Chennai Super Kings IPL 2024 Squads: ಕಳೆದ ವರ್ಷ ಐಪಿಎಲ್ 2023 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ನೇ ಬಾರಿ ಗೆಲುವು ದಾಖಲಿಸಿತು. 2024ರಲ್ಲೂ ಅದೇ ಫಾರ್ಮ್‌ನೊಂದಿಗೆ ಮತ್ತೊಮ್ಮೆ ಪ್ರಶಸ್ತಿ ಗೆಲ್ಲಲು ಚೆನ್ನೈ ಸಿದ್ಧತೆ ನಡೆಸಿದೆ. ಐಪಿಎಲ್ 2024 ರ ಮಿನಿ ಹರಾಜಿನಲ್ಲಿ ಕೆಲವು ಗುಣಮಟ್ಟದ ಆಟಗಾರರನ್ನು ಚೆನ್ನೈ ಖರೀದಿಸಿದ್ದು, ಪ್ರಬಲ ತಂಡವಾಗಿದೆ. ಐಪಿಎಲ್ 2024 ರ ಹರಾಜು ಕಳೆದ ಡಿಸೆಂಬರ್ 19, 2023 ರಂದು ದುಬೈನಲ್ಲಿ ನಡೆಯಿತು. ಕಳೆದ 16 ಸೀಸನ್‌ಗಳಿಂದ ಐಪಿಎಲ್ ಆಡುತ್ತಿರುವ ಧೋನಿ ಈ ವರ್ಷ 17ನೇ ಸೀಸನ್‌ನಲ್ಲಿ ನಿವೃತ್ತಿ ಘೋಷಿಸುವ ನಿರೀಕ್ಷೆಯಿದೆ. ಹೀಗಾಗಿ ಧೋನಿಗಾಗಿ ಈ ವರ್ಷ ಐಪಿಎಲ್ ಟ್ರೋಫಿ ಗೆಲ್ಲಲು ಸಿಎಸ್‌ಕೆ ಆಟಗಾರರು ಸಿದ್ಧರಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡ ಸತತ ಎರಡು ಬಾರಿ ಟ್ರೋಫಿ ಗೆದ್ದಿಲ್ಲ. 2010 ಮತ್ತು 2011ರಲ್ಲಿ ಕೊನೆಯ ಬಾರಿ ಸಿಎಸ್‌ಕೆ ಈ ಸಾಧನೆ ಮಾಡಿತ್ತು.


COMMERCIAL BREAK
SCROLL TO CONTINUE READING

ಚೆನ್ನೈ ತಂಡವು ಐಪಿಎಲ್ 2024 ರ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಾರ್ಚ್ 22 ರಂದು ಚೆನ್ನೈ ಸ್ಟೇಡಿಯಂನಲ್ಲಿ ಆಡಲಿದೆ. ಆ ಬಳಿಕ ಮಾರ್ಚ್ 26ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಚೆನ್ನೈನ ಐಪಿಎಲ್ 2023 ತಂಡದ ಎಂಟು ಆಟಗಾರರು ಈ ವರ್ಷ ಹೊರಗಿಡಲಾಗಿದೆ ಎನ್ನಲಾಗಿದೆ. 


ಇದನ್ನೂ ಓದಿ: ಐತಿಹಾಸಿಕ ಡಬ್ಲ್ಯೂಪಿಎಲ್ ಪ್ರಶಸ್ತಿ ಗೆದ್ದ ನಂತರ ಸ್ಮೃತಿ ಮಂಧಾನಾಗೆ ವಿರಾಟ್ ಕೊಹ್ಲಿಯಿಂದ ವೀಡಿಯೊ ಕರೆ


ಈ ವರ್ಷ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಹೊರಗುಳಿದ ಆಟಗಾರರಲ್ಲಿ ಮೊದಲ ಹೆಸರು ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಎನ್ನಲಾಗ್ತಿದೆ. IPL 2023 ಹರಾಜಿನಲ್ಲಿ CSK ಅವರನ್ನು 16.25 ಕೋಟಿಗೆ ಖರೀದಿಸಿತು, ಆದರೆ ಗಾಯದ ಕಾರಣ, ಸ್ಟೋಕ್ಸ್ ಕೇವಲ ಎರಡು ಪಂದ್ಯಗಳನ್ನು ಆಡಿದರು.


CSK ಹರಾಜಿನ ಮೊದಲು ದಕ್ಷಿಣ ಆಫ್ರಿಕಾದ ಡ್ವೈನ್ ಪ್ರಿಟೋರಿಯಸ್ ಮತ್ತು ಸಿಸಂದಾ ಮಗಲಾ, ನ್ಯೂಜಿಲೆಂಡ್‌ನ ಕೈಲ್ ಜೇಮಿಸನ್ ಮತ್ತು ಕೆ ಭಗತ್ ವರ್ಮಾ, ಸುಭ್ರಾಂಶು ಸೇನಾಪತಿ ಮತ್ತು ಆಕಾಶ್ ಸಿಂಗ್ ಅವರಂತಹ ಭಾರತೀಯ ಆಟಗಾರರನ್ನು ಸಹ ಬಿಡುಗಡೆ ಮಾಡಿತು. ಅಲ್ಲದೆ ಅಂಬಾಟಿ ರಾಯಡು ಕಳೆದ ಸೀಸನ್ ನಂತರ ಐಪಿಎಲ್‌ನಿಂದ ನಿವೃತ್ತಿಯಾಗಿರುವುದರಿಂದ ಈ ವರ್ಷವೂ ಆಡುವುದಿಲ್ಲ. ‌


ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಮತ್ತು ಡೆರಿಲ್ ಮಿಚೆಲ್ ಚೆನ್ನೈ ತಂಡವನ್ನು ಸೇರಿಕೊಂಡಿದ್ದಾರೆ. ಶಾರ್ದೂಲ್ ಠಾಕೂರ್ ಮತ್ತೆ ಚೆನ್ನೈ ತಂಡವನ್ನು ಸೇರಿಕೊಂಡಿದ್ದಾರೆ. ಇವರಲ್ಲದೆ ಭಾರತದ ಆಟಗಾರ ಸಮೀರ್ ರಿಝ್ವಿ, ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಜುರ್ ರಹಮಾನ್ ಮತ್ತು ಅವನೀಶ್ ರಾವ್ ಅರವೆಲ್ಲಿ ಚೆನ್ನೈ ತಂಡದ ಬಲ ಹೆಚ್ಚಿಸಿದ್ದಾರೆ. ಅಲ್ಲದೆ, ವೇಗದ ಬೌಲರ್ ಮುಖೇಶ್ ಚೌಧರಿ ಅವರು ಗಾಯದ ಕಾರಣ ಐಪಿಎಲ್ 2023 ರಿಂದ ಹೊರಗುಳಿದಿದ್ದರು. ಅವರು ಈ ಬಾರಿ ಆಡಲು ಸಿದ್ಧರಾಗಿದ್ದಾರೆ.


IPL 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ:


ಧೋನಿ (ನಾಯಕ), ಮೊಯಿನ್ ಅಲಿ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ರಾಜವರ್ಧನ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಅಜಿಂಕ್ಯ ರಹಾನೆ, ಶೇಖ್ ರಶೀದ್, ಮಿಚೆಲ್ ಸಾಂಟ್‌ನರ್, ಮಹೇಶ್ ಸಿಂಗ್, ಸಿಮರ್ಜೀತ್, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಝ್ವಿ, ಮುಸ್ತಫಿಜುರ್ ರೆಹಮಾನ್, ಅವನೀಶ್ ರಾವ್ ಅರವೆಲ್ಲಿ. 


ಇದನ್ನೂ ಓದಿ: WPL 2024 DCW vs RCBW: ಹೆಣ್ಮಕ್ಳೆ ಸ್ಟ್ರಾಂಗು ಗುರು, RCBಗೆ ಕೊನೆಗೂ ಸಿಕ್ತು ಕಪ್‌ ಗುರು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.