“ತಂಡದ ಹಿತದೃಷ್ಟಿಯಿಂದ ಈತನೇ ಟೆಸ್ಟ್’ನಲ್ಲಿ ವಿಕೆಟ್ ಕೀಪರ್ ಆಗಿ ಆಡಲಿದ್ದಾನೆ”: ಕೋಚ್ ದ್ರಾವಿಡ್ ಹೇಳಿಕೆ
Rahul Dravid on KL Rahul: ಟೆಸ್ಟ್ ಕ್ರಿಕೆಟ್’ನಲ್ಲಿ ಕೆಎಸ್ ಭರತ್ ಅವರ ಬ್ಯಾಟಿಂಗ್ ದುರ್ಬಲವಾಗಿದೆ. ಭಾರತೀಯ ತಂಡದ ನಿರ್ವಹಣೆಗೆ ಇಶಾನ್ ಕಿಶನ್ ರೂಪದಲ್ಲಿ ಮತ್ತೊಂದು ಆಯ್ಕೆ ಇತ್ತು. ಆದರೆ ಅವರು ತಮ್ಮ ಮಾನಸಿಕ ಆರೋಗ್ಯದ ಮೇಲೆ ಕೇಂದ್ರೀಕರಿಸಲು ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ.
Rahul Dravid on KL Rahul: ಟೆಸ್ಟ್ ಕ್ರಿಕೆಟ್’ನಲ್ಲಿ ವಿಕೆಟ್ ಕೀಪಿಂಗ್ ಮಾಡಲು ಕೆಎಲ್ ರಾಹುಲ್ ಸಿದ್ಧರಿದ್ದಾರೆ. ಭಾರತ ತಂಡದ ಹೊಸ ವಿಕೆಟ್ ಕೀಪರ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶವನ್ನು ಪಡೆಯಲಿದ್ದಾರೆ ಎಂದು ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭಾನುವಾರ ಹೇಳಿದ್ದಾರೆ.
ಇದನ್ನೂ ಓದಿ: “ಕೊಹ್ಲಿ ಈ ದಿನ ಕ್ರಿಕೆಟ್’ಗೆ ನಿವೃತ್ತಿ ಹೇಳಲಿದ್ದಾರೆ”- RCB ನಾಯಕ ಡುಪ್ಲೆಸಿಸ್ ಶಾಕಿಂಗ್ ಭವಿಷ್ಯ
ಟೆಸ್ಟ್ ಕ್ರಿಕೆಟ್’ನಲ್ಲಿ ಕೆಎಸ್ ಭರತ್ ಅವರ ಬ್ಯಾಟಿಂಗ್ ದುರ್ಬಲವಾಗಿದೆ. ಭಾರತೀಯ ತಂಡದ ನಿರ್ವಹಣೆಗೆ ಇಶಾನ್ ಕಿಶನ್ ರೂಪದಲ್ಲಿ ಮತ್ತೊಂದು ಆಯ್ಕೆ ಇತ್ತು. ಆದರೆ ಅವರು ತಮ್ಮ ಮಾನಸಿಕ ಆರೋಗ್ಯದ ಮೇಲೆ ಕೇಂದ್ರೀಕರಿಸಲು ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡದ ನಿರ್ವಹಣೆಗೆ ರಾಹುಲ್ ಅತ್ಯುತ್ತಮ ಆಯ್ಕೆಯಾಗಿದ್ದಾರೆ.
“ನಾನು ಇದೊಂದು ರೋಚಕ ಸವಾಲಾಗಿ ನೋಡುತ್ತೇನೆ. ವಿಭಿನ್ನವಾಗಿ ಏನನ್ನಾದರೂ ಮಾಡಲು ಇದು ಖಂಡಿತವಾಗಿಯೂ ಅವಕಾಶವಾಗಿದೆ. ಇಶಾನ್ ಕಿಶನ್ ಇಲ್ಲಿ ಇಲ್ಲದ ಕಾರಣ ಅವರಿಗೆ ಈ ಅವಕಾಶ ಸಿಕ್ಕಿದೆ. ನಾವು ಆಯ್ಕೆ ಮಾಡಲು ಇಬ್ಬರು ವಿಕೆಟ್ ಕೀಪರ್‌ಗಳನ್ನು ಹೊಂದಿದ್ದೇವೆ, ಅವರಲ್ಲಿ ರಾಹುಲ್ ಒಬ್ಬರು. ನಾವು ಅವರೊಂದಿಗೆ ಚರ್ಚಿಸಿದ್ದು, ಅವರಿಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ” ಎಂದು ದ್ರಾವಿಡ್ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್’ನಲ್ಲಿ ವಿಕೆಟ್ ಕೀಪಿಂಗ್’ನ ಸವಾಲು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಆದರೆ ರಾಹುಲ್ 50 ಓವರ್’ಗಳ ಮಾದರಿಯಲ್ಲಿ ಉತ್ತಮವಾಗಿ ಆಡಿದ್ದರಿಂದ ಇಲ್ಲಿಯೂ ನಿರೀಕ್ಷೆಗೆ ತಕ್ಕಂತೆ ಆಡಬಹುದು ಎಂಬುದು ನಮ್ಮ ವಿಶ್ವಾಸ ಎಂದು ದ್ರಾವಿಡ್ ಹೇಳಿದ್ದಾರೆ.
ಇದನ್ನೂ ಓದಿ: ಸ್ಟಾರ್ ಕ್ರಿಕೆಟಿಗ ದಿನೇಶ್ ಕಾರ್ತಿಕ್ 2ನೇ ಪತ್ನಿ ಇವರೇ… ಡಿಕೆ ಗೆಳೆಯನೊಂದಿಗೇ ಓಡಿಹೋಗಿದ್ದಳು ಮೊದಲ ಪತ್ನಿ!
ದ್ರಾವಿಡ್, “ಟೆಸ್ಟ್ ಕ್ರಿಕೆಟ್’ನಲ್ಲಿ ಅವರು ಹೆಚ್ಚಾಗಿ ವಿಕೆಟ್ ಕೀಪ್ ಮಾಡಿಲ್ಲ ಎಂದು ನಮಗೆ ತಿಳಿದಿದೆ. ಆದರೆ 50 ಓವರ್’ಗಳ ಕ್ರಿಕೆಟ್’ನಲ್ಲಿ ಸ್ಥಿರವಾಗಿ ಮಾಡುತ್ತಿದ್ದಾರೆ. ಕಳೆದ ಐದಾರು ತಿಂಗಳಲ್ಲಿ ಅವರು ಉತ್ತಮ ತಯಾರಿ ನಡೆಸಿದ್ದಾರೆ. ಇದು ಅವರಿಗೆ ಹೊಸ ಮತ್ತು ಆಕರ್ಷಕ ಸವಾಲಾಗಿದೆ” ಎಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ