CCL 2023: ಸೆಮಿಫೈನಲ್’ನಲ್ಲಿ ಮುಗ್ಗರಿಸಿದ ಕರ್ನಾಟಕ ಬುಲ್ಡೋಜರ್ಸ್: ತೆಲುಗು ವಾರಿಯರ್ಸ್ ವಿರುದ್ಧ ಸೋಲುಂಡ ಕಿಚ್ಚ ಪಡೆ

CCL 2023: ಎರಡನೇ ಇನ್ನಿಂಗ್ಸ್‌’ನಲ್ಲಿ ಗೆಲ್ಲಲು 103 ರನ್‌’ಗಳನ್ನು ಬೆನ್ನಟ್ಟಿದ ವಾರಿಯರ್ಸ್ ಬ್ಯಾಟರ್‌’ಗಳು ಅದ್ಭುತ ಆಟವನ್ನಾಡಿದ್ದರು., ಥಮನ್ ಮತ್ತು ಪ್ರಿನ್ಸ್ ಪಂದ್ಯದಲ್ಲಿ ಎರಡು ಎಸೆತಗಳು ಬಾಕಿ ಇರುವಂತೆಯೇ ಆಟವನ್ನು ಮುಗಿಸಿದರು. ತೆಲುಗು ವಾರಿಯರ್ಸ್ ಈಗ CCL 2023 ರ ಅಂತಿಮ ಪಂದ್ಯದಲ್ಲಿ ಭೋಜ್‌ಪುರಿ ದಬಾಂಗ್ಸ್ ಅನ್ನು ಎದುರಿಸಲಿದೆ

Written by - Bhavishya Shetty | Last Updated : Mar 25, 2023, 01:51 AM IST
    • ಕರ್ನಾಟಕ ಬುಲ್ಡೋಜರ್ಸ್ ಕ್ರಿಕೆಟ್ ತಂಡವು ತೆಲುಗು ವಾರಿಯರ್ಸ್ ವಿರುದ್ಧ ಆರು ವಿಕೆಟ್’ಗಳ ಸೋಲು ಕಂಡಿದೆ
    • ಎರಡನೇ ಇನ್ನಿಂಗ್ಸ್‌’ನಲ್ಲಿ ಗೆಲ್ಲಲು 103 ರನ್‌’ಗಳನ್ನು ಬೆನ್ನಟ್ಟಿದ ವಾರಿಯರ್ಸ್ ಬ್ಯಾಟರ್‌’ಗಳು ಅದ್ಭುತ ಆಟವನ್ನಾಡಿದ್ದರು.
    • ಥಮನ್ ಮತ್ತು ಪ್ರಿನ್ಸ್ ಪಂದ್ಯದಲ್ಲಿ ಎರಡು ಎಸೆತಗಳು ಬಾಕಿ ಇರುವಂತೆಯೇ ಆಟವನ್ನು ಮುಗಿಸಿದರು
CCL 2023: ಸೆಮಿಫೈನಲ್’ನಲ್ಲಿ ಮುಗ್ಗರಿಸಿದ ಕರ್ನಾಟಕ ಬುಲ್ಡೋಜರ್ಸ್: ತೆಲುಗು ವಾರಿಯರ್ಸ್ ವಿರುದ್ಧ ಸೋಲುಂಡ ಕಿಚ್ಚ ಪಡೆ title=
CCL 2023

CCL 2023: ಮೂರು ಬಾರಿಯ ಚಾಂಪಿಯನ್ ಮತ್ತೊಂದು ಫೈನಲ್‌ ಹಂತ ತಲುಪುವಲ್ಲಿ ಎಡವಿದೆ. ಹೌದು ಕರುನಾಡ ಹೆಮ್ಮೆಯ ಕರ್ನಾಟಕ ಬುಲ್ಡೋಜರ್ಸ್ ಕ್ರಿಕೆಟ್ ತಂಡವು ತೆಲುಗು ವಾರಿಯರ್ಸ್ ವಿರುದ್ಧ ಆರು ವಿಕೆಟ್’ಗಳ ಸೋಲು ಕಂಡಿದೆ.

ಎರಡನೇ ಇನ್ನಿಂಗ್ಸ್‌’ನಲ್ಲಿ ಗೆಲ್ಲಲು 103 ರನ್‌’ಗಳನ್ನು ಬೆನ್ನಟ್ಟಿದ ವಾರಿಯರ್ಸ್ ಬ್ಯಾಟರ್‌’ಗಳು ಅದ್ಭುತ ಆಟವನ್ನಾಡಿದ್ದರು., ಥಮನ್ ಮತ್ತು ಪ್ರಿನ್ಸ್ ಪಂದ್ಯದಲ್ಲಿ ಎರಡು ಎಸೆತಗಳು ಬಾಕಿ ಇರುವಂತೆಯೇ ಆಟವನ್ನು ಮುಗಿಸಿದರು. ತೆಲುಗು ವಾರಿಯರ್ಸ್ ಈಗ CCL 2023 ರ ಅಂತಿಮ ಪಂದ್ಯದಲ್ಲಿ ಭೋಜ್‌ಪುರಿ ದಬಾಂಗ್ಸ್ ಅನ್ನು ಎದುರಿಸಲಿದೆ.

ಇದನ್ನೂ ಓದಿ: Team India: ಈ ಆಟಗಾರನನ್ನು ಆಯ್ಕೆ ಮಾಡದೆ ದೊಡ್ಡ ತಪ್ಪು ಮಾಡಿದ ಸಮಿತಿ! ಮತ್ತೆ ಪಶ್ಚಾತ್ತಾಪ ಪಡುತ್ತಾ ಟೀಂ ಇಂಡಿಯಾ!

ತೆಲುಗು ವಾರಿಯರ್ಸ್ vs ಕರ್ನಾಟಕ ಬುಲ್ಡೋಜರ್ಸ್ ತಂಡಗಳು ಹೀಗಿವೆ:

ತೆಲುಗು ವಾರಿಯರ್ಸ್: ಅಖಿಲ್ ಅಕ್ಕಿನೇನಿ, ವೆಂಕಟೇಶ್, ಸಚಿನ್ ಜೋಶಿ, ಸುಧೀರ್ ಬಾಬು, ತರುಣ್, ಪ್ರಿನ್ಸ್ ಸೆಸಿಲ್, ಸಾಯಿ ಧರಮ್ ತೇಜ್, ಅಜಯ್, ಇಎಸ್‌ಡಿ, ಅಶ್ವಿನ್ ಬಾಬು, ಆದರ್ಶ್ ಬಾಲಕೃಷ್ಣ, ನಂದಕಿಶೋರ್, ನಿಖಿಲ್, ಸಿದ್ದಾರ್ಥ್, ಪ್ರಭು, ರಘು, ಸುಶಾಂತ್, ಶ್ರೀಕಾಂತ್, ತಾರಕ ರತ್ನ, ಸಾಮ್ರಾಟ್ ರೆಡ್ಡಿ, ವಿಶ್ವ

ಕರ್ನಾಟಕ ಬುಲ್ಡೋಜರ್ಸ್: ಪ್ರದೀಪ್, ರಾಜೀವ್ ಎಚ್, ಕಿಚ್ಚ ಸುದೀಪ್, ಸುನೀಲ್ ರಾವ್, ಜಯರಾಮ್ ಕಾರ್ತಿಕ್, ಪ್ರತಾಪ್, ಪ್ರಸನ್ನ, ಶಿವರಾಜ್ ಕುಮಾರ್, ಗಣೇಶ್, ಕೃಷ್ಣ, ಸೌರವ್ ಲೋಕೇಶ್, ಚಂದನ್, ಅರ್ಜುನ್ ಯೋಗಿ, ನಿರೂಪ್ ಭಂಡಾರಿ, ನಂದ ಕಿಶೋರ್, ಮತ್ತು ಸಾಗರ್ ಗೌಡ

ಇನ್ನು ಕಿಚ್ಚ ಸುದೀಪ್ ಅತ್ಯಾಸಕ್ತಿಯ ಕ್ರಿಕೆಟಿಗ ಎನ್ನಬಹುದು. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸ್ಥಾಪನೆಯಾದಾಗಿನಿಂದ, ಸ್ಯಾಂಡಲ್‌ವುಡ್ ತಂಡವಾದ ಕರ್ನಾಟಕ ಬುಲ್ಡೋಜರ್ಸ್ ಅನ್ನು ಮುನ್ನಡೆಸುತ್ತಿದ್ದ ನಟ ಈ ಬಾರಿ ನಾಯಕತ್ವದಿಂದ ಹಿಂದೆ ಸರಿದಿದ್ದಾರೆ. ಹಲವು ವರ್ಷಗಳಿಂದ ಸುದೀಪ್ ನಾಯಕತ್ವದಲ್ಲಿ ಪಂದ್ಯಾವಳಿಯನ್ನು ಆಡಿದ ಪ್ರದೀಪ್ ಬೋಗಾಡಿ ಈಗ ತಂಡದ ನಾಯಕರಾಗಿದ್ದರು. ಮೊದಲು ಅವರು ತಂಡವನ್ನು ಯಶಸ್ವಿಯಾಗಿ ನಾಲ್ಕು ಬ್ಯಾಕ್ ಟು ಬ್ಯಾಕ್ ಗೆಲುವಿನತ್ತ ಮುನ್ನಡೆಸಿದ್ದರು. ಆದರೆ ಸೆಮಿಫೈನಲ್’ನಲ್ಲಿ ಎಡವಿದ್ದು, ಫೈನಲ್ ಪ್ರವೇಶಿಸುವ ಕನಸು ಕಮರಿದೆ.  

ಇದನ್ನೂ ಓದಿ: Viral Video: ಕ್ರೀಡೆಗೂ ಜೈ… ಡ್ಯಾನ್ಸ್;ಗೂ ಸೈ: ಚಿನ್ನದ ಹುಡುಗ ನೀರಜ್ ಚೋಪ್ರಾ ಡ್ಯಾನ್ಸ್ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2011 ರಲ್ಲಿ ಪ್ರಾರಂಭವಾದಾಗಿನಿಂದ, ಕರ್ನಾಟಕ ಬುಲ್ಡೋಜರ್ಸ್ 8 ಫೈನಲ್‌’ಗಳಲ್ಲಿ 6 ಪಂದ್ಯಗಳನ್ನು ಆಡಿದೆ. ಎರಡು ಬಾರಿ ಪ್ರಶಸ್ತಿ ಗೆದ್ದಿದ್ದರೆ, ಉಳಿದ ನಾಲ್ಕು ಬಾರಿ ರನ್ನರ್ ಅಪ್ ಆಗಿ ಕೊನೆಗೊಂಡಿದೆ. ಇನ್ನೊಂದೆಡೆ ತೆಲುಗು ವಾರಿಯರ್ಸ್ ಪಂದ್ಯಾವಳಿಯಲ್ಲಿ ಮೂರು ಬಾರಿ ಗೆದ್ದಿದ್ದು, ಒಮ್ಮೆ ರನ್ನರ್ ಅಪ್ ಆಗಿದ್ದಾರೆ,

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News