T20 World Cup 2024: ಇಂಗ್ಲೆಂಡ್ ವಿರುದ್ಧದ ಟಿ 20 ವಿಶ್ವಕಪ್ ಸೆಮಿಫೈನಲ್‌’ನಲ್ಲಿ ತಂಡವು ಶಾಂತವಾಗಿರಲು ಮತ್ತು ವಿಷಯಗಳನ್ನು ಸರಳವಾಗಿಡಲು ಗಮನಹರಿಸುತ್ತಿದೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಅಡಿಲೇಡ್ ಓವಲ್‌’ನಲ್ಲಿ 2022ರ ಸೆಮಿಫೈನಲ್‌’ನಲ್ಲಿ 10 ವಿಕೆಟ್‌’ಗಳ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೈದಾನಕ್ಕಿಳಿಯಲಿದೆ.


ಇದನ್ನೂ ಓದಿ: “ವಿರಾಟ್ ಕೊಹ್ಲಿ ನನ್ನ ಕಾಲುಗಳನ್ನೇ ನೋಡ್ತಾ ಇದ್ರು!”- ಕನ್ನಡದ ಪ್ರಖ್ಯಾತ ನಟಿಯ ಸೆನ್ಸೇಷನಲ್ ಹೇಳಿಕೆ


“ಈ ಪಂದ್ಯವನ್ನು ಸಹ ಸಾಮಾನ್ಯ ಪಂದ್ಯದಂತೆ ಪರಿಗಣಿಸಲು ಬಯಸುತ್ತೇವೆ. ಇದು ಸೆಮಿಫೈನಲ್ ಎಂಬ ಅಂಶದ ಬಗ್ಗೆ ನಾವು ಮಾತನಾಡಲು ಬಯಸುವುದಿಲ್ಲ. ಇದು ನಾಕೌಟ್ ಪಂದ್ಯ. ಹೆಚ್ಚು ಯೋಚಿಸಿದರೆ ಪ್ರಯೋಜನವಿಲ್ಲ” ಎಂದಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, “ಪ್ರಾಮಾಣಿಕವಾಗಿ ಹೇಳಬೇಕೆಂದರೆ, 2022 ರಿಂದ ಹೆಚ್ಚಿನ ಬದಲಾವಣೆ ಆಗಿಲ್ಲ. ಟಿ20 ಮತ್ತು ಏಕದಿನದಲ್ಲಿ ಮುಕ್ತ ಮನಸ್ಸಿನಿಂದ ಆಡಲು ಪ್ರಯತ್ನಿಸಿದ್ದೇವೆ. ಇದು ಎಲ್ಲಾ ಪಂದ್ಯಾವಳಿಯ ಉದ್ದಕ್ಕೂ ಸವಾಲಾಗಿ ಉಳಿದಿರುವ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ. ನಾವು 'ಸ್ಮಾರ್ಟ್' ಕ್ರಿಕೆಟ್ ತಂಡವಾಗಲು ಬಯಸುತ್ತೇವೆ. ವೈಯಕ್ತಿಕವಾಗಿ ಮತ್ತು ಆಟಗಾರರಿಗಾಗಿ ವಿಷಯಗಳನ್ನು ಸರಳವಾಗಿರಿಸಿಕೊಂಡಿದ್ದೇನೆ. ಮೈದಾನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಆಟಗಾರರನ್ನು ನಂಬಿದ್ದೇವೆ” ಎಂದಿದ್ದಾರೆ.


“ಶಾಂತ ಮತ್ತು ಸಂಯಮದಿಂದ ಇರುವುದು ಮುಖ್ಯ. ಕಳೆದ ಕೆಲವು ವರ್ಷಗಳಿಂದ ಶಾಂತವಾಗಿರುವುದು ಉತ್ತಮವೆಂದು ನನಗೆ ಅನುಭವಕ್ಕೆ ಬಂದಿದೆ” ಎಂದಿದ್ದಾರೆ.


ಇದನ್ನೂ ಓದಿ: ಸೆಮಿಫೈನಲ್ ಹಣಾಹಣಿಗೆ ಟೀಂ ಇಂಡಿಯಾದಲ್ಲಿ ಬದಲಾವಣೆ: ಹೈವೋಲ್ಟೇಜ್ ಹಣಾಹಣಿಗೆ ಆಡುವ 11ರ ಬಳಗ


ನಾಲ್ಕು ಸ್ಪಿನ್ನರ್‌’ಗಳು ಇರುತ್ತಾರೋ ಇಲ್ಲವೋ?


ಕೆರಿಬಿಯನ್ ಮೈದಾನಗಳಲ್ಲಿನ ವಿಕೆಟ್‌’ಗಳು ಸ್ಪಿನ್ ಬೌಲಿಂಗ್‌’ಗೆ ಅನುಕೂಲಕರವಾಗಿವೆ. ಆದರೆ ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳು ಇರುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ರೋಹಿತ್ ಯಾವುದೇ ಹೇಳಿಕೆ ನೀಡಿಲ್ಲ. ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ವೆಸ್ಟ್ ಇಂಡೀಸ್ ಲೆಗ್‌’ನಲ್ಲಿ ಇದುವರೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ