IND vs NZ 2nd Test: ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಎಲ್ಲಾ 10 ಆಟಗಾರರನ್ನು ಪೆವಿಲಿಯನ್ ಕಳುಹಿಸಿ ದಾಖಲೆ ಬರೆದ Ajaz Patel

IND vs NZ: ಮುಂಬೈ ಟೆಸ್ಟ್‌ನ ಎರಡನೇ ದಿನ ಟೀಂ ಇಂಡಿಯಾ ದೊಡ್ಡ ದಾಖಲಿಸಿದೆ. ಆದರೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಎಜಾಜ್ ಪಟೇಲ್ ಎಲ್ಲಾ 10 ವಿಕೆಟ್ ಗಳನ್ನು ಕಬಳಿಸುವ ಅನಿಲ್ ಕುಂಬ್ಳೆ ಬರೆದ ದಾಖಲೆಯನ್ನು ಸರಿಗಟ್ಟಿದ್ದಾರೆ. 

Written by - Nitin Tabib | Last Updated : Dec 4, 2021, 02:00 PM IST
  • ಭಾರತ vs ನ್ಯೂಜಿಲೆಂಡ್ ಮುಂಬೈ ಟೆಸ್ಟ್
  • ಎರಡನೇ ದಿನ ದೊಡ್ಡ ಮೊತ್ತ ದಾಖಲಿಸಿದ ಟೀಂ ಇಂಡಿಯಾ
  • ಮಯಾಂಕ್ ಅವರ ಅದ್ಭುತ ಇನ್ನಿಂಗ್ಸ್ ಅಂತ್ಯ.
IND vs NZ 2nd Test: ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಎಲ್ಲಾ 10 ಆಟಗಾರರನ್ನು ಪೆವಿಲಿಯನ್ ಕಳುಹಿಸಿ ದಾಖಲೆ ಬರೆದ Ajaz Patel title=
IND vs NZ 2nd Test

ನವದೆಹಲಿ: IND vs NZ - ಭಾರತ ಮತ್ತು ನ್ಯೂಜಿಲೆಂಡ್ (India Vs New Zealand Test) ನಡುವಿನ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಎರಡನೇ ದಿನದ ಆಟ ಮುಂದುವರೆದಿದ್ದು, ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 325 ರನ್ ಗಳಿಗೆ ತನ್ನ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿದೆ.

ನ್ಯೂಜಿಲ್ಯಾಂಡ್ (New Zealand) ಪರ ತಂಡದ ಸ್ಪಿನ್ನ್ ಬೌಲರ್ ಆಗಿರುವ ಎಜಾಜ್ ಪಟೇಲ್ (Ajaz Patel) ಟೆಸ್ಟ್ ಕ್ರಿಕೆಟ್ ನಲ್ಲಿ 10 ವಿಕೆಟ್ ಪಡೆದು ಅನಿಲ್ ಕುಂಬ್ಳೆ (Anil Kumble) ಹಾಗೂ ಇಂಗ್ಲೆಂಡ್ ನ ಜಿಮ್ ಲೇಕರ್ (JC Laker) ಅವರ ದಾಖಲೆ ಸರಿಗಟ್ಟಿ ಇತಿಹಾಸ ರಚಿಸಿದ್ದಾರೆ. ಮುಂಬೈನ ವಾನ್ಖೇಡ್ ಕ್ರೀಡಾಂಗಣದಲ್ಲಿ ಎಜಾಜ್ ಈ ದಾಖಲೆಯನ್ನು ಮಾಡಿದ್ದಾರೆ. ಅವರ 10 ವಿಕೆಟ್ ಗಳ ಸಹಾಯದಿಂದ ನ್ಯೂಜಿಲ್ಯಾಂಡ್ ತಂಡ ಭಾರತ ತಂಡವನ್ನು 325 ರನ್ ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿ ಯಾಗಿದೆ. ಭಾರತದ ಪರ ಮಾಯಾಂಕ್ ಅಗರವಾಲ್ (Mayank Agarwal) ಅತಿ ಹೆಚ್ಚು ಅಂದರೆ 150 ರನ್ ಗಳಿಸಿದ್ದಾರೆ. ಎಜಾಜ್ 47.5 ಓವರ್ ಗಳಲ್ಲಿ 119 ರನ್ ಗಳನ್ನು ನೀಡಿ 10 ವಿಕೆಟ್ ಕಬಳಿಸಿದ್ದಾರೆ. ಈ ಓವರ್ ಗಳಲ್ಲಿ 12 ಮೇಡನ್ ಓವರ್ ಗಳು ಕೂಡ ಶಾಮೀಲಾಗಿವೆ. 

ಇದನ್ನೂ ಓದಿ-IPL 2022 Mega Auction : ಈ ಆಟಗಾರರನ್ನು ಮತ್ತೆ ಖರೀದಿಸಿಯೇ ತೀರಲಿದೆ RCB..!

ಎಜಾಜ್ ಪಟೇಲ್ ಗೂ ಮೊದಲು ಅನಿಲ್ ಕುಂಬ್ಳೆ ಪಾಕಿಸ್ತಾನದ ವಿರುದ್ದ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದಿದ್ದರು. ನ್ಯೂಜಿಲ್ಯಾಂಡ್ ಸ್ಪಿನ್ ಆಟಗಾರರಾಗಿರುವ ಎಜಾಜ್ ಪಟೇಲ್ ಮುಂಬೈ ಟೆಸ್ಟ್ ನ ಮೊದಲ ದಿನ 6 ವಿಕೆಟ್ ಕಬಳಿಸಿದ್ದರು. ನಂತರ ಎರಡನೇ ದಿನವಾದ ಇಂದು ಉಳಿದ ನಾಲ್ಕು ವಿಕೆಟ್ ಗಳನ್ನು ಕೂಡ ಕಬಳಿಸಿ ದಾಖಲೆಯನ್ನು ಸರಿಗಟ್ಟಿದ್ದಾರೆ. 141 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಅನಿಲ್ ಕುಂಬ್ಳೆ ಹಾಗೂ ಜಿಮ್ ಲೇಕರ್  ಅವರನ್ನು ಹೊರತುಪಡಿಸಿ ಈ ದಾಖಲೆ ಸರಿಗಟ್ಟಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಎಜಾಜ್ ಪಾತ್ರರಾಗಿದ್ದಾರೆ. 

ಇದನ್ನೂ ಓದಿ-ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮಹತ್ವದ ನಿರ್ಧಾರ ಪ್ರಕಟ

ಎಲ್ಲಕ್ಕಿಂತ ಮೊದಲು ಈ ದಾಖಲೆಯನ್ನು ಇಂಗ್ಲೆಂಡ್ ತಂಡದ ಜಿಮ್ ಲೇಕರ್ ರಚಿಸಿದ್ದಾರೆ. ಅವರು 1956ರಲ್ಲಿ ಆಸ್ಟ್ರೆಲಿಯಾ ವಿರುದ್ಧದ ಮ್ಯಾಂಚೆಸ್ಟರ್ ಟೆಸ್ಟ್ ನ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಕಬಳಿಸಿದ್ದರು. ಲೇಕರ್ ಅವರ ಈ ದಾಖಲೆಯನ್ನು ಭಾರತ ತಂಡದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು 1999 ರಲ್ಲಿ ಸರಿಗಟ್ಟಿದ್ದರು. ಪಾಕಿಸ್ತಾನದ ವಿರುದ್ಧ ದೆಹಲಿಯಲ್ಲಿ ಆಡಲಾದ ಟೆಸ್ಟ್ ಪಂದ್ಯದಲ್ಲಿ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದಿದ್ದರು. 

ಇದನ್ನೂ ಓದಿ-ರೋಹಿತ್ ಮತ್ತು ವಿರಾಟ್ ನಡುವೆ ಉತ್ತಮ ನಾಯಕ ಯಾರು? ಗೌತಮ್ ಗಂಭೀರ್ ಶಾಕಿಂಗ್ ಉತ್ತರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News