IND vs SL 2023: ಹೊಸ ವರ್ಷದ ಸಂದರ್ಭದಲ್ಲಿ ಶ್ರೀಲಂಕಾ ತಂಡವು ಮೂರು ಪಂದ್ಯಗಳ T20 ಮತ್ತು ODI ಸರಣಿಯನ್ನು ಆಡಲು ಭಾರತಕ್ಕೆ ಬರುತ್ತಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿ ಹಾಗೂ ಏಕದಿನ ಸರಣಿಗಾಗಿ ಆಯ್ಕೆಗಾರರು ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದ್ದಾರೆ. ಆದರೆ ಶ್ರೀಲಂಕಾ ವಿರುದ್ಧದ ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಫ್ಲಾಪ್ ಆಟಗಾರನನ್ನು ಆಯ್ಕೆ ಮಾಡುವ ಮೂಲಕ ಆಯ್ಕೆಗಾರರು ದೊಡ್ಡ ಪ್ರಮಾದ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ODI ಸರಣಿಯಲ್ಲಿ ಟೀಂ ಇಂಡಿಯಾಕ್ಕೆ ಈ ಆಟಗಾರ ದೊಡ್ಡ ಸಮಸ್ಯೆ ಆಗಬಹುದು. ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಜನವರಿ 3 ರಿಂದ ಜನವರಿ 7 ರವರೆಗೆ ನಡೆಯಲಿದೆ. ಇದಾದ ಬಳಿಕ ಜನವರಿ 10ರಿಂದ ಜನವರಿ 15ರವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾದಲ್ಲಿ ನಿರಂತರ ವೈಫಲ್ಯ ಸಾಬೀತುಪಡಿಸಿದ ಕೆಎಲ್ ರಾಹುಲ್‌ಗೆ ಮತ್ತೊಮ್ಮೆ ಅವಕಾಶ ನೀಡಿದ್ದು ಆಯ್ಕೆಗಾರರು ಮಾಡಿದ ದೊಡ್ಡ ಪ್ರಮಾದ.


ಇದನ್ನೂ ಓದಿ: ಐಸಿಸಿ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶನವಾದ ಈ ಸ್ಟಾರ್ ಆಟಗಾರ..!


ಕೆಎಲ್ ರಾಹುಲ್ ಅವರ ಇತ್ತೀಚಿನ ಪ್ರದರ್ಶನವನ್ನು ನಾವು ನೋಡಿದರೆ, ಟೆಸ್ಟ್, ODI ಮತ್ತು T20 ಅಂತರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಅವರ ಪ್ರದರ್ಶನವು ತುಂಬಾ ಕಳಪೆಯಾಗಿದೆ. ಈ ಪ್ರದರ್ಶನದ ವೈಫಲ್ಯದಿಂದಾಗಿ, ಕೆಎಲ್ ರಾಹುಲ್ ಅವರನ್ನು ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಉಪನಾಯಕತ್ವದಿಂದ ಕೂಡ ತೆಗೆದುಹಾಕಲಾಗಿದೆ. ಇದೀಗ ಹಾರ್ದಿಕ್ ಪಾಂಡ್ಯ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಖಾಯಂ ಉಪನಾಯಕರಾಗಿದ್ದಾರೆ.


ಇತರೆ ಪ್ರತಿಭಾವಂತ ಆಟಗಾರರಿಗೆ ಅನ್ಯಾಯ!


ಕೆಎಲ್ ರಾಹುಲ್ ಕಳೆದ 10 ಏಕದಿನ ಇನ್ನಿಂಗ್ಸ್‌ಗಳಲ್ಲಿ 7, 12, 55, 9, 49, 1, 30, 73, 14 ಮತ್ತು 8 ರನ್ ಗಳಿಸಿದ್ದಾರೆ. KL ರಾಹುಲ್ 26 ಮಾರ್ಚ್ 2021 ರಂದು ಇಂಗ್ಲೆಂಡ್ ವಿರುದ್ಧ ಪುಣೆ ODI ಪಂದ್ಯದಲ್ಲಿ ಭಾರತಕ್ಕಾಗಿ ತನ್ನ ಕೊನೆಯ ODI ಶತಕವನ್ನು ಗಳಿಸಿದ್ದರು. ಆದರೆ ಭಾರತವು 6 ವಿಕೆಟ್‌ಗಳಿಂದ ಆ ಪಂದ್ಯವನ್ನು ಕಳೆದುಕೊಂಡಿತು. ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿರುವ ಕಾರಣ, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ಅವರಿಗೆ ಅವಕಾಶ ನೀಡುವುದು ತಪ್ಪು ನಿರ್ಧಾರ ಎಂದು ಸಾಬೀತುಪಡಿಸಬಹುದು ಮತ್ತು ಅವಕಾಶಕ್ಕಾಗಿ ಹೊರಗೆ ಕಾಯುತ್ತಿರುವ ಉಳಿದ ಪ್ರತಿಭಾವಂತ ಆಟಗಾರರಿಗೆ ಅನ್ಯಾಯವಾಗಬಹುದು.


ಕೆಎಲ್ ರಾಹುಲ್ ಬದಲಿಗೆ ಪೃಥ್ವಿ ಶಾ ಅವರಂತಹ ನಿರ್ಭೀತ ಬ್ಯಾಟ್ಸ್ ಮನ್ ಗೆ ಏಕದಿನ ತಂಡದಲ್ಲಿ ಅವಕಾಶ ನೀಡಬಹುದಿತ್ತು. ಸುಮಾರು ಎರಡು ವರ್ಷಗಳಿಂದ ಪೃಥ್ವಿ ಶಾಗೆ ಭಾರತದ ಯಾವುದೇ ಕ್ರಿಕೆಟ್ ತಂಡದಲ್ಲಿ ಆಡುವ ಅವಕಾಶ ಸಿಗುತ್ತಿಲ್ಲ. 23ರ ಹರೆಯದ ಪೃಥ್ವಿ ಶಾ ಅವರ ಬ್ಯಾಟಿಂಗ್‌ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಚಿತ್ರಣ ಗೋಚರಿಸುತ್ತದೆ ಎಂದು ಕ್ರಿಕೆಟ್ ಅಭಿಮಾನಿಗಳು ಅನೇಕ ಬಾರಿ ಹೇಳಿದ್ದುಂಟು. ಹೀಗಿರುವಾಗ ಟೀಂ ಇಂಡಿಯಾದಲ್ಲಿ ಈ ಆಟಗಾರನನ್ನು ಕಡೆಗಣಿಸಲಾಗುತ್ತಿದೆ.


ಇನ್ನು ಈಗಾಗಲೆ ರಾಹುಲ್‌ ರಿಂದ ODI ಮತ್ತು T20 ಉಪನಾಯಕತ್ವವನ್ನು ಕಸಿದುಕೊಂಡಿದ್ದು, ಅವರು ಶೀಘ್ರದಲ್ಲೇ ಉತ್ತಮವಾಗಿ ರನ್ ಗಳಿಸಲು ಪ್ರಾರಂಭಿಸದಿದ್ದರೆ ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಬಹುದು ಎಂಬ ಸೂಚನೆಯಾಗಿದೆ.


ಶ್ರೀಲಂಕಾ ವಿರುದ್ಧ ಭಾರತ ಏಕದಿನ ತಂಡ:


ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.


ಭಾರತ vs ಶ್ರೀಲಂಕಾ ಸರಣಿ ಪಂದ್ಯಗಳು:


ಭಾರತ vs ಶ್ರೀಲಂಕಾ ಟಿ20 ಸರಣಿ


ಮೊದಲ ಟಿ20 ಪಂದ್ಯ, ಜನವರಿ 3, ಸಂಜೆ 7.00, ಮುಂಬೈ


2ನೇ ಟಿ20 ಪಂದ್ಯ, ಜನವರಿ 5, ರಾತ್ರಿ 7.00, ಪುಣೆ


ಮೂರನೇ ಟಿ20 ಪಂದ್ಯ, ಜನವರಿ 7, ರಾತ್ರಿ 7.00, ರಾಜ್‌ಕೋಟ್


ಇದನ್ನೂ ಓದಿ: Ranji Trophy 2022-23: ಬಾಂಗ್ಲಾ ಪ್ರವಾಸದಲ್ಲಿ ಅವಕಾಶ ವಂಚಿತನಾದ ಈ ಆಟಗಾರ ರಣಜಿ ಟ್ರೋಫಿಯಲ್ಲಿ ಶತಕ ಸಿಡಿಸಿಯೇ ಬಿಟ್ಟ!!


ಭಾರತ vs ಶ್ರೀಲಂಕಾ ಏಕದಿನ ಸರಣಿ


ಮೊದಲ ODI, ಜನವರಿ 10, ಮಧ್ಯಾಹ್ನ 1.30, ಗುವಾಹಟಿ


ಎರಡನೇ ODI, ಜನವರಿ 12, ಮಧ್ಯಾಹ್ನ 1.30, ಕೋಲ್ಕತ್ತಾ


ಮೂರನೇ ODI, ಜನವರಿ 15, ಮಧ್ಯಾಹ್ನ 1.30, ತಿರುವನಂತಪುರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.