ನವದೆಹಲಿ: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್  ಚೇತೇಶ್ವರ ಪೂಜಾರ ಕೌಂಟಿ ಚಾಂಪಿಯನಶಿಪ್ ನಲ್ಲಿ ಪಾಲ್ಗೊಳ್ಳಲು ಯಾರ್ಕಶೈರಗೆ ಸಹಿ ಹಾಕಿದ್ದಾರೆ.


COMMERCIAL BREAK
SCROLL TO CONTINUE READING

11 ನೇ ಆವೃತ್ತಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜಿನಲ್ಲಿ ಪೂಜಾರ ಮಾರಾಟವಾಗಾದ ಕಾರಣ 2018 ರ ಎಪ್ರಿಲ್ ನಲ್ಲಿ ಇಂಗ್ಲೆಂಡ್ ನಲ್ಲಿ ನಡೆಯುವ ದೇಶಿಯ ಕ್ರಿಕೆಟ್ ನಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಅದು ಕೂಡ ಐಪಿಲ್ ವೇಳೆಯಲ್ಲಿಯೇ ನಡೆಯುತ್ತಿದೆ ಎನ್ನುವುದು ವಿಶೇಷ. ಈ ಹಿಂದೆ ಯಾರ್ಕಶೈರ್ ಗಾಗಿ 2015 ರಲ್ಲಿ ಕೌಂಟಿ ಚಾಂಪಿಯನಶಿಪ್ ನಲ್ಲಿ  ಅವರು ಭಾಗವಹಿಸಿದ್ದರು. ಆ ಸಂದರ್ಭದಲ್ಲಿ  ಕ್ಲಬ್ ಪಂದ್ಯವನ್ನು ಗೆದ್ದಿತ್ತು.


ಈ ಕುರಿತಾಗಿ ಇಎಸ್ಪಿಎನ್ ಕ್ರಿಕ್ ಇನ್ಫೋಗೆ ಪ್ರತಿಕ್ರಯಿಸಿರುವ ಚೇತೆಶ್ವರ್ ಪೂಜಾರ್ " ನಾನು ಮತ್ತೊಮ್ಮೆ ಯಾರ್ಕ ಶೈರ್ ಪ್ರತಿನಿಧಿಸುವುದಕ್ಕೆ ನಿಜಕ್ಕೂ ಉತ್ಸುಕನಾಗಿದ್ದೇನೆ.ಕೌಂಟಿ ಕ್ರಿಕೆಟ್ ಆಡಿದಾಗಲೆಲ್ಲಾ ನಾನು ಉತ್ತಮ ಆಟಗಾರನಾಗಿ ಪರಿವರ್ತನೆಯಾಗಿದ್ದೇನೆ.ಇದೆ ಯೋಜನೆಯೊಂದಿಗೆ ಮತ್ತೆ ಕೌಂಟಿ ಕ್ರಿಕೆಟ್ ಗೆ ಮರಳಿದ್ದೇನೆ ಆದ್ದರಿಂದ ನನ್ನ ಕೈಯಿಂದ ಸಾಧ್ಯವಾದಷ್ಟು ರನ್ ಗಳನ್ನು ಯಾರ್ಕ್ ಶೈರಗಾಗಿ ಗಳಿಸಲು ಯತ್ನಿಸುತ್ತೇನೆ ಎಂದರು.