ಕಳೆದ ವರ್ಷ ಯಾರಿಗೂ ಬೇಡವಾಗಿದ್ದ ಆಟಗಾರನನ್ನು ಈ ವರ್ಷ 14 ಕೋಟಿ ನೀಡಿ ಖರೀದಿಸಿದ CSK… ಇದಪ್ಪಾ ಲಕ್ ಅಂದ್ರೆ!
New Zealand Batter Daryl Mitchell: ಮಿಚೆಲ್ ಪರ ಪಂಜಾಬ್ ಕೊನೆಯವರೆಗೂ ಬಿಡ್ ಮಾಡಿದರೂ ಚೆನ್ನೈ ತಂಡವನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಭಾರತದ ನೆಲದಲ್ಲಿ ಆಡಿದ ODI ವಿಶ್ವಕಪ್ 2023 ರಲ್ಲಿ ರಚಿನ್ ಬ್ಯಾಟ್’ನೊಂದಿಗೆ ಅದ್ಭುತಗಳನ್ನು ಮಾಡಿದ್ದರು.
New Zealand Batter Daryl Mitchell: ನ್ಯೂಜಿಲೆಂಡ್’ನ ಡೇರಿಲ್ ಮಿಚೆಲ್ ಮೇಲೆ ಕೋಟಿ ರೂಪಾಯಿಗಳ ಸುರಿಮಳೆಯಾಗಿದೆ. ಐಪಿಎಲ್ 2024ರ ಹರಾಜಿನಲ್ಲಿ ಡೆರಿಲ್ ಮಿಚೆಲ್’ಗೆ 14 ಕೋಟಿ ರೂಪಾಯಿ ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಪಾಲು ಮಾಡಿದೆ. ಮಿಚೆಲ್’ನ ಮೂಲ ಬೆಲೆ 1 ಕೋಟಿ ರೂ. ಆದರೆ 14 ಪಟ್ಟು ಹೆಚ್ಚು ಬೆಲೆಗೆ ಅವರನ್ನು ಖರೀದಿಸಿದೆ ಸಿ ಎಸ್ ಕೆ.
ಇದನ್ನೂ ಓದಿ: ಬರೋಬ್ಬರಿ 500 ಕೋಟಿ ಖರ್ಚು ಮಾಡಿ ಮಗಳಿಗೆ 2ನೇ ಮದುವೆ ಮಾಡಿಸಿದ ಖ್ಯಾತ ಬಹುಭಾಷಾ ನಟ!
ಮಿಚೆಲ್ ಪರ ಪಂಜಾಬ್ ಕೊನೆಯವರೆಗೂ ಬಿಡ್ ಮಾಡಿದರೂ ಚೆನ್ನೈ ತಂಡವನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಭಾರತದ ನೆಲದಲ್ಲಿ ಆಡಿದ ODI ವಿಶ್ವಕಪ್ 2023 ರಲ್ಲಿ ರಚಿನ್ ಬ್ಯಾಟ್’ನೊಂದಿಗೆ ಅದ್ಭುತಗಳನ್ನು ಮಾಡಿದ್ದರು. ಮಿಚೆಲ್ ವಿಶ್ವಕಪ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಐದನೇ ಆಟಗಾರ. 10 ಪಂದ್ಯಗಳ 9 ಇನ್ನಿಂಗ್ಸ್’ಗಳಲ್ಲಿ 69.00 ಮತ್ತು 111.07 ಸ್ಟ್ರೈಕ್ ರೇಟ್‌ನಲ್ಲಿ 552 ರನ್ ಗಳಿಸಿದರು. ಈ ಇಬ್ಬರೂ ಕಿಲಾಡಿಗಳು ಈ ಬಾರಿ ಚೆನ್ನೈ ಪಾಲಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ತಂಡದಲ್ಲಿ ಭಾರತದ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಅವರನ್ನು ಕೂಡ ಸೇರಿಸಿಕೊಂಡಿದೆ. 2 ಕೋಟಿ ಮೂಲ ಬೆಲೆ ಹೊಂದಿದ್ದ ಶಾರ್ದೂಲ್ ಠಾಕೂರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 4 ಕೋಟಿಗೆ ಖರೀದಿಸಿದೆ. ಈ ಹಿಂದೆ, ಶಾರ್ದೂಲ್ ಐಪಿಎಲ್ 2023 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್’ನ ಭಾಗವಾಗಿದ್ದರು.
ಇದನ್ನೂ ಓದಿ: ದ.ಆಫ್ರಿಕಾ ವಿರುದ್ಧ 2ನೇ ಪಂದ್ಯ ಸೋಲಲು ಕಾರಣವಾಗಿದ್ದು ಇವರೇ… ಅಸಮಾಧಾನದಿಂದ ನಾಯಕ ರಾಹುಲ್ ಹೇಳಿಕೆ
ನ್ಯೂಜಿಲೆಂಡ್ ಸ್ಟಾರ್ ರಚಿನ್ ರವೀಂದ್ರ ಕೂಡ ಚೆನ್ನೈ ಸೂಪರ್ ಕಿಂಗ್ಸ್ ನ ಭಾಗವಾಗಿದ್ದಾರೆ. ಚೆನ್ನೈ ತಂಡ 1.80 ಕೋಟಿ ಬೆಲೆ ನೀಡಿ ರಚಿನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.