Ziva Dhoni : ಧೋನಿ ಮಗಳಿಗೆ ಜೆರ್ಸಿ ಗಿಫ್ಟ್‌ ಕೊಟ್ಟ ಮೆಸ್ಸಿ... ಜೀವಾ ಕ್ಯೂಟ್‌ ರಿಯಾಕ್ಷನ್‌ಗೆ ಫ್ಯಾನ್ಸ್‌ ಫಿದಾ..!

ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್‌ ಮಹೇಂದ್ರ ಸಿಂಗ್ ಧೋನಿ ಪುತ್ರಿ ಜೀವಾ ಧೋನಿಗೆ ಅರ್ಜೆಂಟೀನಾ ಫುಟ್‌ ಬಾಲ್‌ ಟೀಮ್‌ ಕ್ಯಾಪ್ಟನ್‌ ಲಿಯೊನೆಲ್‌ ಮೆಸ್ಸಿ ತಮ್ಮ ಜೆರ್ಸಿಯನ್ನು ಗಿಫ್ಟ್‌ ಆಗಿ ನೀಡಿದ್ದಾರೆ. ಫಿಫಾ ವಿಶ್ವಕಪ್ 2022 ಪಂದ್ಯದಲ್ಲಿ ತಾವು ಧರಿಸಿದ್ದ ಶರ್ಟ್‌ನ್ನು ಸಹಿ ಸಮೇತ ಜೀವಾಗೆ ಉಡುಗೂರೆಯಾಗಿ ನೀಡಿದ್ದು, ಈ ಕುರಿತು ಜೀವಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಒಂದನ್ನು ಹಾಕಿದ್ದಾರೆ.

Written by - Krishna N K | Last Updated : Dec 28, 2022, 10:47 AM IST
  • ಧೋನಿ ಪುತ್ರಿ ಜೀವಾಗೆ ಲಿಯೊನೆಲ್‌ ಮೆಸ್ಸಿ ತಮ್ಮ ಜೆರ್ಸಿಯನ್ನು ಗಿಫ್ಟ್‌ ಆಗಿ ನೀಡಿದ್ದಾರೆ.
  • ಈ ಕುರಿತು ಜೀವಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಒಂದನ್ನು ಹಾಕಿದ್ದಾರೆ.
  • ಜಿವಾ ಸ್ಮೈಲ್‌ ಮಾಡಿರುವ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
Ziva Dhoni : ಧೋನಿ ಮಗಳಿಗೆ ಜೆರ್ಸಿ ಗಿಫ್ಟ್‌ ಕೊಟ್ಟ ಮೆಸ್ಸಿ... ಜೀವಾ ಕ್ಯೂಟ್‌ ರಿಯಾಕ್ಷನ್‌ಗೆ ಫ್ಯಾನ್ಸ್‌ ಫಿದಾ..! title=

Messi gift to Ziva Dhoni : ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್‌ ಮಹೇಂದ್ರ ಸಿಂಗ್ ಧೋನಿ ಪುತ್ರಿ ಜೀವಾ ಧೋನಿಗೆ ಅರ್ಜೆಂಟೀನಾ ಫುಟ್‌ ಬಾಲ್‌ ಟೀಮ್‌ ಕ್ಯಾಪ್ಟನ್‌ ಲಿಯೊನೆಲ್‌ ಮೆಸ್ಸಿ ತಮ್ಮ ಜೆರ್ಸಿಯನ್ನು ಗಿಫ್ಟ್‌ ಆಗಿ ನೀಡಿದ್ದಾರೆ. ಫಿಫಾ ವಿಶ್ವಕಪ್ 2022 ಪಂದ್ಯದಲ್ಲಿ ತಾವು ಧರಿಸಿದ್ದ ಶರ್ಟ್‌ನ್ನು ಸಹಿ ಸಮೇತ ಜೀವಾಗೆ ಉಡುಗೂರೆಯಾಗಿ ನೀಡಿದ್ದು, ಈ ಕುರಿತು ಜೀವಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಒಂದನ್ನು ಹಾಕಿದ್ದಾರೆ.

ಹೌದು.. ಮಹೆಂದ್ರ ಸಿಂಗ್‌ ಧೋನಿ ಅವರಿಗೆ ಕ್ರಿಕೆಟ್ ಅಷ್ಟೇ ಫುಟ್ಬಾಲ್ ಬಗ್ಗೆಯೂ ಬಹಳಷ್ಟು ಒಲವು ಇದೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಅಲ್ಲದೆ, ಬಾಲ್ಯದಲ್ಲಿ ದೋನಿ ಬ್ಯಾಟ್‌ ಹಿಡಿಯುವ ಮೊದಲು ಫುಟ್‌ಬಾಲ್‌ ತರಬೇತಿ ಪಡೆದಿದ್ದರು. ಅವರಿಗೆ ಗೋಲ್‌ ಕೀಪರ್‌ ಆಗ್ಬೇಕು ಅಂತ ದೊಡ್ಡ ಆಸೆ ಇತ್ತು. ಅಲ್ಲದೆ, ಕ್ರಿಕೆಟಿಗರಾದ ನಂತರವೂ, ಧೋನಿ ಫುಟ್ಬಾಲ್ ಪಂದ್ಯಗಳಿಗೆ ಹಾಜರಾಗುವ ಮೂಲಕ ಆಟದ ಮೇಲಿನ ಪ್ರೀತಿಯನ್ನು ಇಂದಿಗೂ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ ವಿರುದ್ಧದ ಟಿ20 ಗೆ ಹಾರ್ದಿಕ್ ಪಾಂಡ್ಯ, ಏಕದಿನ ಸರಣಿಗೆ ರೋಹಿತ್ ಸಾರಥ್ಯ

ಅಲ್ಲದೆ, ಒಮ್ಮೆ ಸಂದರ್ಶನ ಒಂದರಲ್ಲಿ ಧೋನಿಗೆ ತಮ್ಮ ನೆಚ್ಚಿನ ಫುಟ್ಬಾಲ್ ಆಟಗಾರ ಯಾರು? ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಕ್ಯಾಪ್ಟನ್‌ ಕೂಲ್‌, ಜಿದಾನೆ ಮತ್ತು ಮೆಸ್ಸಿಗೆ ಅಂತ ಉತ್ತರಿಸುತ್ತಿದ್ದರು. ಧೋನಿಗೆ ಫುಟ್ಬಾಲ್ ಮತ್ತು ಮೆಸ್ಸಿ ಬಗ್ಗೆ ತುಂಬಾ ಗೌರವವಿದೆ. ಅದೇ ರೀತಿ ಧೋನಿ ಪುತ್ರಿ 7 ವರ್ಷದ ಜೀವಾಗೆ ಮೆಸ್ಸಿ ಕಂಡ್ರೆ ತುಂಬಾ ಪ್ರೀತಿ, ಅವಳು ಸಹ ಮೆಸ್ಸಿ ಕಟ್ಟಾಭಿಮಾನಿ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಫಿಫಾ ಫುಟ್ಬಾಲ್ ವಿಶ್ವಕಪ್‌ ನೋಡಲು ಧೋನಿ ಕತಾರ್‌ಗೆ ತೆರಳಿದ್ದರು. ಈ ವೇಳೆ ಮೆಸ್ಸಿಯಿಂದ ಜೀವಾ ವಿಶೇಷ ಉಡುಗೊರೆ ಪಡೆದಿದ್ದಾರೆ.

ಮೆಸ್ಸಿ ತನ್ನ ಅರ್ಜೆಂಟೀನಾ ಜೆರ್ಸಿಗೆ ಪಾರಾ ಜಿವಾ ಎಂದು ಬರೆದು ಸಹಿ ಹಾಕಿ ಗಿಫ್ಟ್‌ ನೀಡಿದ್ದಾರೆ. ಇದೀಗ ಮೆಸ್ಸಿ ಜೆರ್ಸಿಯನ್ನು ಹಾಕಿಕೊಂಡು ಕ್ಯೂಟಾಗಿ ಸ್ಮೈಲ್‌ ಮಾಡಿ ಕ್ಯಾಮೆರಾಗೆ ಜೀವಾ ಪೋಸ್‌ ಕೊಟ್ಟಿರುವ ಫೋಟೋಸ್‌ ಅನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋ ನೋಡಿದ ಧೋನಿ ಫ್ಯಾನ್ಸ್‌ ಸರ್ಪ್ರೈಸ್‌ ಆಗಿದ್ದಾರೆ. "ತಂದೆಯಂತೆ ಮಗಳು" ಎಂಬ ಶೀರ್ಷಿಕೆಯೊಂದಿಗೆ ಮೆಸ್ಸಿ ಜೆರ್ಸಿಯನ್ನು ಧರಿಸಿ ಜಿವಾ ಸ್ಮೈಲ್‌ ಮಾಡಿರುವ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News