್ ಅವರನ್ನು ಎದುರಿಸಲಿದ್ದಾರೆ, ಸೇಯುಂಗ್ ಎರಡನೇ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಪೋರ್ನ್‌ಪಾವೀ ಚೊಚುವಾಂಗ್ ಅವರನ್ನು 25-23 21-17 ರಿಂದ ಸೋಲಿಸಿದ್ದಾಳೆ. ಅವಳು  ಈ ಋತುವಿನ ಕೊನೆಯ ಪಂದ್ಯಾವಳಿಯಲ್ಲಿ ಮೂರನೇ ಬಾರಿಗೆ ಫೈನಲ್ ತಲುಪಿದ್ದಾಳೆ. ಸಿಂಧು 2018 ರಲ್ಲಿ ಈ ಪ್ರಶಸ್ತಿಯನ್ನು ಗೆದ್ದಿದ್ದಾಳೆ ಮತ್ತು ಈ ಸಾಧನೆ ಮಾಡಿದ ಏಕೈಕ ಭಾರತೀಯರಾಗಿದ್ದಾರೆ. ವಿಶ್ವದ ಏಳನೇ ಶ್ರೇಯಾಂಕದ ಆಟಗಾರ್ತಿ ಸಿಂಧು ಮೂರನೇ ಕ್ರಮಾಂಕದ ಜಪಾನಿನ ವಿರುದ್ಧ 12-8ರ ದಾಖಲೆ ಹೊಂದಿದ್ದಾಳೆ.


ಈ ವರ್ಷ ಒಂದೇ ಒಂದು ಪ್ರಶಸ್ತಿ ಗೆದ್ದಿಲ್ಲ (PV Sindhu In Finals)
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ, ಸಿಂಧು ಫ್ರೆಂಚ್ ಓಪನ್, ಇಂಡೋನೇಷ್ಯಾ ಮಾಸ್ಟರ್ಸ್ ಮತ್ತು ಇಂಡೋನೇಷ್ಯಾ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದಳು. ಮಾರ್ಚ್‌ನಲ್ಲಿ ಸ್ವಿಸ್ ಓಪನ್ ಫೈನಲ್‌ನಲ್ಲಿ ಸೋಲನ್ನು ಅನುಭವಿಸಿದ್ದಾಳೆ. ಮಾರ್ಚ್‌ನಲ್ಲಿ ನಡೆದ ಸ್ವಿಸ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಆದರೆ ಇಂಡೋನೇಷ್ಯಾ ಮಾಸ್ಟರ್ಸ್ ಮತ್ತು ಇಂಡೋನೇಷ್ಯಾ ಓಪನ್‌ನಲ್ಲಿ ಸತತ ಪ್ರಶಸ್ತಿಗಳನ್ನು ಗೆದ್ದ ನಂತರ ವಿಶ್ವದ 6 ನೇ ಶ್ರೇಯಾಂಕಿತ ಆಟಗಾರ್ತಿ ಈ ಋತುವಿನ ಅಂತಿಮ ಪಂದ್ಯಾವಳಿಯನ್ನು ತಲುಪಿರುವುದರಿಂದ ಸಿಂಧುಗೆ ಸೆಯಾಂಗ್ ವಿರುದ್ಧದ ಫೈನಲ್ ಸುಲಭದ ಮಾತಲ್ಲ ಎನ್ನಲಾಗುತ್ತಿದೆ. ಅಕ್ಟೋಬರ್‌ನಲ್ಲಿ ಡೆನ್ಮಾರ್ಕ್ ಓಪನ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸೆಯಾಂಗ್, ಸಿಂಧು ಅವರನ್ನು ಸೋಲಿಸಿದ್ದರು.


ಇದನ್ನೂ ಓದಿ-IND vs NZ 2nd Test: ಕೇವಲ 62 ರನ್ ಗಳಿಗೆ ನ್ಯೂಜಿಲ್ಯಾಂಡ್ ತಂಡ ಉಡೀಸ್


ತೀವ್ರ ಪೈಪೋಟಿಯ ಪಂದ್ಯದಲ್ಲಿ ಸಿಂಧುಗೆ ಜಯ (PV Sindhu In Finals)
ಯಮಗುಚಿ ವಿರುದ್ಧದ ಮೊದಲ ಗೇಮ್‌ನಲ್ಲಿ ಸಿಂಧು 0-4 ರಿಂದ ಹಿನ್ನಡೆ ಅನುಭವಿಸಿದ್ದರು. ಆದರೆ ಅವರು ಬೇಗನೆ 4-4 ರಿಂದ ಸಮಬಲ ಸಾಧಿಸಿದರು ಮತ್ತು ನಂತರ 9-9 ರಲ್ಲಿ ಮುನ್ನಡೆ ಸಾಧಿಸಿದರು. ಇಬ್ಬರೂ ಸಮಬಲದಲ್ಲಿ ಸಾಗುತ್ತಿದ್ದರೂ ಸಿಂಧು 15-14ರ ಮುನ್ನಡೆಯನ್ನು 18-15ಕ್ಕೆ ಇಳಿಸಿದರು. ಇದಾದ ಬಳಿಕ ಸತತ ಮೂರು ಪಾಯಿಂಟ್ಸ್ ಕಲೆಹಾಕಿ ಮೊದಲ ಗೇಮ್ ಗೆದ್ದುಕೊಂಡರು. ಎರಡನೇ ಗೇಮ್ ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಉಭಯ ಆಟಗಾರರು 10-10ರಲ್ಲಿ ಸಮಬಲ ಸಾಧಿಸಿದರು. ಆದರೆ ಯಮಗುಚಿ ಯಾವುದೇ ತೊಂದರೆಯಿಲ್ಲದೆ ಅದನ್ನು ಗೆದ್ದುಕೊಂಡಳು.


ಇದನ್ನೂ ಓದಿ-IND vs NZ 2nd Test: ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಎಲ್ಲಾ 10 ಆಟಗಾರರನ್ನು ಪೆವಿಲಿಯನ್ ಕಳುಹಿಸಿ ದಾಖಲೆ ಬರೆದ Ajaz Patel


ನಿರ್ಣಾಯಕ ಗೇಮ್‌ನಲ್ಲಿ ಸಿಂಧು ಮತ್ತು ಯಮಗುಚಿ 5-5ರಲ್ಲಿ ಸಮಬಲ ಸಾಧಿಸಿದರು. ಇದಾದ ಬಳಿಕ ಭಾರತದ ಆಟಗಾರ್ತಿ ಸತತ ಏಳು ಅಂಕ ಗಳಿಸಿದ್ದಾಳೆ. ಜಪಾನಿ ಆಟಗಾರ್ತಿ ಪಂದ್ಯಕ್ಕೆ ಮರಳಲು ಯತ್ನಿಸಿ ಈ ವ್ಯತ್ಯಾಸವನ್ನು 11-13 ಮಾಡಿದರು. ಆದರೆ ಸಿಂಧು 17-12ರಲ್ಲಿ ಮತ್ತೆ ಮುನ್ನಡೆ ಸಾಧಿಸಿದಳು. ಯಮಗುಚಿ ಕೂಡ ಸುಲಭವಾಗಿ ಬಿಟ್ಟುಕೊಟ್ಟಿಲ್ಲ ಮತ್ತು ತಕ್ಷಣ 19-19ರಲ್ಲಿ ಸಮಬಲ ಸಾಧಿಸಿದ್ದಾಳೆ. ಮತ್ತೊಂದೆಡೆ, ಸಿಂಧು ಅವರು ಕೊನೆಯವರೆಗೂ ತಮ್ಮ ಅತ್ಯುತ್ತಮ ಆಟ ಪ್ರದರ್ಶಿಸಿದ್ದಾಳೆ ಮತ್ತು ಸತತ ಎರಡು ಅಂಕಗಳನ್ನು ಗಳಿಸಿ ಮೂರನೇ ಗೇಮ್ ಅನ್ನು ಗೆದ್ದ ನಂತರ ಪಂದ್ಯವನ್ನು ಗೆದ್ದಿದ್ದಾಳೆ. ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಯುವ ಶಟ್ಲರ್ ಲಕ್ಷ್ಯ ಸೇನ್ ಅವರು ಹಾಲಿ ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವದ ನಂಬರ್ ಒನ್ ಆಟಗಾರ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಎದುರಿಸಲಿದ್ದಾರೆ.


ಇದನ್ನೂ ಓದಿ-IPL 2022 Mega Auction : ಈ ಆಟಗಾರರನ್ನು ಮತ್ತೆ ಖರೀದಿಸಿಯೇ ತೀರಲಿದೆ RCB..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.