Watch: ವಿಮಾನದಲ್ಲಿ ಧೋನಿ ಮಲಗಿದ್ದಾಗ ಕದ್ದು ಫೋಟೋ ತೆಗೆಸಿಕೊಂಡ ಗಗನಸಖಿ! ಫ್ಯಾನ್ಸ್ ಏನಂದ್ರು ಗೊತ್ತಾ?

MS Dhoni Cricket News: ಅನೇಕ ಸಂದರ್ಭದಲ್ಲಿ ಧೋನಿಯ ಸುಂದರ ಕ್ಷಣಗಳನ್ನು ಸೆರೆಹಿಡಿದು ಅದನ್ನು ಅಭಿಮಾನಿಗಳು ಶೇರ್ ಮಾಡುತ್ತಾ 'MSDians' ಎಂಬೆಲ್ಲಾ ಹೆಸರನ್ನಿಟ್ಟುಕೊಳ್ಳುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದು.

Written by - Bhavishya Shetty | Last Updated : Jul 30, 2023, 08:54 AM IST
    • ಧೋನಿ ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಕೆ ಮಾಡುವುದಿಲ್ಲ
    • ವಿಮಾನ ಪ್ರಯಾಣದ ಸಮಯದಲ್ಲಿ ಧೋನಿ ಪಕ್ಕದಲ್ಲಿ ನಿಂತು ಗಗನಸಖಿ ಫೋಟೋ ತೆಗೆಸಿಕೊಂಡಿದ್ದಾಳೆ
    • ಈ ಫೋಟೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ
Watch: ವಿಮಾನದಲ್ಲಿ ಧೋನಿ ಮಲಗಿದ್ದಾಗ ಕದ್ದು ಫೋಟೋ ತೆಗೆಸಿಕೊಂಡ ಗಗನಸಖಿ! ಫ್ಯಾನ್ಸ್ ಏನಂದ್ರು ಗೊತ್ತಾ? title=
MS Dhoni caught napping during flight

MS Dhoni Photo: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಪ್ರಸ್ತುತ ವಿಶ್ವದಾದ್ಯಂತ ಅತ್ಯಂತ ಆರಾಧ್ಯ ಕ್ರಿಕೆಟಿಗರಲ್ಲಿ ಒಬ್ಬರು ಎನ್ನಬಹುದು. ಧೋನಿಯನ್ನು ಒಮ್ಮೆಯಾದ್ರೂ ನೋಡುವ ಅವಕಾಶ ಸಿಗಲಿ ಎಂದು ಅದೆಷ್ಟೋ ಫ್ಯಾನ್ಸ್ ಬೇಡಿಕೊಳ್ಳುತ್ತಿರುತ್ತಾರೆ. ಒಂದು ಕ್ಷಣ ಅಂತಹ ಅವಕಾಶ ಸಿಕ್ಕರೆ ನೆನಪಿಗಾಗಿ ಫೋಟೋ ತೆಗೆದುಕೊಳ್ಳದೆ ಇರಲಾರರು. ಇದೀಗ ಗಗನಸಖಿಯೊಬ್ಬಳು ಅಂತಹದ್ದೇ ಕ್ಷಣವನ್ನು ಅನುಭವಿಸಿದ್ದಾಳೆ.

ಇದನ್ನೂ ಓದಿ: 2ನೇ ODIನಲ್ಲಿ ಸೋಲುಂಡ ಭಾರತ: 4 ವರ್ಷಗಳ ಬಳಿಕ Team India ಅನುಭವಿಸಿತು ಆ ಕೆಟ್ಟ ಕ್ಷಣ!

ಸಾಮಾನ್ಯವಾಗಿ ಧೋನಿ ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಕೆ ಮಾಡುವುದಿಲ್ಲ. ಕೂಲ್ ಕ್ಯಾಪ್ಟನ್ ಮಾಹಿ ಮೈದಾನದ ಹೊರತಾಗಿ, ಬೈಕ್ ಗಳ ಮೇಲೆ ಹೆಚ್ಚು ಕ್ರೇಜ್ ಹೊಂದಿದ್ದಾರೆ. ಇದರ ಜೊತೆಗೆ ತಮ್ಮ ಫಾರ್ಮ್ ಹೌಸ್ ನಲ್ಲಿ ಕಾಲ ಕಳೆಯುತ್ತಾರೆ ಎಂದು ಅನೇಕ ಮೂಲಗಳು ಹೇಳಿದ್ದುಂಟು.

ಅನೇಕ ಸಂದರ್ಭದಲ್ಲಿ ಧೋನಿಯ ಸುಂದರ ಕ್ಷಣಗಳನ್ನು ಸೆರೆಹಿಡಿದು ಅದನ್ನು ಅಭಿಮಾನಿಗಳು ಶೇರ್ ಮಾಡುತ್ತಾ 'MSDians' ಎಂಬೆಲ್ಲಾ ಹೆಸರನ್ನಿಟ್ಟುಕೊಳ್ಳುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದು. ಇತ್ತೀಚೆಗೆ, ವಿಮಾನ ಪ್ರಯಾಣದ ಸಮಯದಲ್ಲಿ ಧೋನಿ ಪಕ್ಕದಲ್ಲಿ ನಿಂತು ಗಗನಸಖಿ ಫೋಟೋ ತೆಗೆಸಿಕೊಂಡಿದ್ದಾಳೆ. ಆದರೆ ಇಲ್ಲಿ ಆ ಫೋಟೋ ತೆಗೆದಿದ್ದು ಧೋನಿ ಗೊತ್ತೇ ಇರಲಿಲ್ಲ. ಏಕೆಂದರೆ ಆ ಸಂದರ್ಭದಲ್ಲಿ ಅವರು ಮಲಗಿದ್ದರು.

ಈ ಫೋಟೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸಂತೋಷ ಹಂಚಿಕೊಂಡರೆ ಇನ್ನೂ ಕೆಲವರು ಗೌಪ್ಯತೆಗೆ ಅಡ್ಡಿಪಡಿಸಿದ್ದೀರಿ ಎಂದು ಕಿಡಿಕಾರಿದ್ದಾರೆ. ಜೊತೆಗೆ ಟೀಕಿಸಿದ್ದಾರೆ.

 

ನೆಟ್ಟಿಗರೊಬ್ಬರು ಹೀಗೆ ಬರೆದುಕೊಂಡಿದ್ದಾರೆ; “ಒಬ್ಬ ಅಭಿಮಾನಿಯಾಗಿ ನಾನು ಸಹ ಅವರನ್ನು ನೋಡಲು ಬಯಸುತ್ತೇನೆ, ಆದರೆ ಅವರ ಅನುಮತಿಯಿಲ್ಲದೆ ಅವರ ಪರ್ಸನಲ್ ಸ್ಪೇಸ್’ಗೆ ಅಡ್ಡಿಪಡಿಸಲು ಬಯಸುವುದಿಲ್ಲ. ದಯವಿಟ್ಟು ಹೀಗೆ ಮಾಡಬೇಡಿ” ಎಂದಿದ್ದಾರೆ.

ಮತ್ತೊಬ್ಬರು, “ಯಾರಾದರೂ ಗಗನಸಖಿಯರಿಗೆ ಹೆಚ್ಚು ವೃತ್ತಿಪರರಾಗಿರಲು ಮತ್ತು ಅವರ ಗೌಪ್ಯತೆಗೆ ಅನುಗುಣವಾಹಿ ನಡೆಯುವಂತೆ ಸೂಚಿಸಬಹುದೇ?” ಎಂದು ಹೇಳಿದ್ದಾರೆ.

ಇದನ್ನೂ ಓದಿ: IND vs WI 2ನೇ ಏಕದಿನದಲ್ಲಿ Team Indiaದ ಹೀನಾಯ ಸೋಲಿಗೆ ಈ 4 ಆಟಗಾರರೇ ಕಾರಣ!

ಇಂಡಿಯನ್ ಪ್ರೀಮಿಯರ್ ಲೀಗ್‌’ನ ಮತ್ತೊಂದು ಋತುವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಐದನೇ ಪ್ರಶಸ್ತಿಯನ್ನು ಎತ್ತಿ ಹಿಡಿದ ಧೋನಿ ಸದ್ಯ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಈ ಹಿನ್ನಡೆಯ ಹೊರತಾಗಿಯೂ 2011 ರ ವಿಶ್ವಕಪ್ ವಿಜೇತ ನಾಯಕ, ಇತ್ತೀಚೆಗೆ ತಮ್ಮದೇ ನಿರ್ಮಾಣ ಕಂಪನಿಯಾದ ಧೋನಿ ಎಂಟರ್ಟೈನ್ಮೆಂಟ್ ಪ್ರೈವೇಟ್ ಅನ್ನು ಪ್ರಾರಂಭಿಸುವ ಮೂಲಕ ಮನರಂಜನಾ ಜಗತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News