Commonwealth Games 2022: ಕುಸ್ತಿಯಲ್ಲಿ ಭಾರತಕ್ಕೆ 3 ಚಿನ್ನ, 1 ಬೆಳ್ಳಿ
ಕಾಮನ್‌ವೆಲ್ತ್ ಕ್ರೀಡಾಕೂಟದ ಅಖಾಡದಲ್ಲಿ ಭಾರತೀಯ ಕುಸ್ತಿಪಟುಗಳು ಪದಕ ಬೇಟೆಯಾಡಿದ್ದು, 3 ಚಿನ್ನ ಮತ್ತು 1 ಬೆಳ್ಳಿ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕುಸ್ತಿ ಪಟುಗಳು ದೇಶವೇ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ. ಕುಸ್ತಿ ಅಖಾಡದಲ್ಲಿ ಭಾರತದ ಕೊರಳಿಗೆ 3 ಚಿನ್ನ ಹಾಗೂ 1 ಬೆಳ್ಳಿ ಸಿಕ್ಕಿದೆ. ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಮತ್ತು ದೀಪಕ್ ಪೂನಿಯಾ ಚಿನ್ನ ಗೆದ್ದರೆ, ಅನ್ಶು ಮಲಿಕ್ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಬಜರಂಗ್ ಪೂನಿಯಾಗೆ ಚಿನ್ನ
ಬಜರಂಗ್ ಪೂನಿಯಾ ಕೆನಡಾದ ಲಾಕ್ಲೆನ್ ಮೆಕ್‌ಲೀನ್ ಎದುರು 9-2 ಅಂಕಗಳ ಅಂತರದಿಂದ ಗೆಲುವು ಸಾಧಿಸಿ ಚಿನ್ನಕ್ಕೆ ಮುತ್ತಿಕ್ಕಿದರು. 28 ವರ್ಷದ ಬಜರಂಗ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಜಾರ್ಜ್ ರಾಮ್ ವಿರುದ್ದ 10-0 ರಲ್ಲಿ ಗೆಲುವು ಸಾಧಿಸಿ ಫೈನಲ್‍ಗೆ ಎಂಟ್ರಿ ಕೊಟ್ಟಿದ್ದರು.
ಇದನ್ನೂ ಓದಿ: ಕೆ.ಎಲ್.ರಾಹುಲ್ ಟೀಮ್ ಇಂಡಿಯಾಗೆ ಅಗತ್ಯವಿಲ್ಲ ಎಂದ್ರಾ ಈ ಆಟಗಾರ...!
ಸಾಕ್ಷಿ ಮಲಿಕ್ ‘ಚಿನ್ನ’ದ ಸಾಧನೆ
Virat Kohli : ಕೊಹ್ಲಿ ನಾಯಕತ್ವ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಬಿಸಿಸಿಐ ಅಧಿಕಾರಿ!
ಅನ್ಶು ಮಲಿಕ್ ರಜತ ಸಾಧನೆ
ರಜತ ಸಾಧನೆ ಮಾಡಿದರು. ಫೈನಲ್ ಪಂದ್ಯದಲ್ಲಿ ನೈಜೀರಿಯದ ಒಡುನಯೊ ಅಡೆಕುರೆಯೊ ಎದುರು 3-7 ಅಂಕಗಳ ಅಂತರದಲ್ಲಿ ಸೋತ ಅನ್ಶು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಸಾಧನೆ ಮಾಡಿದ್ದ ಅನ್ಶು ಕಾಮನ್‌ವೆಲ್ತ್ ಕ್ರೀಡಾಕೂಟ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಚಿನ್ನಕ್ಕೆ ಮುತ್ತಿಕ್ಕುವ ಅವಕಾಶದಿಂದ ವಂಚಿತರಾದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.