ಕ್ರಿಕೆಟರ್ ಯುಜ್ವೇಂದ್ರ ಚಾಹಲ್ ಹಾಗೂ ಸಂಯೋಜಕಿ ಧನಶ್ರೀ ವರ್ಮಾಗೆ ಕಂಕಣ ಭಾಗ್ಯ

ಗುರುಗ್ರಾಮದಲ್ಲಿ ಭಾರತದ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರು ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರನ್ನು ವಿವಾಹವಾಗಿದ್ದಾರೆ. ಈ ಕಾರ್ಯಕ್ರಮವು ಕೆಲವು ಆಪ್ತರು ಮತ್ತು ಸಂಬಂಧಿಕರೊಂದಿಗೆ ಹಾಜರಿದ್ದ ಖಾಸಗಿ ಸಂಬಂಧವಾಗಿತ್ತು. ಇತ್ತೀಚಿಗೆ ಅವರು ಸೀಮಿತ ಓವರ್ ಪಂದ್ಯಗಳ ಭಾಗವಾಗಿ ಆಸ್ಟ್ರೇಲಿಯಾದಲ್ಲಿದ್ದರು, ಇತ್ತಿಚಿಗಷ್ಟೇ ಭಾರತಕ್ಕೆ ಆಗಮಿಸಿದ್ದರು.

Last Updated : Dec 22, 2020, 11:20 PM IST
ಕ್ರಿಕೆಟರ್ ಯುಜ್ವೇಂದ್ರ ಚಾಹಲ್ ಹಾಗೂ ಸಂಯೋಜಕಿ ಧನಶ್ರೀ ವರ್ಮಾಗೆ ಕಂಕಣ ಭಾಗ್ಯ  title=
Photo Courtesy: Instagram

ನವದೆಹಲಿ: ಗುರುಗ್ರಾಮದಲ್ಲಿ ಭಾರತದ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರು ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರನ್ನು ವಿವಾಹವಾಗಿದ್ದಾರೆ. ಈ ಕಾರ್ಯಕ್ರಮವು ಕೆಲವು ಆಪ್ತರು ಮತ್ತು ಸಂಬಂಧಿಕರೊಂದಿಗೆ ಹಾಜರಿದ್ದ ಖಾಸಗಿ ಸಂಬಂಧವಾಗಿತ್ತು. ಇತ್ತೀಚಿಗೆ ಅವರು ಸೀಮಿತ ಓವರ್ ಪಂದ್ಯಗಳ ಭಾಗವಾಗಿ ಆಸ್ಟ್ರೇಲಿಯಾದಲ್ಲಿದ್ದರು, ಇತ್ತಿಚಿಗಷ್ಟೇ ಭಾರತಕ್ಕೆ ಆಗಮಿಸಿದ್ದರು.

ಕೊರಿಯೋಗ್ರಾಫರ್ ಧನಶ್ರೀ ವರ್ಮಾ ಜೊತೆ ಕ್ರಿಕೆಟರ್ ಯುಜ್ವೇಂದ್ರ ಚಹಾಲ್ ನಿಶ್ಚಿತಾರ್ಥ...!

ಹೊಸದಾಗಿ ಮದುವೆಯಾದವರ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಲ್ಲಿ ಧನಶ್ರೀ ಮರೂನ್ ಲೆಹೆಂಗಾ ಧರಿಸಿದರೆ, ಚಹಲ್ ದಂತ ಶೆರ್ವಾನಿ ಯನ್ನು ಮರೂನ್ ಪೇಟದಿಂದ ಅಲಂಕರಿಸಿದ್ದಾರೆ.ಈ ವರ್ಷದ ಜುಲೈನಲ್ಲಿ ದಂಪತಿಗಳಿಬ್ಬರು ನಿಶ್ಚಿತಾರ್ಥ ಮಾಡಿಕೊಂಡರು.ತದನಂತರ ಧನಶ್ರೀ ಅವರು ಚಹಲ್ ಅವರೊಂದಿಗೆ ಯುಎಇಗೆ ತೆರಳಿದ್ದರು.

ಆಗಸ್ಟ್ನಲ್ಲಿ, ಭಾರತೀಯ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ರೋಕಾ ಸಮಾರಂಭದ ಫೋಟೋಗಳನ್ನು ಧನಶ್ರೀ ವರ್ಮಾ ಅವರೊಂದಿಗೆ ಹಂಚಿಕೊಂಡಿದ್ದರು.

Trending News