ಸಿಸ್ಟೋಬಾಲ್ ಪಂದ್ಯಾವಳಿಗೆ ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಆಯ್ಕೆ..!
Cestoball: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎ ವ್ಯಾಸಂಗ ಮಾಡುತ್ತಿರುವ ಎಸ್.ಸಚಿನ್ ಸಿಸ್ಟೋಬಾಲ್ ಕ್ರೀಡೆಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಎರಡನೇ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಮೂಲಕ ಕಾಲೇಜಿಗೆ ಮತ್ತು ಚಿಕ್ಕಬಳ್ಳಾಪುರಕ್ಕೆ ಹೆಮ್ಮೆ ತಂದಿದ್ದಾರೆ.
ಚಿಕ್ಕಬಳ್ಳಾಪುರ: ನ.7ರಿಂದ 13ರವರೆಗೆ ಥಾಯ್ಲೆಂಡ್ ಹಾಗೂ ಶ್ರೀಲಂಕಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಸಿಸ್ಟೋಬಾಲ್ ಪಂದ್ಯಾವಳಿಯಲ್ಲಿ ಸಚಿನ್ ಭಾಗಿ ಆಗುತ್ತಿದ್ದಾರೆ. ಸಚಿನ್ ಸತತವಾಗಿ ಮೂರು ವರ್ಷಗಳಿಂದ ಸಿಸ್ಟೋಬಾಲ್ ಅಭ್ಯಾಸ ಮಾಡುತ್ತಿದ್ದಾರೆ. ಈ ಮುನ್ನ ಬಾಸ್ಕೆಟ್ ಬಾಲ್ ಕ್ರೀಡಾಪಟುವಾಗಿದ್ದರು.
ಗುರುಗಳಾದ ಮೊಹಮ್ಮದ್ ಅಕಿಬ್ ಅವರಿಗೆ ಈ ಕ್ರೀಡೆಯ ಬಗ್ಗೆ ಪ್ರೋತ್ಸಾಹ ನೀಡಿದರು. ತರಬೇತುದಾರರಾದ ಅಮಿತ್ ಬೆಳಗಾಂ, ನವದೆಹಲಿಯ ಅಂಕುರ್ ಹಾಗೂ ಮಹಾರಾಷ್ಟ್ರದ ಅಂಕಿತ್ ಸಹಕಾರದಲ್ಲಿ ಸಚಿನ್ ನಿತ್ಯ ಕ್ರೀಡಾ ಅಭ್ಯಾಸ ನಡೆಸಿದರು.
ಇದನ್ನೂ ಓದಿ-ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಬಳಸದಂತೆ ಸರ್ಕಾರ ಆದೇಶ
ಸಿಸ್ಟೋಬಾಲ್ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದರು. ರಾಜ್ಯಮಟ್ಟದ ಸಿಸ್ಟೋಬಾಲ್ ಕ್ರೀಡಾಕೂಟದಲ್ಲಿ ಸತತ ಮೂರು ವರ್ಷ ಭಾಗವಹಿಸಿದರು. ಅನಂತಪುರ ಹಾಗೂ ಬೆಂಗಳೂರಿನಲ್ಲಿ ನಡೆದ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದರು.
ಥಾಯ್ಲೆಂಡ್‌ನಲ್ಲಿ ಈ ಹಿಂದೆ ನಡೆದ ಅಂತರರಾಷ್ಟ್ರೀಯ ಸಿಸ್ಟೋಬಾಲ್ ಪಂದ್ಯದಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಿಸ್ಟೋಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಸಹ ಸಚಿನ್ ಭಾಗಿ ಆಗಿದ್ದಾರೆ.
ಇದನ್ನೂ ಓದಿ-ಬೆಂಗಳೂರಲ್ಲಿ ಐಟಿ ದಾಳಿ ವೇಳೆ ಕೋಟಿ ಕೋಟಿ ಪತ್ತೆ ಪ್ರಕರಣ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್