Another Blow For CSK : ಐಪಿಎಲ್ 2023 ಪ್ರಾರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಹಿನ್ನಡೆ ಅನುಭವಿಸಿದೆ. ತಂಡದ ವೇಗದ ಬೌಲರ್ 2023 ರ ಸಂಪೂರ್ಣ ಐಪಿಎಲ್ ನಿಂದ ಹೊರಗುಳಿಯಬಹುದು. ಕಳೆದ ಋತುವಿನಲ್ಲಿ ಚೆನ್ನೈಗೆ ತುಂಬಾ ಕೆಟ್ಟದಾಗಿತ್ತು ಆದರೆ ಈ ವೇಗದ ಬೌಲರ್ ತಂಡಕ್ಕೆ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ. ಆದ್ರೆ, ಈ ಐಪಿಎಲ್ ಸೀಸನ್ ನಿಂದ ಹೊರಗುಳಿದರೆ ಟೀಂಗೆ ಭಾರಿ ಹಿನ್ನೆಡೆಯಾಗಲಿದೆ.


COMMERCIAL BREAK
SCROLL TO CONTINUE READING

ಗಾಯಗೊಂಡ ಈ ವೇಗದ ಬೌಲರ್ 


ಕೈಲ್ ಜೇಮಿಸನ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಂದು ದೊಡ್ಡ ಹಿನ್ನಡೆ ಅನುಭವಿಸಿದೆ. ಕಳೆದ ಐಪಿಎಲ್ ಸೀಸನ್‌ನಲ್ಲಿ ಚೆನ್ನೈ ಪರ ಬ್ರಾವೋ ಜೊತೆ ಅತ್ಯಧಿಕ ವಿಕೆಟ್ ಪಡೆದ ಮುಖೇಶ್ ಚೌಧರಿ ಐಪಿಎಲ್ 2023ರಲ್ಲಿ ಆಡುವ ಸಾಧ್ಯತೆ ಕಾಣುತ್ತಿಲ್ಲ. ಎಡಗೈ ವೇಗದ ಬೌಲರ್ CSK ಗಾಗಿ ತನ್ನ ಚೊಚ್ಚಲ ಋತುವಿನಲ್ಲಿ ಎಲ್ಲರನ್ನೂ ಮೆಚ್ಚಿಸಿದರು ಮತ್ತು ಚೆನ್ನೈ ಪರ ಗರಿಷ್ಠ 16 ವಿಕೆಟ್ಗಳನ್ನು ಪಡೆದರು.


ಇದನ್ನೂ ಓದಿ : CCL 2023: ಸೆಮಿಫೈನಲ್’ನಲ್ಲಿ ಮುಗ್ಗರಿಸಿದ ಕರ್ನಾಟಕ ಬುಲ್ಡೋಜರ್ಸ್: ತೆಲುಗು ವಾರಿಯರ್ಸ್ ವಿರುದ್ಧ ಸೋಲುಂಡ ಕಿಚ್ಚ ಪಡೆ


ಈ ಬಗ್ಗೆ ಸಿಎಸ್‌ಕೆ ಸಿಇಒ ಹೇಳಿದ್ದು ಹೀಗೆ


ಈ ಬಗ್ಗೆ ಮಾತನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್, ಇನ್ನೂ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. 


ಇನ್ನು ಕ್ರಿಕ್‌ಬಝ್‌ನೊಂದಿಗೆ ಮಾತನಾಡಿ, ನಾವು ಕೂಡ ಮುಖೇಶ್ ಅವರ ವಾಪಸಾತಿಗಾಗಿ ಕಾಯುತ್ತಿದ್ದೇವೆ ಆದರೆ ನಮಗೆ ಬಹಳ ಕಡಿಮೆ ಭರವಸೆ ಇದೆ. ಕಳೆದ ಋತುವಿನಲ್ಲಿ ಅವರು ನಮ್ಮ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. ಒಂದು ವೇಳೆ ಅವರು ಈ ಬಾರಿಯ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗದಿದ್ದರೆ ಅದು ನಮ್ಮ ಪಾಲಿಗೆ ಅತ್ಯಂತ ದುರದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ. 


ಐಪಿಎಲ್ ವೃತ್ತಿಜೀವನ ಹೀಗಿದೆ


ಮುಖೇಶ್ ಮೊದಲು ಆಡಿದ್ದು ಐಪಿಎಲ್ 2022 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು ಮೂಲ ಬೆಲೆಗೆ 20 ಲಕ್ಷ ರೂಪಾಯಿ ಬಿಡ್ ಮಾಡಿ ಕಹರಿದಿಸಿತ್ತು. ಅವರು ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. ಇಡೀ ಐಪಿಎಲ್ ಋತುವಿನಲ್ಲಿ ಮುಖೇಶ್ 13 ಪಂದ್ಯಗಳನ್ನು ಆಡಿದ್ದಾರೆ ಮತ್ತು 16 ವಿಕೆಟ್ಗಳನ್ನು ಪಡೆದರು. ಅಷ್ಟೇ ಸಂಖ್ಯೆಯ ವಿಕೆಟ್‌ಗಳನ್ನು ಬ್ರಾವೋ ಕೂಡ ಕಬಳಿಸಿದರು.


ಇದನ್ನೂ ಓದಿ : 2018ರ ನಿಷೇಧದ ಬಗ್ಗೆ MS Dhoni ಮೇಲೆ ಇಂತಹ ಹೇಳಿಕೆ ನೀಡಿದ ಗವಾಸ್ಕರ್! ಕ್ರೀಡಾ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.