India vs West Indies 2nd ODI: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ODI ಪಂದ್ಯ ಬಾರ್ಬಡೋಸ್‌ ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಈ ಆಟಗಾರರ ಬದಲಿಗೆ ಅಕ್ಷರ್ ಪಟೇಲ್ ಮತ್ತು ಸಂಜು ಸ್ಯಾಮ್ಸನ್ ಆಡುವ ಅವಕಾಶ ಪಡೆದರು. ಆದರೆ ಟೀಂ ಇಂಡಿಯಾ 6 ವಿಕೆಟ್‌ ಗಳಿಂದ ಹೀನಾಯ ಸೋಲು ಎದುರಿಸಿದ್ದು ಮಾತ್ರ ವಿಪರ್ಯಾಸ. ಇನ್ನು ಈ ಪಂದ್ಯದ ನಂತರ, ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ರೋಹಿತ್-ವಿರಾಟ್ ಅವರನ್ನು ಪ್ಲೇಯಿಂಗ್ 11 ರಲ್ಲಿ ಯಾಕೆ ಸೇರಿಸಲಿಲ್ಲ ಎಂಬ ಕಾರಣವನ್ನು ಬಿಚ್ಚಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Watch: ವಿಮಾನದಲ್ಲಿ ಧೋನಿ ಮಲಗಿದ್ದಾಗ ಕದ್ದು ಫೋಟೋ ತೆಗೆಸಿಕೊಂಡ ಗಗನಸಖಿ! ಫ್ಯಾನ್ಸ್ ಏನಂದ್ರು ಗೊತ್ತಾ?


ಎರಡನೇ ಏಕದಿನ ಪಂದ್ಯದ ವೇಳೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾತನಾಡಿ, “ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದೆ. ಈ ಮೂಲಕ ಹೊಸಬರಿಗೆ ಅವಕಾಶ ನೀಡಿ, ವಿಶ್ವಕಪ್ ಗೂ ಮೊದಲು ಕೆಲವು ಯಾವ ಆಟಗಾರರು ಬೆಸ್ಟ್ ಎಂದು ನಿರ್ಧರಿಸಬಹುದು” ಅಂತಾ ಹೇಳಿದರು.


“ನಾವು ವಿಭಿನ್ನ ಆಟಗಾರರನ್ನು ಪ್ರಯತ್ನಿಸುತ್ತಿದ್ದೇವೆ. ಕೆಟ್ಟ ಸನ್ನಿವೇಶದಲ್ಲಿಯೂ ಸಹ ಈ ಹುಡುಗರಿಗೆ ಅವಕಾಶವನ್ನು ನೀಡಲು ಬಯಸಿದ್ದೇವೆ. ಇದು ಯಾವೆಲ್ಲಾ ಆಟಗಾರರು ಬೆಸ್ಟ್ ಎಂದು ನಿರ್ಧರಿಸಲು ನಮಗೆ ಅವಕಾಶ ನೀಡುತ್ತದೆ. ಏಷ್ಯಾಕಪ್‌ಗೂ ಮುನ್ನ ಈ ಮಾದರಿಯ ಸರಣಿಯಲ್ಲಿ ನಮಗೆ ಕೇವಲ 2-3 ಪಂದ್ಯಗಳಿವೆ” ಎಂದರು.


“ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮಗೆ ಹೆಚ್ಚಿನ ಉತ್ತರಗಳು ಸಿಗುವುದಿಲ್ಲ, ಆದರೆ ಗಾಯಗೊಂಡಿರುವ ನಮ್ಮ ಅನೇಕ ಆಟಗಾರರು NCA ಯಲ್ಲಿದ್ದಾರೆ ಮತ್ತು ಅವರ ಆಟದ ಬಗ್ಗೆ ಅನಿಶ್ಚಿತತೆ ಇದೆ ಎಂದು ನಿಮಗೆ ತಿಳಿದಿದೆ. ಅದಕ್ಕಾಗಿಯೇ ನಾವು ಇನ್ನೂ ಕೆಲವು ಆಟಗಾರರಿಗೆ ಅವಕಾಶ ನೀಡಲು ಬಯಸುತ್ತೇವೆ” ಎಂದರು.


ಇದನ್ನೂ ಓದಿ: IND vs WI 2ನೇ ಏಕದಿನದಲ್ಲಿ Team Indiaದ ಹೀನಾಯ ಸೋಲಿಗೆ ಈ 4 ಆಟಗಾರರೇ ಕಾರಣ!


ವೆಸ್ಟ್ ಇಂಡೀಸ್ ನಾಯಕ ಹೋಪ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಇದರ ನಂತರ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ 55 ಎಸೆತಗಳಲ್ಲಿ ಅಷ್ಟೇ ರನ್ ಗಳಿಸಿದರು ಮತ್ತು ಶುಭಮನ್ ಗಿಲ್ (34 ರನ್, 49 ಎಸೆತ) ಅವರೊಂದಿಗೆ ಮೊದಲ ವಿಕೆಟ್‌ಗೆ 90 ರನ್ ಸೇರಿಸುವ ಮೂಲಕ ಉತ್ತಮ ಆರಂಭ ನೀಡಿದರು. ಆದರೆ ಈ ಜೊತೆಯಾಟ ಮುರಿದ ತಕ್ಷಣ ಲಯ ಮುರಿದು ಭಾರತ ತಂಡ ಮುಂದಿನ 7.2 ಓವರ್ ಗಳಲ್ಲಿ 23 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡಿತು. ಮಳೆಯಿಂದಾಗಿ ಎರಡು ಬಾರಿ ಆಟಕ್ಕೆ ಅಡ್ಡಿಯಾಯಿತು ಆದರೆ ವೆಸ್ಟ್ ಇಂಡೀಸ್ ಬೌಲರ್‌ಗಳು ಅದ್ಭುತ ಪ್ರದರ್ಶನವನ್ನು ಮುಂದುವರೆಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ