Rohit Sharma Aggressive Video : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್‌ನಲ್ಲಿ 480 ರನ್ ಗಳಿಸಿತ್ತು. ಸದ್ಯ ಟೀಂ ಇಂಡಿಯಾ ತೀರಾ ಹಿಂದುಳಿದಿದೆ. ಈ ನಡುವೆ ನಾಯಕ ರೋಹಿತ್ ಶರ್ಮಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಭಾರತ ಇನ್ನೂ 444 ರನ್ ಹಿಂದಿದೆ


ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 480 ರನ್‌ಗಳ ದೊಡ್ಡ ಸ್ಕೋರ್ ಮಾಡಿತು. ಅವರ ಪರವಾಗಿ ಆರಂಭಿಕ ಉಸ್ಮಾನ್ ಖವಾಜಾ 180 ಮತ್ತು ಕ್ಯಾಮರೂನ್ ಗ್ರೀನ್ 114 ರನ್ ಗಳಿಸಿದರು. ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 6 ವಿಕೆಟ್ ಪಡೆದರು. ಶುಕ್ರವಾರ ಎರಡನೇ ದಿನದಾಟದ ಅಂತ್ಯಕ್ಕೆ ಆತಿಥೇಯರು ಯಾವುದೇ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದ್ದಾರೆ. ನಾಯಕ ರೋಹಿತ್ ಶರ್ಮಾ 17 ಮತ್ತು ಶುಭಮನ್ ಗಿಲ್ 18 ರನ್ ಗಳಿಸಿ ಅಜೇಯರಾಗಿ ಮರಳಿದರು. ಇದೀಗ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ಆಧಾರದಲ್ಲಿ ಆಸ್ಟ್ರೇಲಿಯಾಕ್ಕಿಂತ 444 ರನ್ ಹಿಂದಿದೆ.


ಇದನ್ನೂ ಓದಿ : IND vs AUS: : ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅದ್ಭುತ ದಾಖಲೆ ಸೃಷ್ಟಿಸಿದ ಅಶ್ವಿನ್..!


ರೋಹಿತ್ ವಿಡಿಯೋ ವೈರಲ್


ಈ ನಡುವೆ ನಾಯಕ ರೋಹಿತ್ ಶರ್ಮಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎರಡನೇ ದಿನ ಕ್ಯಾಪ್ಟನ್ ರೋಹಿತ್ ಯಾವುದೋ ವಿಷಯಕ್ಕೆ ಕೋಪಗೊಂಡಿದ್ದರು. ಇದು ಯಾವುದರ ಬಗ್ಗೆ ಎಂಬುವುದು ತಿಳಿದುಬಂದಿಲ್ಲ, ಆದರೆ ರೋಹಿತ್ ಸಹ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಪಂದ್ಯದ ವೇಳೆ ಗಿಲ್ ಅವರ ಅನುಚಿತ ವರ್ತನೆಗೆ ಪ್ರತಿಕ್ರಿಯೆಯಾಗಿ ರೋಹಿತ್ ಈ ಬಂದಿದ್ದಾರೆ ಎಂದು  ಹೇಳಲಾಗುತ್ತಿದೆ. 
ಫೀಲ್ಡಿಂಗ್ ಸಮಯದಲ್ಲಿ ವೀಡಿಯೊ


ಭಾರತದ ಫೀಲ್ಡಿಂಗ್ ವೇಳೆ ಈ ಘಟನೆ ನಡೆದಿದೆ. ಇದೆಲ್ಲ ನಡೆದದ್ದು ಎರಡನೇ ದಿನದ ಆಸ್ಟ್ರೇಲಿಯ ಇನಿಂಗ್ಸ್‌ನ 133ನೇ ಓವರ್‌ನಲ್ಲಿ. ಆಗ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 384 ರನ್ ಗಳಿಸಿತ್ತು. ಆರಂಭಿಕ ಉಸ್ಮಾನ್ ಖವಾಜಾ 164 ಮತ್ತು ಮಿಚೆಲ್ ಸ್ಟಾರ್ಕ್ ನಾಲ್ಕು ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಆಗ ರೋಹಿತ್ ಶರ್ಮಾ ಅವರ ಧ್ವನಿ ಸ್ಟಂಪ್ಸ್ ಮೈಕ್‌ನಲ್ಲಿ ರೆಕಾರ್ಡ್ ಆಗಿದೆ. ಆ ವೇಳೆ ಸ್ಟೇಡಿಯಂನಲ್ಲಿ ಕುಳಿತಿದ್ದ ಪ್ರೇಕ್ಷಕರ ದೃಶ್ಯಗಳನ್ನು ಪ್ರಸಾರಕರು ತೋರಿಸುತ್ತಿದ್ದರಿಂದ ಇಡೀ ಘಟನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಲಿಲ್ಲ. ನಾವು ಈ ವೀಡಿಯೊವನ್ನು ಇಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ.


ಇದನ್ನೂ ಓದಿ : MS Dhoni Retirement : 'ಈ ವರ್ಷ ಐಪಿಎಲ್‌ನಿಂದ ಎಂಎಸ್ ಧೋನಿ ನಿವೃತ್ತಿ'


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.