ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಚಾಲನೆಗೆ ಇನ್ನೂ ಬೆರಳಣಿಕೆ ದಿನಗಳು ಬಾಕಿ ಇರುವ ಬೆನ್ನಲ್ಲೇ ಈಗ ಮುಂಬೈನಲ್ಲಿರುವ ವಾಂಖೆಡೆ ಕ್ರೀಡಾಂಗಣದಲ್ಲಿನ ಸಿಬ್ಬಂದಿಗೆ ಈಗ ಕೊರೊನಾ ಇರುವುದು ಧೃಢಪಟ್ಟಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ - IPL 2021: ಈ ಋತುವಿನಲ್ಲಿ ಒಂದೇ ಒಂದು ಪಂದ್ಯ ಆಡದಿದ್ದರೂ Shreyas Iyerಗೆ ಸಿಗುತ್ತೆ ಸಂಭಾವನೆ


ಕ್ರೀಡಾಂಗಣದಲ್ಲಿನ ಗ್ರೌಂಡ್‌ಸ್ಟಾಫ್ ಗೆ COVID-19 ಗೆ ಧೃಢಪಟ್ಟಿದೆ ಈಗ ಅವರು ಇತರ ಸಂಪರ್ಕಕ್ಕೂ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಾರಿಯ ಐಪಿಎಲ್ ರಲ್ಲಿ ವಾಂಖೆಡೆ ಕ್ರೀಡಾಂಗಣವು 10 ಪಂದ್ಯಗಳನ್ನು ಆಯೋಜಿಸಲು ಸಜ್ಜಾಗಿದೆ. ವಾಂಖೆಡೆನಲ್ಲಿ ಮೊದಲ ಪಂದ್ಯ ಏಪ್ರಿಲ್ 10 ರಂದು ನಡೆಯಲಿದ್ದು, ಕಳೆದ ವರ್ಷದ ಫೈನಲಿಸ್ಟ್‌ಗಳಾದ ದೆಹಲಿ ಕ್ಯಾಪಿಟಲ್ಸ್ ಮೂರು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.


ಐಪಿಎಲ್ 2021 ಏಪ್ರಿಲ್ 9 ರಂದು ಪ್ರಾರಂಭವಾಗಲಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಚೆನ್ನೈನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಖಾಮುಖಿಯಾಗಲಿವೆ.ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ 2020 ರ ಋತುವಿನಲ್ಲಿ ಯುಎಇಗೆ ತೆರಳಿದ ನಂತರ ಐಪಿಎಲ್ ಈ ವರ್ಷ ಭಾರತಕ್ಕೆ ಮರಳುತ್ತಿದೆ.


ಇದನ್ನೂ ಓದಿ - WATCH: ಪಂದ್ಯದ ಚಿತ್ರಣವನ್ನೇ ಬದಲಿಸಿದ ವಿರಾಟ್ ಕೊಹ್ಲಿ ಹಿಡಿದ ಆ ಕ್ಯಾಚ್..!


ಐಪಿಎಲ್ 2020 ದುಬೈ, ಶಾರ್ಜಾ ಮತ್ತು ಅಬುಧಾಬಿಯಾದ್ಯಂತ ನಡೆಯಿತು, ಆಗ ಮುಂಬೈ ಇಂಡಿಯನ್ಸ್ ದಾಖಲೆಯ ಐದನೇ ಪ್ರಶಸ್ತಿಯನ್ನು ಗಳಿಸಿತು.ಕರೋನವೈರಸ್ ನ್ನು ಗಮನದಲ್ಲಿಟ್ಟುಕೊಂಡು ಈ ವರ್ಷದ ಐಪಿಎಲ್ ಅನ್ನು ಆರು ನಗರಗಳಲ್ಲಿ ನಿಗದಿಪಡಿಸಲಾಗಿದೆ. ಪಂದ್ಯಾವಳಿ ಮುಂಬೈ, ಚೆನ್ನೈ, ಬೆಂಗಳೂರು, ಕೋಲ್ಕತಾ, ದೆಹಲಿ ಮತ್ತು ಅಹಮದಾಬಾದ್‌ನಾದ್ಯಂತ ನಡೆಯಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.