ಕೊಹ್ಲಿಗೆ ಡಾನ್ಸ್ ಕಲಿಸಿಕೊಟ್ಟ ಚಹಲ್ ಪತ್ನಿ, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ ವಿಡಿಯೋ
ಈ ವಿಡಿಯೋದಲ್ಲಿ ಚಹಲ್ ಅವರ ಪತ್ನಿ ಧನಶ್ರೀ ವಿರಾಟ್ ಕೊಹ್ಲಿಗೆ ಹುಕ್ ಸ್ಟೆಪ್ ಕಲಿಸುವುದನ್ನು ಕಾಣಬಹುದು. ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ
ನವದೆಹಲಿ : ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (YuzvendraChahal) ಪತ್ನಿ ಧನಶ್ರೀ ವರ್ಮಾ, ಸಾಮಾಜಿಕ ಜಾಲತಾಣಗಳಲ್ಲಿ (Social media) ತುಂಬಾ ಸಕ್ರಿಯರಾಗಿದ್ದಾರೆ. ತಮ್ಮ ಡ್ಯಾನ್ಸ್‌ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಧನಶ್ರೀ ತಲ್ಲಣ ಮೂಡಿಸಿದ್ದಾರೆ. ವಿರಾಟ್ ಕೊಹ್ಲಿ ಜೊತೆಗಿನ ಧನಶ್ರೀ ಡಾನ್ಸ್ ವಿಡಿಯೋ (video) ಇದೀಗ ಭಾರೀ ಸದ್ದು ಮಾಡುತ್ತಿದೆ. ಐಪಿಎಲ್ ತಂಡ ಆರ್‌ಸಿಬಿ ವಿಡಿಯೋವನ್ನು ಶೇರ್ ಮಾಡಿದ್ದು, ಇದರಲ್ಲಿ ಧನಶ್ರೀ ವಿರಾಟ್ ಕೊಹ್ಲಿಗೆ (Virat Kohli dance) ನೃತ್ಯ ಕಲಿಸುತ್ತಿರುವುದನ್ನು ಕಾಣಬಹುದು.
ಕೊಹ್ಲಿಗೆ ಡ್ಯಾನ್ಸ್ ಕಲಿಸಿದ ಚಹಾಲ್ ಪತ್ನಿ :
ಈ ವಿಡಿಯೋದಲ್ಲಿ ಚಹಲ್ ಅವರ ಪತ್ನಿ ಧನಶ್ರೀ (Dhanashree) ವಿರಾಟ್ ಕೊಹ್ಲಿಗೆ ಹುಕ್ ಸ್ಟೆಪ್ ಕಲಿಸುವುದನ್ನು ಕಾಣಬಹುದು. ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ. RCB ಈ ವಿಡಿಯೋದ behind the scene ಅನ್ನು ಹಂಚಿಕೊಂಡಿದೆ. ಇಲ್ಲಿ ವಿರಾಟ್‌ಗೆ ಹೆಜ್ಜೆ ಹಾಕುವುದನ್ನು ಧನಶ್ರೀ ಕಲಿಸಿ ಕೊಡುವುದನ್ನು ನೋಡಬಹುದು.
ಇದನ್ನೂ ಓದಿ : ಉತ್ತಮ ಪ್ರದರ್ಶನದ ಹೊರತಾಗಿಯೂ ಟೀಂ ಇಂಡಿಯಾದಿಂದ ಹೊರ ಬಿದ್ದ ಆಟಗಾರ, ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಆಕ್ರೋಶ
ವಿರಾಟ್ ಕೊಹ್ಲಿ, ಯುಜ್ವೇಂದ್ರ ಚಹಾಲ್, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್ ಮುಂತಾದವರನ್ನು ಕೂಡಾ ಈ ವೀಡಿಯೊದಲ್ಲಿ ಕಾಣಬಹುದು.
ನೃತ್ಯಗಾರ್ತಿ ಧನಶ್ರೀ :
ಧನಶ್ರೀ ವರ್ಮಾ (Dhanashree verma) ಅವರು ನೃತ್ಯಕ್ಕೆ ಸಂಬಂಧಿಸಿದಂತೆ YouTube ಚಾನಲ್ ಅನ್ನು ಹೊಂದಿದ್ದಾರೆ. ಈ ಚಾನಲ್ 25 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಧನಶ್ರೀ ಬಾಲಿವುಡ್ ಹಾಡುಗಳನ್ನು ರೆಕ್ರೆಯೆಟ್ ಮಾಡುತ್ತಾರೆ. ಅಲ್ಲದೆ ಅವರು ಹಿಪ್-ಹಾಪ್ ತರಬೇತಿಯನ್ನು ಸಹ ನೀಡುತ್ತಾರೆ. ಈ ಯೂಟ್ಯೂಬ್ (Youtube) ಚಾನೆಲ್‌ನಲ್ಲಿ ತನ್ನ ಡ್ಯಾನ್ಸ್ ಅಕಾಡೆಮಿಯ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಾರೆ.
ಡಿಸೆಂಬರ್ 2020 ರಲ್ಲಿ ವಿವಾಹವಾದ ಚಹಾಲ್-ಧನಶ್ರೀ :
ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಬಹಳ ಜನಪ್ರಿಯ ದಂಪತಿ. ಅವರು ಆಗಾಗ ತಮ್ಮ ಸುಂದರವಾದ ಫೋಟೋಗಳು ಮತ್ತು ವೀಡಿಯೊಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ಕಳೆದ ವರ್ಷ ಡಿಸೆಂಬರ್ 2020 ರಲ್ಲಿ ವಿವಾಹವಾದರು.
ಇದನ್ನೂ ಓದಿ : IPL 2022: ಐಪಿಎಲ್ 2022ಕ್ಕಾಗಿ ಈ 4 ಆಟಗಾರರನ್ನು ಉಳಿಸಿಕೊಳ್ಳಲಿದೆ ಸಿಎಸ್‌ಕೆ, ಧೋನಿ ಬಗ್ಗೆ ಬಿಗ್ ನ್ಯೂಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.vc